Short News

ಬಿಬಿಎಂಪಿ ಮೇಯರ್ ಹುದ್ದೆ ಲಿಂಗಾಯತರಿಗೆ, ರಾಹುಲ್‌ ಗಾಂಧಿಗೆ ಪತ್ರ!

ಬಿಬಿಎಂಪಿ ಮೇಯರ್ ಹುದ್ದೆ ಲಿಂಗಾಯತರಿಗೆ, ರಾಹುಲ್‌ ಗಾಂಧಿಗೆ ಪತ್ರ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಈ ಬಾರಿ ಮೇಯರ್ ಪಟ್ಟವನ್ನು ಲಿಂಗಾಯತ ಸಮುದಾಯದವರಿಗೆ ನೀಡಬೇಕು ಎಂದು ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಾಗಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಗಂಗಾಂಬಿಕಾ ಮಲ್ಲಿಕಾರ್ಜುನ್ ಅವರನ್ನು ಮೇಯರ್ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಹಾಲಿ ಮೇಯರ್ ಸಂಪತ್ ರಾಜ್ ಅವರ ಅವಧಿ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದೆ.
ಜಸ್ಲೀನ್-ಅನೂಪ್ ಪ್ರೇಮ ಪುರಾಣ: ಕುಟುಂಬದವರಿಗೆ ಅವಮಾನ.!

ಜಸ್ಲೀನ್-ಅನೂಪ್ ಪ್ರೇಮ ಪುರಾಣ: ಕುಟುಂಬದವರಿಗೆ ಅವಮಾನ.!

ಬಿಗ್ಬಾಸ್ 12ಕ್ಕೆ ಕಾಲಿಟ್ಟಿರುವ 28ವರ್ಷದ ಜಸ್ಲೀನ್ ಮಥಾರು ಮತ್ತು 65ವರ್ಷದ ಅನೂಪ್ ಜಲೋಟ ಪ್ರೇಮ್ ಕಹಾನಿಯಿಂದ ಕುಟುಂಬದವರು ಅವಮಾನ ಎದುರಿಸುವಂತಾಗಿದೆ. ''ಇದು ನಿಜವೇ ಅಂತ ನನ್ನ ಸಂಬಂಧಿಕರು ಫೋನ್ ಮಾಡಿ ಕೇಳುತ್ತಿದ್ದಾರೆ. ಇಂತಹ ಸಂಬಂಧಕ್ಕೆ ಒಪ್ಪಿಗೆ ಕೊಡಬೇಡಿ ಅಂತ ಎಲ್ಲರೂ ಹೇಳುತ್ತಿದ್ದಾರೆ. ಆ ತಪ್ಪಿನ ಅರಿವು ಆಕೆಗಾಗಲಿ,'ಬಿಗ್ಬಾಸ್' ಮನೆಯಿಂದ ಆಕೆ ಹೊರಗೆ ಬರುವ ಹೊತ್ತಿಗೆ ನಿರ್ಧಾರ ಬದಲಾಗಿರಲಿ ಎಂದು ಆಶಿಸುವೆ'' ಅಂತ ಸಂದರ್ಶನವೊಂದರಲ್ಲಿ ಜಸ್ಲೀನ್ ಮಥಾರು ತಂದೆ ಕೇಸರ್ ಹೇಳಿದ್ದಾರೆ. ಅವಳಿಗೆ ನಾನು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆ ಈಗ ಮುಳುವಾಗಿದೆ ಎಂದು ಸಂಬಂಧಿಗಳು ಹೇಳುತ್ತಿದ್ದಾರೆ ಎಂದಿದ್ದಾರೆ.
ಶಿವಣ್ಣ - ಭಟ್ರ ಜೋಡಿಯ ಹೊಸ ಚಿತ್ರಕ್ಕೆ ಅಣ್ಣಾವ್ರ ಟೈಟಲ್

