Short News

ಮೋದಿಯವರನ್ನು ತಬ್ಬಿದ್ದೇಕೆ? ಜರ್ಮನಿಯಲ್ಲಿ ಕಾರಣ ಹೇಳಿದ ರಾಹುಲ್

ಮೋದಿಯವರನ್ನು ತಬ್ಬಿದ್ದೇಕೆ? ಜರ್ಮನಿಯಲ್ಲಿ ಕಾರಣ ಹೇಳಿದ ರಾಹುಲ್

"ನಾನು ಮೋದಿಯವರನ್ನು ಅಂದು ತಬ್ಬಿಕೊಂಡಿದ್ದಕ್ಕೆ ಸಕಾರಣವಿತ್ತು. ಆದರೆ ಅದನ್ನು ಅರ್ಥಮಾಡಿಕೊಳ್ಳದೆ ಅವರು ತಬ್ಬಿಬ್ಬಾದರು ಅಷ್ಟೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜರ್ಮಿನಿಯ ಹಂಬರ್ಗ್ ನಲ್ಲಿ ಮಾತನಾಡುವ ಸಮಯದಲ್ಲಿ 'ಅಪ್ಪುಗೆ ಪ್ರಹಸನ'ವನ್ನು ನೆನಪಿಸಿಕೊಂಡರು. ದ್ವೇಷಕ್ಕೆ ದ್ವೇಷದಿಂದಲೇ ಪ್ರತಿಕ್ರಿಯೆ ನೀಡುವುದು ಮೂರ್ಖತನ. ಇದು ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಆದರೆ ನಮ್ಮಿಂದ ನಿಯಂತ್ರಿಸಲು ಸಾಧ್ಯವಿರುವ ಸಂಗತಿಯೆಂದರೆ, ದ್ವೇಷಕ್ಕೆ ನಾವು ಹೇಗೆ ಪ್ರತಿಕ್ರಿಯೆ ನೀಡುತ್ತೇನೆ ಎಂಬುದು ಎಂದಿದ್ದಾರೆ.
ಹನಿ ಟ್ರ್ಯಾಪ್: ಯುಪಿ ಎಟಿಎಸ್ ನಿಂದ ಬಿಎಸ್ಎಫ್ ಯೋಧನೊಬ್ಬ ಅರೆಸ್ಟ್

ಹನಿ ಟ್ರ್ಯಾಪ್: ಯುಪಿ ಎಟಿಎಸ್ ನಿಂದ ಬಿಎಸ್ಎಫ್ ಯೋಧನೊಬ್ಬ ಅರೆಸ್ಟ್

ಉತ್ತರ ಪ್ರದೇಶ ಉಗ್ರ ನಿಗ್ರಹ ದಳ(ಎಟಿಎಸ್) ಪಾಕಿಸ್ತಾನದ ಐಎಸ್ಐ ಏಜೆಂಟ್ ಗಳಿಗೆ ಪ್ರಮುಖ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಬಿಎಸ್ಎಫ್ ಯೋಧರೊಬ್ಬರನ್ನು ಬಂಧಿಸಿದೆ ಎಂದು ಬುಧವಾರ ಯುಪಿ ಪೊಲೀಸ್ ಮಹಾ ನಿರ್ದೇಶಕ ಒ ಪಿ ಸಿಂಗ್ ಮಾಹಿತಿ ನೀಡಿದ್ದಾರೆ. ಮಧ್ಯ ಪ್ರದೇಶದ ರೆವಾ ಮೂಲದ ಬಿಎಸ್ ಎಫ್ ಅಚ್ಯುತಾನಂದನ್ ಮಿಶ್ರಾ ಅವರನ್ನು ಹನಿ ಟ್ರ್ಯಾಪಿಂಗ್‌ ಮಾಡಲಾಗಿದ್ದು, ರಕ್ಷಣಾ ವರದಿಗಾರ್ತಿ ಎಂದು ಹೇಳಿಕೊಂಡು ಬಂದ ಯುವತಿಯೊಂದಿಗೆ, ಸೇನಾ ಕಾರ್ಯಾಚರಣೆ, ಪೊಲೀಸ್ ತರಬೇತಿ ಕೇಂದ್ರ ಹಾಗೂ ಪೊಲೀಸ್ ಅಕಾಡೆಮಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಷರೀಫ್ ಮತ್ತು ಪುತ್ರಿ  ಜೈಲು ಶಿಕ್ಷೆ ರದ್ದು

