Short News

71ನೇ ವಸಂತಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್ ಡಿಕೆ ವಿಶ್

71ನೇ ವಸಂತಕ್ಕೆ ಕಾಲಿಟ್ಟ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೆಚ್ ಡಿಕೆ ವಿಶ್

ಸಿದ್ದರಾಮಯ್ಯ ಅವರ ಬರ್ತಡೇ ಪ್ರಯುಕ್ತ ಮೈಸೂರಿನಲ್ಲಿ ಅಭಿಮಾನಿಗಳು ಹಲವು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ಶನಿವಾರ ಬಾಗಲಕೋಟೆ ಪ್ರವಾಸ ಮುಗಿಸಿ ಸಿದ್ದರಾಮಯ್ಯ ರಾತ್ರಿ ಮೈಸೂರಿಗೆ ಬಂದಿದ್ದಾರೆ. ಇಂದು ದಾವಣಗೆರೆ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ಹಿರಿಯ ಮುಖಂಡ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ದೇವರು ದೀರ್ಘ ಆಯಸ್ಸು, ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸಮ್ಮಿಶ್ರ ಸರ್ಕಾರವನ್ನು ಮುಂದೆ ಕೊಂಡೊಯ್ಯುವಲ್ಲಿ ಅವರ ಸಲಹೆ ಅಮೂಲ್ಯ ಎಂದು ಟ್ವೀಟಿಸಿದ್ದಾರೆ.
ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ, ಎಲ್ಲಿ ಗೊತ್ತಾ?

ತ್ರಿವರ್ಣ ಧ್ವಜವನ್ನು ತಯಾರಿಸುವ ದೇಶದ ಏಕೈಕ ಘಟಕ ಕರ್ನಾಟಕದಲ್ಲಿ, ಎಲ್ಲಿ ಗೊತ್ತಾ?

ನಾಳೆ ದೇಶದಾದ್ಯಂತ 71 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಎಲ್ಲಿ ನೋಡಿದರೂ ತ್ರಿವರ್ಣ ಧ್ವಜ ಹಾರಾಡುತ್ತಿರುತ್ತದೆ. ಈ ರಾಷ್ಟ್ರಧ್ವಜವನ್ನು ಯಾರೂ ಬೇಕಾದರೂ ತಯಾರಿಸಲು ಸಾಧ್ಯವಿಲ್ಲ. ಈ ತ್ರಿವರ್ಣ ಧ್ವಜವು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಲ್ಲಿ ತಯಾರಾಗುತ್ತದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಹುಬ್ಬಳ್ಳಿಯ ಬೆಂಗೇರಿ ಎನ್ನುವ ಹಳ್ಳಿಯಲ್ಲಿ 1957ರ ನವೆಂಬರ್ 1ರಂದು ಈ ಸಂಘ ಸ್ಥಾಪನೆಯಾಗಿದ್ದು. ಈ ಘಟಕದ ಏಕೈಕ ಉದ್ದೇಶವೆಂದರೆ ಖಾದಿ ಮತ್ತು ಇತರ ಗ್ರಾಮ ಕೈಗಾರಿಕೆಗಳ ಬೆಳವಣಿಗೆ. ಸುಮಾರು 100 ಪರಿಣಿತ ದರ್ಜಿಗಳು ಮತ್ತು 100 ನೇಕಾರರನ್ನು ಧ್ವಜವನ್ನು ತಯಾರಿಸಲು ನೇಮಕ ಮಾಡಿದ್ದಾರೆ.
3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಸಮೀಕ್ಷೆ

3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಜಯ: ಸಮೀಕ್ಷೆ

ಇದೇ ವರ್ಷ ಡಿಸೆಂಬರ್ ನಲ್ಲಿ ನಡೆಯಬಹುದು ಎಂದು ನಿರೀಕ್ಷಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭಾರೀ ಸೋಲು ಅನುಭವಿಸಲಿದೆ ಎಂದು ಸಿವೋಟರ್ ಮತ್ತು ಎಬಿಪಿ ನ್ಯೂಸ್ ಸಮೀಕ್ಷೆ ತಿಳಿಸಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಈ ರಾಜ್ಯದ ಜನರಲ್ಲಿ ಆಡಳಿತ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯವಿಲ್ಲ. ಆದ್ದರಿಂದ ಈ ಮೂರೂ ರಾಜ್ಯಗಳಲ್ಲಿ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಪುಟ್ಟ ಮಗುವನ್ನು ಸುರಕ್ಷಿತವಾಗಿ ಎತ್ತಿಕೊಳ್ಳುವುದು ಹೇಗೆ?

ಪುಟ್ಟ ಮಗುವನ್ನು ಸುರಕ್ಷಿತವಾಗಿ ಎತ್ತಿಕೊಳ್ಳುವುದು ಹೇಗೆ?

ನವಜಾತ ಶಿಶುವಿಗೆ ಮಾತುಗಳು ಅರ್ಥವಾಗುವುದಿಲ್ಲವಾದ್ದರಿಂದ ಮಾತಾಡುವುದು ವ್ಯರ್ಥ ಎಂದು ಕೆಲ ಪಾಲಕರ ಭಾವನೆಯಾಗಿರುತ್ತದೆ. ಆದರೆ ಮಗು ನಮ್ಮ ಭಾವನೆಗಳನ್ನು ಹಾಗೂ ಧ್ವನಿಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಅದರಲ್ಲೂ ತಾಯಿಯ ಮಾತನ್ನು ಮಗು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತದೆ ಎಂಬುದು ಗೊತ್ತಿರಲಿ. ಹಿತವಾದ ಧ್ವನಿಯ ಮೂಲಕ ಮಗುವಿನೊಂದಿಗೆ ಮಾತಾಡಿ. ನೋಡುತ್ತಿದ್ದಂತೆಯೇ ಮಗು ನಿಮ್ಮ ಧ್ವನಿಯನ್ನು ಗುರುತಿಸಲು ಆರಂಭಿಸುವುದು ಹಾಗೂ ಮಾತಾಡಿದ ತಕ್ಷಣ ನೆಮ್ಮದಿ ಪಡೆಯಲಾರಂಭಿಸುವುದನ್ನು ನೋಡಿದರೆ ನೀವು ಅಚ್ಚರಿಗೊಳಗಾಗುವಿರಿ.
ಪ್ರತಿ ಬಾರಿ ಮಗುವನ್ನು ಎತ್ತಿಕೊಳ್ಳುವ ಮೊದಲು ಮಗುವಿನೊಂದಿಗೆ ಕೆಲ ನಿಮಿಷ ಮಾತನಾಡಿ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more