Short News

ದೂರದ ಕ್ಯಾಲಿಫೋರ್ನಿಯಾದಲ್ಲೂ ಮೊಳಗಿದ ಗುರುರಾಯರ ಮಂತ್ರಘೋಷ

ದೂರದ ಕ್ಯಾಲಿಫೋರ್ನಿಯಾದಲ್ಲೂ ಮೊಳಗಿದ ಗುರುರಾಯರ ಮಂತ್ರಘೋಷ

ಇಂದು ಗುರುರಾಯರ 347 ವೈಭವದ ಆರಾಧನೆ ಮಹೋತ್ಸವ. ಕಲಿಯುಗದ ಕಲ್ಪವೃಕ್ಷವೆಂದೇ ಕರೆಯಲ್ಪಡುವ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲಿರುವವರು ಕೂಡ ಆಚರಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನ ಶ್ರೀ ಕೃಷ್ಣ ಮಂದಿರದಲ್ಲಿ ಗುರುರಾಯರ 347ರ ಪೂರ್ವಾರಾಧನೆ ಸಂಪನ್ನಗೊಂಡಿತು. ಬೆಳಗಿನಿಂದಲೇ ಪುಣ್ಯಾವರ್ನೆ, ಪಂಚಾಮೃತ, ಮಹಾಮಂಗಳಾರತಿ, ನೈವೇದ್ಯ ಸೇವೆ ಹಾಗೂ ದಾಸವಾಣಿ ಕಾರ್ಯಕ್ರಮವೂ ವಿಜೃಂಭಣೆಯಿಂದ ನಡೆಯಿತು.
ರೈಲ್ವೇ ಮಿನಿಸ್ಟ್ರಿಯಲ್ಲಿ ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

ರೈಲ್ವೇ ಮಿನಿಸ್ಟ್ರಿಯಲ್ಲಿ ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

ರೈಲ್ವೇ ಮಿನಿಸ್ಟ್ರಿಯ, ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಆದ RITES Ltd ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಂಜಿನೀಯರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 3, 2018 ಕೊನೆಯ ದಿನಾಂಕ. ಬಿಇ, ಬಿಟೆಕ್, ಬಿಎಸ್ ಸಿ ವಿದ್ಯಾಭ್ಯಾಸವಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಆಯ್ಕೆಯಾದವರು ಗುರ್ಗಾನ್ ನಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಹುದ್ದೆ ಬಗೆಗಿನ ಹೆಚ್ಚಿನ ಮಾಹಿತಿಗೆ RITES ಗೆ ಲಾಗಿನ್ ಆಗಿ.
ಅಡುಗೆಮನೆಯ 'ಅಡುಗೆ ಸೋಡಾ' ಮೊಡವೆಗೆ ಪರ್ಫೆಕ್ಟ್ ಮನೆಮದ್ದು

ಅಡುಗೆಮನೆಯ 'ಅಡುಗೆ ಸೋಡಾ' ಮೊಡವೆಗೆ ಪರ್ಫೆಕ್ಟ್ ಮನೆಮದ್ದು

ಆ್ಯಂಟಿ ಇನ್‌ಫ್ಲಾಮೇಟರಿ ಅಂಶಗಳನ್ನು ಬೇಕಿಂಗ್ ಸೋಡಾ ಒಳಗೊಂಡಿದ್ದು ಮೊಡವೆ, ಕಲೆಗಳು, ದದ್ದುಗಳನ್ನು ಇದು ಹೋಗಲಾಡಿಸುತ್ತದೆ. ನೈಸರ್ಗಿಕ ಎಕ್ಸ್‌ಫೋಲಿಯೇಂಟ್‌ನಂತೆ ಇದು ಕೆಲಸ ಮಾಡುತ್ತದೆ ಮತ್ತು ಮೃತಕೋಶಗಳನ್ನು ನಿವಾರಿಸುತ್ತದೆ. ಹಾಗೂ ಆರೋಗ್ಯಪೂರ್ಣ ತ್ವಚೆಯನ್ನು ನಿಮಗೆ ದಯಪಾಲಿಸುತ್ತದೆ. ತ್ವಚೆಯಿಂದ ಹೆಚ್ಚುವರಿ ಎಣ್ಣೆಯಿಂದ ಇದು ಹೀರಿಕೊಳ್ಳುತ್ತದೆ ಮತ್ತು ಮೊಡವೆ ಹಾಗೂ ಗಾಯಗಳ ಗುರುತುಗಳನ್ನು ನಿವಾರಿಸುತ್ತದೆ. ಜೇನು ಅಥವಾ ಲಿಂಬೆ ಜತೆ ಬೇಕಿಂಗ್ ಸೋಡಾವನ್ನು ಬಳಸಬಹುದು.
'ಥಗ್ಸ್ ಆಫ್ ಹಿಂದೂಸ್ತಾನ'ದ ಕಿಲ್ಲಿಂಗ್ ಲುಕ್ ನಲ್ಲಿ ಅಮಿತಾಬ್, ಫಾತೀಮಾ

'ಥಗ್ಸ್ ಆಫ್ ಹಿಂದೂಸ್ತಾನ'ದ ಕಿಲ್ಲಿಂಗ್ ಲುಕ್ ನಲ್ಲಿ ಅಮಿತಾಬ್, ಫಾತೀಮಾ

ಬಾಲಿವುಡ್ ನ ಬಹುನಿರೀಕ್ಷೆಯ ಸಿನಿಮಾ 'ಥಗ್ಸ್ ಆಫ್ ಹಿಂದೂಸ್ತಾನ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಲುಕ್ ಬಹಿರಂಗವಾಗಿದ್ದು, ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದೆ. ಚಿತ್ರದಲ್ಲಿ ಕೂಡಭಕ್ಷ್ ಪಾತ್ರದಲ್ಲಿ ಅಮಿತಾಬ್ ಕಾಣಿಸಿಕೊಂಡಿದ್ದು, ವಾರಿಯರ್ ಗೆಟೆಪ್ ನಲ್ಲಿ ಬಿಗ್ ಬಿ ಘರ್ಜಿಸಿದ್ದಾರೆ. ಅಮಿತಾಬ್ ನಂತರ ಈಗ ಫಾತೀಮಾ ಸನಾ ಅವರ ಲುಕ್ ರಿವೀಲ್ ಮಾಡಲಾಗಿದೆ. 'ಥಗ್ಸ್ ಆಫ್ ಹಿಂದೂಸ್ತಾನ' ಚಿತ್ರದಲ್ಲಿ ಪಾತೀಮಾ ಅವರು ಜಫೀರಾ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು, ಫಾತೀಮಾ ಕೂಡ ಜಬರ್ ದಸ್ತ್ ಆಗಿ ಅಭಿನಯಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more