Short News

ಕಾರವಾರದಲ್ಲಿ ಒಬ್ಬಳೇ ಯುವತಿಗೆ ಇಬ್ಬರು ಯುವಕರೊಡನೆ ಮದುವೆ!

ಕಾರವಾರದಲ್ಲಿ ಒಬ್ಬಳೇ ಯುವತಿಗೆ ಇಬ್ಬರು ಯುವಕರೊಡನೆ ಮದುವೆ!

ಒಬ್ಬಳೇ ಯುವತಿಗೆ ಎರಡು ವಿವಾಹ ನೋಂದಣಿ ಕಚೇರಿಯಲ್ಲಿ ಇಬ್ಬರು ಯುವಕರೊಂದಿಗೆ ಎರಡು ಬಾರಿ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಅಂಕೋಲಾ ತಾಲೂಕಿನ ಸುಂಕಸಾಳ ನಿವಾಸಿ ಗಣಪತಿ ಭಟ್ ಎನ್ನುವವರು 2017ರ ಆ.15ರಂದು ಕಾರವಾರ ತಾಲೂಕಿನ ಅಮದಳ್ಳಿಯ ವೀರಗಣಪತಿ ದೇವಸ್ಥಾನದಲ್ಲಿ ಯಲ್ಲಾಪುರದ ಯುವತಿಯನ್ನು ವಿವಾಹವಾಗಿದ್ದರು. ಇವರಿಬ್ಬರದು ಪ್ರೇಮ ವಿವಾಹವಾಗಿತ್ತು. ಅದರ ಬಳಿಕ ಕಾರವಾರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2018ರ ಫೆ.7ರಂದು ವಿವಾಹ ನೋಂದಣಿ ಮಾಡಿಕೊಂಡಿದ್ದರು. ಇವರ ನಡುವೆ ವಿಚ್ಛೇದನ ಕೂಡ ನಡೆದಿಲ್ಲ.
ನಾಗದೇವತೆಯ ಪೂಜಾ ವಿಧಾನ ಹಾಗೂ ಪಠಿಸಬೇಕಾದ ಮಂತ್ರ

ನಾಗದೇವತೆಯ ಪೂಜಾ ವಿಧಾನ ಹಾಗೂ ಪಠಿಸಬೇಕಾದ ಮಂತ್ರ

ಪುರಾತನಕಾಲದಿಂದಲೂ ದೇವರ ಶಕ್ತಿಯ ವಿವಿಧ ರೂಪಗಳನ್ನು ಆರಾಧಿಸುವ ಹಿಂದೂಗಳು ಶ್ರಾವಣ ಮಾಸದ ಐದನೆಯ ದಿನ ಅರ್ಧಚಂದ್ರನಿರುವ ರಾತ್ರಿಹೊತ್ತಿನಲ್ಲಿ ನಾಗದೇವತೆಗೆ ಪೂಜೆ ಸಲ್ಲಿಸುವ ಮೂಲಕ ನಾಗಪಂಚಮಿಯನ್ನು ಆಚರಿಸುತ್ತಾರೆ. ಶ್ರಾವಣ ಮಾಸ ಹಿಂದೂ ಕ್ಯಾಲೆಂಡರ್‌ನ ಒಂದು ಮಾಸವಾಗಿದ್ದು ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜುಲೈ ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತದೆ.ಈ ಹಬ್ಬವನ್ನು ಇದೇ ತಿಂಗಳುಗಳಲ್ಲಿ ಆಚರಿಸಲು ಹಿಂದಿರುವ ಪ್ರಧಾನ ಕಾರಣವೆಂದರೆ, ಈ ಸಮಯದಲ್ಲಿ ಹಾವುಗಳು ಜನರಿಗೆ ಭಯಭೀತಿಯನ್ನುಂಟು ಮಾಡಿರುತ್ತವೆ.

ಮಲೆಷ್ಯಾದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ಇಂಟರ್‌ನೆಟ್‌ ನಿಷೇಧ!!

ಮಲೆಷ್ಯಾದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ಇಂಟರ್‌ನೆಟ್‌ ನಿಷೇಧ!!

ಮಕ್ಕಳ ಮೇಲೆ ಅಂತರ್ಜಾಲವು ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ 17ವರ್ಷದೊಳಗಿನ ಯುವಪೀಳಿಗೆಗೆ ರಾತ್ರಿ ವೇಳೆ ಅಂತರ್ಜಾಲವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಮಲೇಷ್ಯಾ ಸರಕಾರ ಯೋಜಿಸುತ್ತಿದೆ. ಸಾಮಾಜಿಕ ಜಾಲತಾಣ ಬಳಕೆಯ ಚಟ ಹತ್ತಿಕ್ಕಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ವಿಡಿಯೊ ಗೇಮ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆಯ ಚಟ ಹತ್ತಿಕ್ಕಲು ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 6 ಗಂಟೆವರೆಗೆ ಇಂಟರ್‌ನೆಟ್‌ ಬಳಕೆ ನಿಷೇಧಿಸಲು ಮಲೇಷ್ಯಾ ಸರಕಾರ ಯೋಜಿಸುತ್ತಿದೆ. ಉಪ ಆರೋಗ್ಯ ಸಚಿವ ಡಾ.ಲೀ ಬೂನ್‌ ಚೈ ಅವರು ಈ ಬಗ್ಗೆ ಮಲೇಷ್ಯಾ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

ಚಿಕ್ಕಮಗಳೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 31, 2018. ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 19 ಅಂಗನವಾಡಿ ಕಾರ್ಯಕರ್ತೆ, 77 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 18 ರಿಂದ 35 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ 45 ವರ್ಷದ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more