Short News

ಸುಷ್ಮಾ ಸ್ವರಾಜ್ ಗೆ ಕೆಲಸವಿಲ್ಲ: ಲಂಡನ್ ನಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆ

ಸುಷ್ಮಾ ಸ್ವರಾಜ್ ಗೆ ಕೆಲಸವಿಲ್ಲ: ಲಂಡನ್ ನಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆ

"ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೆಲಸವಿಲ್ಲ. ಕೇವಲ ಜನರಿಗೆ ವೀಸಾ ಮಾಡಿಕೊಡುವುದನ್ನು ಬಿಟ್ಟು ಅವರೇನೂ ಮಾಡುವುದಿಲ್ಲ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಅವರು, ಶುಕ್ರವಾರ ಲಂಡನ್ ನಲ್ಲಿ ಮಾತನಾಡುತ್ತಿದ್ದರು. "ಭಾರತದ ವಿದೇಶಾಂಗ ಸಚಿವರು ಹೆಚ್ಚು ಸಮಯ ವೀಸಾ ನೀಡುವ ಕೆಲಸವನ್ನೇ ಮಾಡುತ್ತಾರೆ ಎಂದು ಹಲವರು ಹೆಳುವುದನ್ನು ಕೇಳಿದ್ದೇನೆ. ಆ ಮಾತಿನ ಅರ್ಥವೇನು? ಅವರಿಗೆ ವೀಸಾ ಮಾಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲ ಎಂದಲ್ಲವೇ?" ಎಂದು ಪ್ರಶ್ನಿಸಿದ್ದಾರೆ ರಾಹುಲ್ ಗಾಂಧಿ.
ಗೂಗಲ್ ಪೋಷಕರಿಗೆ ನೀಡಿದೆ ಮಕ್ಕಳ ಸ್ಮಾರ್ಟ್‌ಫೋನ್ ಲಾಕ್ ಮಾಡುವ ಫೀಚರ್..!

ಗೂಗಲ್ ಪೋಷಕರಿಗೆ ನೀಡಿದೆ ಮಕ್ಕಳ ಸ್ಮಾರ್ಟ್‌ಫೋನ್ ಲಾಕ್ ಮಾಡುವ ಫೀಚರ್..!

ಹದಿಹರೆಯದ ಮಕ್ಕಳ ಮೊಬೈಲ್ ಬಳಕೆಯಲ್ಲಿ ಕಡಿವಾಣ ಹಾಕಲು ಪೋಷಕರಿಗೆ ಅವಕಾಶ ಸಿಗಲಿದೆ. ಗೂಗಲ್ ನ ಫ್ಯಾಮಿಲಿ ಲಿಂಕ್ ಆಯ್ಕೆಯು ಚಿಕ್ಕ ಮಕ್ಕಳಿಗೆ ಸ್ಕ್ರೀನ್ ಟೈಮ್ ಕಂಟ್ರೋಲ್ ಮತ್ತು ಸ್ಮಾರ್ಟ್ ಡಿವೈಸ್ ಬಳಕೆಯನ್ನು ಕಂಟ್ರೋಲ್ ಮಾಡಲು ಅವಕಾಶ ನೀಡಿದಂತೆ ಇದೀಗ ಹದಿಹರೆಯದ ಮಕ್ಕಳಿಗೂ ಬಳಕೆ ಮಾಡಲು ಅವಕಾಶ ನೀಡುತ್ತದೆ.ಫ್ಯಾಮಿಲಿ ಲಿಂಕ್ ಆಯ್ಕೆಯನ್ನು ಅಪ್ ಡೇಟ್ ಮಾಡಿರುವ ಗೂಗಲ್ , ತಮ್ಮದೇ ಸೇಮ್ ಗೂಗಲ್ ಅಕೌಂಟ್ ಮೂಲಕ ಪೋಷಕರಿಗೆ ಹದಿಹರೆಯದ ಮಕ್ಕಳ ಸ್ಮಾರ್ಟ್ ಫೋನ್ ಬಳಕೆಯ ವಿಚಾರದಲ್ಲಿ ಕೆಲವು ಲಾಕ್ ಮಾಡುವ ಅವಕಾಶವನ್ನು ನೀಡುತ್ತದೆ.