ಭ್ರಷ್ಟಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಷರೀಫ್ ಮತ್ತು ಪುತ್ರಿ ಜೈಲು ಶಿಕ್ಷೆ ರದ್ದು

ಭ್ರಷ್ಟಾಚಾರ ಆರೋಪ ಹೊತ್ತು ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನಾಜ್ ಷರೀಫ್ ಮತ್ತು ಅವರ ಮಗಳು ಮರ್ಯಾಮ್ ನವಾಜ್ ಅವರಿಗೆ ಬಂಧನದಿಂದ ಬಿಡುಗಡೆ ದೊರೆತಿದೆ. ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಷರೀಫ್‌ಗೆ 10ವರ್ಷ ಹಾಗೂ ಮರ್ಯಮ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇಸ್ಲಾಮಾದ್ ಹೈಕೋರ್ಟ್‌ ಶಿಕ್ಷೆಯನ್ನು ರದ್ದುಗೊಳಿಸಿ ಆರೋಪದಿಂದ ನವಾಜ್ ಷರೀಫ್ ರನ್ನು ಮುಕ್ತಗೊಳಿಸಿದೆ. ಜುಲೈ 6 ರಂದು ಕೆಳಹಂತದ ನ್ಯಾಯಾಲಯವು ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸಿ ಷರೀಫ್ 10 ವರ್ಷ, ಪುತ್ರಿ ಮರ್ಯಾಮ್ ಗೆ 7 ವರ್ಷ ಷರೀಫ್ ಅವರ ಅಳಿಯನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್

ಮತ್ತಷ್ಟು ಕಳೆಗಟ್ಟಿದ ಉಡುಪಿಯ ಬೋಟ್ ಹೌಸ್

ಉಪ್ಪುನೀರು ಮತ್ತು ಹಿನ್ನೀರು ಎರಡೂ ಇರುವ ಕಡೆ ಮನರಂಜನೆಗೇನು ಕೊರತೆ? ಕರಾವಳಿಯಲ್ಲಂತೂ ಪ್ರವಾಸಿಗರಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಈ ವರ್ಷದ ಬೇಸಿಗೆ ಮಜಾಕ್ಕೆ ಈಗಲೇ ಉಡುಪಿಯಲ್ಲಿ ಬೋಟ್ ಹೌಸ್ ಸಿದ್ಧಗೊಂಡಿದೆ. ಕೇರಳದಲ್ಲಿ ಪ್ರಸಿದ್ಧಿ ಪಡೆದಿರುವ ಬೋಟ್ ಹೌಸ್ ಮತ್ತೆ ಉಡುಪಿಯಲ್ಲಿ ಸೇವೆಗೆ ಸಿದ್ಧಗೊಂಡಿದೆ. ಬೋಟ್ ನಲ್ಲಿ ಸಂಚರಿಸುತ್ತಾ ಕಡಲ ತಡಿಯ ಸೌಂದರ್ಯದ ಜತೆಗೆ ಹಿನ್ನೀರಿನ ಸವಿ, ಡಾಲ್ಫಿನ್ ಪಾಯಿಂಟ್, ಸೈಂಟ್ ಮೆರೀಸ್ ದ್ವೀಪಗಳನ್ನು ನೋಡುತ್ತಾ ಸೂರ್ಯಾಸ್ತವನ್ನು ಸವಿಯಬಹುದು. ಬೇಸಿಗೆ ರಜೆಯಲ್ಲಿ ಪ್ರವಾಸಿಗರಿಗೆ ಪರಿಸರದ ಸೌಂದರ್ಯದೊಂದಿಗೆ ಮೋಜಿಗೆ ಅವಕಾಶ ನೀಡುವ ಬೋಟ್ ಹೌಸ್ ಇದು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more