Short News

ಅಮೆರಿಕಾದ ಧ್ವಜವನ್ನು ತಪ್ಪಾಗಿ ಚಿತ್ರಿಸಿ ಟೀಕೆ ಗುರಿಯಾದ ಟ್ರಂಪ್

ಅಮೆರಿಕಾದ ಧ್ವಜವನ್ನು ತಪ್ಪಾಗಿ ಚಿತ್ರಿಸಿ ಟೀಕೆ ಗುರಿಯಾದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ರಾಷ್ಟ್ರ ಧ್ವಜ ಚಿತ್ರಿಸುವ ವಿಚಾರದಲ್ಲಿ ನಗೆಪಾಟಲಿಗೀಡಾಗಿದ್ದಾರೆ. ಹಳೆಯ ವೈಭವವನ್ನು ನೆನಪಿಸುವಂತೆ ತೋರುವ ಅಮೆರಿಕಾ ಧ್ವಜ ವಿಶ್ವದಲ್ಲಿ ಅತಿ ಸುಲಭವಾಗಿ ಗುರುತಿಸಬಹುದೆಂಬ ಮಾತಿದೆ. ಆದರೆ ಅಮೆರಿಕಾ ಅಧ್ಯಕ್ಷರೇ ಧ್ವಜವನ್ನು ತಪ್ಪಾಗಿ ಅರಿತಂತಿದೆ ಎಂದು ಸಾರ್ವಜನಿಕರು ಟ್ವೀಟ್ ಮಾಡಿದ್ದಾರೆ. ಓಹಿಯೋದಲ್ಲಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಮಕ್ಕಳೊಂದಿಗೆ ಬೆರೆತಿದ್ದ ಸಂದರ್ಭದಲ್ಲಿ ಧ್ವಜದ ಕಲರಿಂಗ್ ಮಾಡಿದ್ದಾರೆ. ಈ ವೇಳೆ ತಮ್ಮ ರಾಷ್ಟ್ರದ ಧ್ವಜದ ಬಣ್ಣವನ್ನು ತುಂಬುವ ಬದಲು ಬೇರೆ ಬಣ್ಣ ತುಂಬಿದ್ದಾರೆ.
ವಿಂಡೋಸ್‌ನಲ್ಲಿ ಯಾರಿಗೂ ಕಾಣದ ಫೋಲ್ಡರ್ ಸೃಷ್ಟಿಸಬಹುದು..! ಹೇಗೆ ಗೊತ್ತಾ..?

ವಿಂಡೋಸ್‌ನಲ್ಲಿ ಯಾರಿಗೂ ಕಾಣದ ಫೋಲ್ಡರ್ ಸೃಷ್ಟಿಸಬಹುದು..! ಹೇಗೆ ಗೊತ್ತಾ..?

ಪ್ರತಿಯೊಬ್ಬರ ಸಿಸ್ಟಮ್ ನಲ್ಲೂ ತಮ್ಮನ್ನ ಹೊರತು ಪಡಿಸಿ ಇತರರು ನೋಡಬಾರದು ಎಂದುಕೊಳ್ಳುವ ಕೆಲವು ಪರ್ಸನಲ್ ಫೈಲ್ ಗಳಿರುತ್ತದೆ. ಆ ಫೈಲ್ ಗಳನ್ನು ಆದಷ್ಟು ಗುಪ್ತವಾಗಿ ಇಟ್ಟುಕೊಳ್ಳಬೇಕು ಎಂದು ಪ್ರಯತ್ನಿಸುತ್ತೇವೆ. ನಿಮ್ಮ ವಿಂಡೋಸ್ ಓಎಸ್ ಮೂಲಕ ಇದನ್ನು ಸಾಧಿಸಲು ಸಾಧ್ಯವಿದೆ. ಹೌದು ವಿಂಡೋಸ್ ನಲ್ಲಿ ನಿಮ್ಮ ಫೋಲ್ಡರ್ ಗಳನ್ನು ವಿಸಿಬಲ್ ಮತ್ತು ಇನ್ ವಿಸಿಬಲ್ ಮಾಡುವುದಕ್ಕೆ ಅವಕಾಶವಿರುತ್ತದೆ. ಆ ಮೂಲಕ ನಿಮ್ಮ ಪರ್ಸನಲ್ ದಾಖಲಾತಿಗಳನ್ನು ನಿಮಗೆ ಮಾತ್ರ ಕಾಣುವಂತೆ ಇಟ್ಟುಕೊಳ್ಳಲು ಸಹಾಯವಾಗುತ್ತದೆ.