ಶಿವಣ್ಣ - ಭಟ್ರ ಜೋಡಿಯ ಹೊಸ ಚಿತ್ರಕ್ಕೆ ಅಣ್ಣಾವ್ರ ಟೈಟಲ್

ನಟ ಶಿವರಾಜ್ ಕುಮಾರ್ ಹಾಗೂ ಯೋಗರಾಜ್ ಭಟ್ ಜೋಡಿ ಸೇರಿ ಒಂದು ಹೊಸ ಸಿನಿಮಾ ಮಾಡುತ್ತಿದೆ. ಸದ್ಯ 'ಪಂಚತಂತ್ರ' ಸಿನಿಮಾದಲ್ಲಿ ತೊಡಗಿರುವ ಯೋಗರಾಜ್ ಭಟ್ ಅದರ ನಂತರ ಶಿವಣ್ಣನ ಜೊತೆಗೆ ಸೇರಲಿದ್ದಾರೆ.ಈ ಸಿನಿಮಾಗೆ ರಾಜ್ ಕುಮಾರ್ ಅವರ ಕನೆಕ್ಷನ್ ಇರುವ ಹೆಸರು ಇಡುವ ಆಲೋಚನೆ ನಡೆಯುತ್ತಿದೆ. 'ಕುಲದಲ್ಲಿ ಕೀಳ್ಯಾವುದೊ' ಎಂಬ ಟೈಟಲ್ ಸಿನಿಮಾಗೆ ಫಿಕ್ಸ್ ಆಗುವ ಸಾಧ್ಯತೆ ಇದೆ. 'ಸತ್ಯ ಹರಿಶ್ಚಂದ್ರ' ಸಿನಿಮಾದ 'ಕುಲದಲ್ಲಿ ಕೀಳ್ಯಾವುದೊ' ಹಾಡು ದೊಡ್ಡ ಜನಪ್ರಿಯತೆ ಗಳಿಸಿದೆ. ಅದಕ್ಕಿಂತ ಹೆಚ್ಚಾಗಿ ಈ ಹಾಡು ಕೇಳದವರೇ ಇಲ್ಲ ಎಂದೂ ಹೇಳಬಹುದು. ಈ ಹಾಡಿನ ಸಾಹಿತ್ಯವೇ ಈಗ ಸಿನಿಮಾ ಟೈಟಲ್ ಆಗಿದೆ‌.
ದುನಿಯಾ ವಿಜಿ ವಿರುದ್ಧ ಮತ್ತೊಂದು ಕೇಸು ದಾಖಲು, ಮಾಜಿ ಯೋಧನಿಗೆ ಜೀವ ಬೆದರಿಕೆ

ದುನಿಯಾ ವಿಜಿ ವಿರುದ್ಧ ಮತ್ತೊಂದು ಕೇಸು ದಾಖಲು, ಮಾಜಿ ಯೋಧನಿಗೆ ಜೀವ ಬೆದರಿಕೆ

ನಿನ್ನೆ ರಾತ್ರಿ ನಟ ದುನಿಯಾ ವಿಜಯ್ ರನ್ನ ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಲ್ಲಿ ಹೈಗ್ರೌಂಡ್ಸ್​ ಠಾಣೆಯ ಪೊಲೀಸರು ಅರೆಸ್ಟ್​ ಮಾಡಿದ್ದರು. ಆದರೆ, ಇದೀಗ ನಿವೃತ್ತ ಯೋಧರೊಬ್ಬರು ದುನಿಯಾ ವಿಜಯ್ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ವೆಂಕಟೇಶ್ ಎಂಬ ನಿವೃತ್ತ ಯೋಧನ ಬಳಿ ಕಿರಣ್ ನಾಲ್ಕೈದು ಲಕ್ಷ ಹಣ ಪಡೆದಿದ್ದರು. ಕಿರಣ್ ನಟ ದುನಿಯಾ ವಿಜಯ್ ಬಾಮೈದ ಆಗಿದ್ದರು. ಹಣ ಪಡೆದ ಕಿರಣ್ ಅದನ್ನು ವಾಪಸ್ ನೀಡದೆ ಯಾಮಾರಿಸುತ್ತಿದ್ದರಂತೆ. ಈ ಬಗ್ಗೆ ವಿಜಯ್ ಜೊತೆಗೆ ಮಾತನಾಡಲು ಹೋದಾಗಾ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದರು ಹಾಗೂ ಕೋಲೆ ಬೆದರಿಕೆ ಹಾಕಿದರು ಎಂದು ವೆಂಕಟೇಶ್ ಆರೋಪ ಮಾಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more