Short News

ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ: ಎಂಟು ಮಂದಿ ಸಜೀವ ದಹನ

ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ: ಎಂಟು ಮಂದಿ ಸಜೀವ ದಹನ

ಅಮೆರಿಕದ ಷಿಕಾಗೋದಲ್ಲಿನ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಆರು ಮಕ್ಕಳೂ ಸೇರಿದಂತೆ ಎಂಟು ಮಂದಿ ಬಲಿಯಾಗಿದ್ದಾರೆ. ಇನ್ನು ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಬೆಂಕಿ ನಂದಿಸುವ ಸಾಹಸದಲ್ಲಿ ಅಗ್ನಿಶಾಮಕ ಸಿಬ್ಬಂದಿಯೊಬ್ಬರಿಗೂ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಷಿಕಾಗೋ ಅಗ್ನಿಶಾಮಕದ ದಳದ ವಕ್ತಾರ ಲ್ಯಾರಿ ಮೆರಿಟ್ ತಿಳಿಸಿದ್ದಾರೆ. ಮೃತಪಟ್ಟ ಮಕ್ಕಳಲ್ಲಿ ಒಂದು ನವಜಾತ ಶಿಶುವೂ ಸೇರಿದೆ. ಮೃತರ ವಿವರಗಳನ್ನು ಹಾಗೂ ಘಟನೆಗೆ ಕಾರಣ ಏನೆಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಸೆ.24ರೊಳಗೆ ಗುಂಡಿ ಮುಚ್ಚಿ : ಹೈಕೋರ್ಟ್ ಡೆಡ್ ಲೈನ್

ಸೆ.24ರೊಳಗೆ ಗುಂಡಿ ಮುಚ್ಚಿ : ಹೈಕೋರ್ಟ್ ಡೆಡ್ ಲೈನ್

ಬೆಂಗಳೂರಿನಲ್ಲಿ ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ಹೈಕೋರ್ಟ್ ಬಿಬಿಎಂಪಿಗೆ ಮೂರು ದಿನಗಳ ಗಡುವು ನೀಡಿದೆ. ಸೆ.24ರೊಳಗೆ ಒಂದೇ ಒಂದು ರಸ್ತೆಗುಂಡಿ ಕಾಣಿಸಬಾರದು ಎಂದು ಸಿಜೆ ದಿನೇಶ್ ಮಹೇಶ್ವರಿ ತಾಕೀತು ಮಾಡಿದ್ದಾರೆ, ಬುಧವಾರ ಸಂಜೆಯಿಂದ ಇಲ್ಲಿಯವರೆಗೆ 899ಗುಂಡಿಗಳನ್ನು ಮುಚ್ಚಲಾಗಿದೆ, ಇನ್ನೂ 2,172ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಸ್ತೆಗುಂಡಿಗಳ ಕುರಿತಂತೆ ಬುಧವಾರ ನಡೆದಿದ್ದ ವಿಚಾರಣೆಯಲ್ಲಿ ರಸ್ತೆಗುಂಡಿಗಳ ಬಗ್ಗೆ ಮೆಷರ್ ಮೆಂಟ್ ಪುಸ್ತಕ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿ ಪರ ವಕೀಲರು ಮಾಡಿದ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿತ್ತು.
ಒಂಟಿ ಕತ್ತೆಗೆ ಹೆಣ್ಣು ಹುಡುಕಿ ಮದುವೆ ಮಾಡಿಸಿದ ಗ್ರಾಮಸ್ಥರು !

ಒಂಟಿ ಕತ್ತೆಗೆ ಹೆಣ್ಣು ಹುಡುಕಿ ಮದುವೆ ಮಾಡಿಸಿದ ಗ್ರಾಮಸ್ಥರು !

ನಂಜನಗೂಡು ತಾಲೂಕಿನ ಹುರಾ ಗ್ರಾಮದಲ್ಲಿ ಒಂಟಿಯಾಗಿದ್ದ ಕತ್ತೆಗೆ ಮದುಗೆ ಮಾಡಿಸಿ ಗ್ರಾಮಸ್ಥರು ಗಮನ ಸೆಳೆದಿದ್ದಾರೆ.ಕಳೆದ ಎರಡು ವರ್ಷಗಳಿಂದ ಗ್ರಾಮದಲ್ಲಿ ಒಂಟಿಯಾಗಿ ಕತ್ತೆಯೊಂದು ಸಂಚರಿಸುತ್ತಿತ್ತು. ಇದನ್ನು ನೋಡಿದ ಗ್ರಾಮಸ್ಥರು ಅದಕ್ಕೆ ಜೋಡಿಯಾಗಿ ಹೆಣ್ಣು ಕತ್ತೆಯೊಂದನ್ನು ಹುಡುಕಿ ತಂದು ಅದ್ಧೂರಿಯಾಗಿ ಮದುವೆ ಮಾಡಿ ಮುಗಿಸಿದ್ದಾರೆ. ಇನ್ನೂ ಕತ್ತೆಗಳ ವಿಶೇಷ ಮದುವೆಗಾಗಿ ಗ್ರಾಮದಲ್ಲಿ ಎಲ್ಲರಿಗೂ ವಿಶೇಷ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ದೇಶದಲ್ಲಿ ವಾಟ್ಸಪ್ ನಿಷೇಧ, ಕೇಂದ್ರದ ಚಿಂತನೆ?

ದೇಶದಲ್ಲಿ ವಾಟ್ಸಪ್ ನಿಷೇಧ, ಕೇಂದ್ರದ ಚಿಂತನೆ?

ದೇಶದಲ್ಲಿ ವಾಟ್ಸಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿದೆ. ಈ ರೀತಿಯ ಸುದ್ದಿಗಳ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್ ಗೆ ಸೂಚನೆ ನೀಡಿದೆ. ಮತ್ತು ಅದಕ್ಕೆ ತಪ್ಪಿದಲ್ಲಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಬಹುದು ಎಂದು ವಾಟ್ಸಪ್ ಗೆ ಎಚ್ಚರಿಸಿದೆ. ಆದರೆ ಕೇಂದ್ರದ ಬೇಡಿಕೆಗೆ ವಾಟ್ಸಪ್ ಸಮ್ಮತಿ ಸೂಚಿಸಿಲ್ಲ, ಬದಲಾಗಿ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಅದನ್ನು ಮೀರಲಾಗದು ಎಂದಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more