Short News

ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!

ಗಮನ ಸೆಳೆದ ಕರುಣಾನಿಧಿ ಅವರ ಶವ ಪೆಟ್ಟಿಗೆ ಮೇಲಿನ ಸಾಲು!

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ವಿಧಿವಶರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ರಾಜಾಜಿ ಹಾಲ್‌ನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಕರುಣಾನಿಧಿ ಪಾರ್ಥಿವ ಶರೀರ ಇರುವ ಪೆಟ್ಟಿಗೆ ಮೇಲೆ ಬರೆದ ಸಾಲು ಗಮನ ಸೆಳೆಯುತ್ತಿದೆ. 5ಬಾರಿ ಮುಖ್ಯಮಂತ್ರಿಯಾಗಿ, 13ಬಾರಿ ಶಾಸಕರಾಗಿ ಕರುಣಾನಿಧಿ ಜನರಿಗೊಸ್ಕರ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಸುಮಾರು 60ವರ್ಷಗಳ ಕಾಲ ಸಕ್ರಿಯ ರಾಜಕಾರಣವನ್ನು ಮಾಡಿದ್ದಾರೆ. ಶವ ಪೆಟ್ಟಿಗೆಯ ಒಂದು ಕಡೆ 'A person who continued to work without rest, now takes rest' written on the coffin of' ಎಂದು ತಮಿಳಿನಲ್ಲಿ ಬರೆಯಲಾಗಿದೆ.
ಪೊಲೀಸ್ ನೇಮಕಾತಿ... ಇಂದೇ ಅರ್ಜಿ ಸಲ್ಲಿಸಿ

ಪೊಲೀಸ್ ನೇಮಕಾತಿ... ಇಂದೇ ಅರ್ಜಿ ಸಲ್ಲಿಸಿ

ಇಂಡೋ- ಟಿಬೇಟನ್ ಬಾರ್ಡರ್ ಪೊಲೀಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 3, 2018 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆ.4, 2018 ರಿಂದ ಪ್ರಾರಂಭವಾಗಿ ಅಕ್ಟೋಬರ್ 3.2018 ರೊಳಗೆ ನಡೆಯಲಿದೆ. ಕೊನೆಯ ಗಳಿಗೆಯ ರಶ್ ತಪ್ಪಿಸಲು ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಬಹುದಾಗಿದೆ.
ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ 'ಗೂಗಲ್' ಮನವಿ!

ಗುಡ್‌ಮಾರ್ನಿಂಗ್ ಮೆಸೇಜ್‌ ಕಳುಹಿಸದಂತೆ ಭಾರತೀಯರಿಗೆ 'ಗೂಗಲ್' ಮನವಿ!

ಇದ್ದಕ್ಕಿದ್ದಂತೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ನಿಷ್ಕ್ರೀಯವಾಗುವ, ಹ್ಯಾಂಗ್ ಆಗುವ ದೂರುಗಳು ಗೂಗಲ್ ಕಂಪೆನಿಗೆ ಯಾವಾಗಲೂ ಬರುತ್ತಿದ್ದವು. ಈ ಕುರಿತು ಸಂಶೋಧನೆ ನಡೆಸಲು ಮುಂದಾದ ಗೂಗಲ್ ಗುರುತಿಸಿದ್ದು ಭಾರತೀಯರು ಸೇರಿ ವಿಶ್ವದೆಲ್ಲೆಡೆ ಹೆಚ್ಚು ಬಳಕೆಯಾಗುತ್ತಿದ್ದ ಸಾಮೂಹಿಕ ಮೆಸೇಂಜಿಂಗ್ ವ್ಯವಸ್ಥೆ. ಹೌದು, ಗುಡ್‌ಮಾರ್ನಿಂಗ್, ಗುಡ್‌ನೈಟ್ ಮೆಸೇಜ್‌ಗಳನ್ನು ಪ್ರತಿದಿನವೂ ಚಾಚುತಪ್ಪದೆ ಕಳುಹಿಸುವವರಿಂದಾಗಿ ಇಡೀ ಆಂಡ್ರಾಯ್ಡ್ ಫೋನ್‌ಗಳೇ ಹ್ಯಾಂಗ್ ಆಗು ತೊಂದರೆಯನ್ನು ಎದುರಿಸುತ್ತಿವೆ. ವಿಶ್ವದಲ್ಲಿ ಭಾರತೀಯರೇ ಹೆಚ್ಚು ಸಾಮೂಹಿಕ ಮೆಸೇಂಜಿಂಗ್ ವ್ಯವಸ್ಥೆಯ ಅಡಿಯಲ್ಲಿ ಬಂದಿದ್ದಾರೆ ಎಂದು ಗೂಗಲ್ ಸಹ ಸ್ಪಷ್ಟಪಡಿಸಿದೆ.
ಜಿಯೋ 52ರ ಯೋಜನೆ ವಿರುದ್ಧವಾಗಿ ಏರ್ ಟೆಲ್ 47ರ ಪ್ಯಾಕ್

ಜಿಯೋ 52ರ ಯೋಜನೆ ವಿರುದ್ಧವಾಗಿ ಏರ್ ಟೆಲ್ 47ರ ಪ್ಯಾಕ್

ಕಡಿಮೆ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ದರ ಸಮರದಲ್ಲಿ ಜಿಯೋ, ವೋಡಾಫೋನ್ ವಿರುದ್ಧ ಏರ್ ಟೆಲ್ 47 ರುಪಾಯಿಗಳ ಪ್ಯಾಕೇಜ್ ಬಿಡುಗಡೆ ಮಾಡಿದೆ. ಈ 47 ರೂಪಾಯಿಗಳ ಯೋಜನೆಯು ಜಿಯೋದ 52 ರೂಪಾಯಿ ಹಾಗೂ ವೋಡಾಫೋನ್ 47 ರೂಪಾಯಿ ಯೋಜನೆ ಪೈಪೋಟಿ ನೀಡಲಿದೆ. ಏರ್ ಟೆಲ್ ನ 47ರುಪಾಯಿ ಯೋಜನೆಯು 28 ದಿನಗಳ ಕಾಲ ವ್ಯಾಲಿಡಿಟಿ ಹೊಂದಿದೆ. 150 ನಿಮಿಷಗಳ ಸ್ಥಳೀಯ, ಎಸ್ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ ಕಾಲ್ಸ್ ಲಭ್ಯವಿದೆ. 50 ಎಸ್ ಎಂ ಎಸ್(ಸ್ಥಳೀಯ ಪ್ಲಸ್ ಎಸ್ಟಿಡಿ) ಹಾಗೂ 500 ಎಂಬಿ 2ಜಿ/3ಜಿ /4ಜಿ ಡೇಟಾ ಸಿಗಲಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more