ಏಷ್ಯಾಕಪ್ : ಪಾಕ್ ಎದುರಿನ ಪಂದ್ಯ ಆಡುತ್ತಿದ್ದ ವೇಳೆ ಪಿಚ್ ಬಳಿ ಬಿದ್ದ ಪಾಂಡ್ಯಾ

ಏಷ್ಯಾಕಪ್ : ಪಾಕ್ ಎದುರಿನ ಪಂದ್ಯ ಆಡುತ್ತಿದ್ದ ವೇಳೆ ಪಿಚ್ ಬಳಿ ಬಿದ್ದ ಪಾಂಡ್ಯಾ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಹಾರ್ದಿಕ್ ಪಾಂಡ್ಯ ಅವರು ಗಂಭೀರವಾಗಿ ಗಾಯಗೊಂಡಿದ್ದು, ಮೈದಾನದಿಂದ ಹಿಂದೆ ಸರಿದಿದ್ದಾರೆ. ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಬೆನ್ನು ನೋವು ಕಾಣಿಸಿಕೊಂಡು, ಪಿಚ್ ನಲ್ಲೇ ಕುಸಿದು ಬಿದ್ದರು. ವೈದ್ಯಕೀಯ ಸಿಬ್ಬಂದಿ ಕೂಡಲೇ ಅವರನ್ನು ಸ್ಟ್ರೆಚರ್ ನಲ್ಲಿ ಮಲಗಿಸಿ ಕರೆದುಕೊಂಡು ಹೋದರು. ಪಾಂಡ್ಯ ಅವರ ಓವರ್ ಅನ್ನು ಅಬಂಟಿ ರಾಯುಡು ಮುಂದುವರೆಸಿದರು. ಬಳಿಕ ಪಾಂಡ್ಯ ಬದಲಿಗೆ ಮನೀಶ್ ಪಾಂಡೆ ಅವರು ಫೀಲ್ಡಿಂಗ್ ಮಾಡಿದರು.
ಟೀಂ ಇಂಡಿಯಾ ದಾಳಿ ಸರ್ವಪತನ ಕಂಡ ಪಾಕ್ , ಭಾರತಕ್ಕೆ ಗೆಲ್ಲಲು 163 ರನ್ ಟಾರ್ಗೆಟ್

ಟೀಂ ಇಂಡಿಯಾ ದಾಳಿ ಸರ್ವಪತನ ಕಂಡ ಪಾಕ್ , ಭಾರತಕ್ಕೆ ಗೆಲ್ಲಲು 163 ರನ್ ಟಾರ್ಗೆಟ್

ದುಬೈ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018 ರ ಹೂವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 43.1 ಓವರ್‌ ಗೆ ತನ್ನಲ್ಲಾ ವಿಕೆಟ್ ಕಳೆದುಕೊಂಡು 162 ರನ್‌ ಗಳಿಸಿದ್ದು, ಭಾರತಕ್ಕೆ ಗೆಲ್ಲಲು 163 ರನ್ ಗಳ ಸುಲಭ ಟಾರ್ಗೆಟ್ ನೀಡಿದೆ. ಭಾರತದ ಪರ ನಿಖರ ದಾಳಿ ಸಂಘಟಿಸಿದ ಭುವನೇಶ್ವರ್ ಕುಮಾರ್ ಹಾಗೂ ಕೇದರ್ ಜಾಧವ್ ತಲಾ ಮೂರು, ಜಸ್ಪ್ರೀತ್ ಬುಮ್ರಾ ಎರಡು ಹಾಗೂ ಕುಲ್‌ದೀಪ್ ಯಾದವ್ ಒಂದು ವಿಕೆಟ್ ಪಡೆದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more