ಭಾರತೀಯ ಮಾರುಕಟ್ಟೆಗೆ ಬಂತು ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ..!

ಭಾರತೀಯ ಮಾರುಕಟ್ಟೆಗೆ ಬಂತು ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ..!

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಗಳು ಕಾಣಿಸಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ TCL ಸಬ್ ಬ್ರಾಂಡ್ ಐಫಾಲ್ಕನ್ ಸಂಸ್ಥೆಯು ಗೂಗಲ್ ಸರ್ಟಿಫೈಡ್ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು ಕೃತಕ ಬುದ್ಧಿಮತ್ತೆ ಗೂಗಲ್ ಅಸಿಸ್ಟೆಂಟ್ ಅನ್ನು ಹೊಂದಿದೆ ಎನ್ನಲಾಗಿದೆ. ಐಫಾಲ್ಕನ್ ಸಂಸ್ತೆಯೂ ಸದ್ಯ ಮಾರುಕಟ್ಟೆಗೆ 32, 40 ಮತ್ತು 49 ಇಂಚಿನ ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಿದ್ದು, ಈ ಎಲ್ಲಾ ಟಿವಿ ಗಳು ಫ್ಲಿಪ್ ಕಾರ್ಟ್ ನಲ್ಲಿ ಮಾರಾಟವಾಗಲಿದೆ.
ಭಾರತದಲ್ಲಿ ಐಫೋನ್ Xs ಮತ್ತು Xs ಮ್ಯಾಕ್ಸ್ ಲಭ್ಯ..? ಲಕ್ಷಕ್ಕೆ ಬೆಲೆನೆ ಇಲ್ಲ..!

ಭಾರತದಲ್ಲಿ ಐಫೋನ್ Xs ಮತ್ತು Xs ಮ್ಯಾಕ್ಸ್ ಲಭ್ಯ..? ಲಕ್ಷಕ್ಕೆ ಬೆಲೆನೆ ಇಲ್ಲ..!

ಜಾಗತಿಕ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಲಾಂಚ್ ಆಗಿರುವ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಸೆಪ್ಟೆಂಬರ್ 28 ರಿಂದ ಭಾರತೀಯ ಮಾರಾಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಪ್ರೀ ಬುಕಿಂಗ್ ಆರಂಭವಾಗಿದೆ. ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ವೆಬ್ ಸೈಟ್ ನಲ್ಲಿ ಈಗಾಗಲೇ ಪ್ರೀಬುಕ್ಕಿಂಗ್ ಆರ್ಡರ್ ಗಳು ಆರಂಭವಾಗಿದೆ.  EMI ಆಯ್ಕೆಯೂ ಲಭ್ಯವಿದೆ. ಐಫೋನ್ Xs ಮ್ಯಾಕ್ಸ್ 64 GB ರೂ.1,09,900ಕ್ಕೆ, 256 GB ರೂ.1,24,900 ಮತ್ತು 512 GB ರೂ.1,44,900ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಐಫೋನ್ Xs 64 GB ರೂ.99,900ಕ್ಕೆ, 256 GB ರೂ.1,14,900 ಮತ್ತು 512 GB ರೂ.1,34,900ಕ್ಕೆ ದೊರೆಯುತ್ತಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more