Short News

ವಿಡಿಯೋ ಗೇಂ ಪಂದ್ಯಾವಳಿ ವೇಳೆ ಮನಬಂದಂತೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ, 2 ಸಾವು

ವಿಡಿಯೋ ಗೇಂ ಪಂದ್ಯಾವಳಿ ವೇಳೆ ಮನಬಂದಂತೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ, 2 ಸಾವು

ಭಾನುವಾರ ಅಮೆರಿಕದ ಫ್ಲೋರಿಡಾ ನಗರದಲ್ಲಿ ವಿಡಿಯೋ ಗೇಂ ಪಂದ್ಯಾವಳಿ ನಡೆಯುತ್ತಿತ್ತು. ಫ್ಲೋರಿಡಾದ ಜನಪ್ರಿಯ ವ್ಯಾಪಾರಿ ಕೇಂದ್ರದಲ್ಲಿ ಜಾಕ್ಸನ್ ವಿಲ್ಲೆ ವಾರ್ಷಿಕ ಮೆಡ್ಡೆನ್ ಎನ್ಎಫ್ಎಲ್ 19 ಸ್ಪರ್ಧೆ ನಡೆಯುತ್ತಿತ್ತು. ಈ ವೇಳೆ ಅಲ್ಲಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಹಾಗೇ ಹನ್ನೊಂದು ಮಂದಿಗೆ ಗಾಯಗಳಾಗಿವೆ. ನಂತರ ಮನಬಂದಂತೆ ಗುಂಡು ಹಾರಿಸಿದ ವ್ಯಕ್ತಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡಿನ ಸದ್ದು ಕೇಳಿದ ಜನ ದಿಕ್ಕಾಪಾಲಾಗಿ ಓಡಿದ್ದಾರೆ.
ಭಾರತೀಯ ಮಾರುಕಟ್ಟೆಗೆ ಬಂತು ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ..!

ಭಾರತೀಯ ಮಾರುಕಟ್ಟೆಗೆ ಬಂತು ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ..!

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಗಳು ಕಾಣಿಸಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ TCL ಸಬ್ ಬ್ರಾಂಡ್ ಐಫಾಲ್ಕನ್ ಸಂಸ್ಥೆಯು ಗೂಗಲ್ ಸರ್ಟಿಫೈಡ್ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು ಕೃತಕ ಬುದ್ಧಿಮತ್ತೆ ಗೂಗಲ್ ಅಸಿಸ್ಟೆಂಟ್ ಅನ್ನು ಹೊಂದಿದೆ ಎನ್ನಲಾಗಿದೆ. ಐಫಾಲ್ಕನ್ ಸಂಸ್ತೆಯೂ ಸದ್ಯ ಮಾರುಕಟ್ಟೆಗೆ 32, 40 ಮತ್ತು 49 ಇಂಚಿನ ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಿದ್ದು, ಈ ಎಲ್ಲಾ ಟಿವಿ ಗಳು ಫ್ಲಿಪ್ ಕಾರ್ಟ್ ನಲ್ಲಿ ಮಾರಾಟವಾಗಲಿದೆ.
ಭಾರತದಲ್ಲಿ ಐಫೋನ್ Xs ಮತ್ತು Xs ಮ್ಯಾಕ್ಸ್ ಲಭ್ಯ..? ಲಕ್ಷಕ್ಕೆ ಬೆಲೆನೆ ಇಲ್ಲ..!

ಭಾರತದಲ್ಲಿ ಐಫೋನ್ Xs ಮತ್ತು Xs ಮ್ಯಾಕ್ಸ್ ಲಭ್ಯ..? ಲಕ್ಷಕ್ಕೆ ಬೆಲೆನೆ ಇಲ್ಲ..!

ಜಾಗತಿಕ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೆಲೆಗೆ ಲಾಂಚ್ ಆಗಿರುವ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ಸೆಪ್ಟೆಂಬರ್ 28 ರಿಂದ ಭಾರತೀಯ ಮಾರಾಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಪ್ರೀ ಬುಕಿಂಗ್ ಆರಂಭವಾಗಿದೆ. ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ವೆಬ್ ಸೈಟ್ ನಲ್ಲಿ ಈಗಾಗಲೇ ಪ್ರೀಬುಕ್ಕಿಂಗ್ ಆರ್ಡರ್ ಗಳು ಆರಂಭವಾಗಿದೆ.  EMI ಆಯ್ಕೆಯೂ ಲಭ್ಯವಿದೆ. ಐಫೋನ್ Xs ಮ್ಯಾಕ್ಸ್ 64 GB ರೂ.1,09,900ಕ್ಕೆ, 256 GB ರೂ.1,24,900 ಮತ್ತು 512 GB ರೂ.1,44,900ಕ್ಕೆ ದೊರೆಯುತ್ತಿದೆ. ಇದೇ ಮಾದರಿಯಲ್ಲಿ ಐಫೋನ್ Xs 64 GB ರೂ.99,900ಕ್ಕೆ, 256 GB ರೂ.1,14,900 ಮತ್ತು 512 GB ರೂ.1,34,900ಕ್ಕೆ ದೊರೆಯುತ್ತಿದೆ.
ವಿಜಯ್ ಹಜಾರೆ: ಪೃಥ್ವಿ ಶಾ-ಶ್ರೇಯಸ್ ಶತಕದಾಟ, ಮುಂಬೈಗೆ ಭರ್ಜರಿ ಜಯ

ವಿಜಯ್ ಹಜಾರೆ: ಪೃಥ್ವಿ ಶಾ-ಶ್ರೇಯಸ್ ಶತಕದಾಟ, ಮುಂಬೈಗೆ ಭರ್ಜರಿ ಜಯ

ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಎಲೈಟ್ ಗ್ರೂಪ್ ಎಯ ಮುಂಬೈ-ರೈಲ್ವೇಸ್ ಮುಖಾಮುಖಿಯಲ್ಲಿ ಮುಂಬೈ ತಂಡ ಭರ್ಜರಿ 173 ರನ್ ಗೆಲುವು ಸಾಧಿಸಿದೆ. ಪೃಥ್ವಿ ಶಾ ಮತ್ತು ಶ್ರೇಯಸ್ ಐಯ್ಯರ್ ಅಮೋಘ ಶತಕದ ನೆರವಿನಿಂದ ಮುಂಬೈ ನೂರೈವತ್ತಕ್ಕೂ ಅಧಿಕ ರನ್ ನಿಂದ ಜಯ ಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈಯಿಂದ ಆರಂಭಿಕ ಆಟಗಾರ ಪೃಥ್ವಿ ಶಾ 129 ರನ್ ಗಳಿಸಿದರು. ರಹಾನೆ ಬಳಗ 50 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದು ಭರ್ತಿ 400 ಗರಿಷ್ಟ ರನ್ ಪೇರಿಸಿ ಎದುರಾಳಿಗೆ 401 ರನ್ ಗುರಿ ನೀಡಿತು. 42.4 ಓವರ್ ಮುಕ್ತಾಯಕ್ಕೆ ರೈಲ್ವೇಸ್ ಎಲ್ಲಾ ವಿಕೆಟ್ ಕಳೆದು ಕೇವಲ 227 ರನ್ ಪೇರಿಸಲಷ್ಟೇ ಶಕ್ತವಾಯಿತು.  
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more