Short News

ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ಝಳಪಿಸಿದ ಜೆಸಿಬಿ ಕಾರ್ಯಾಚರಣೆ

ಸರ್ಕಾರಿ ಭೂಮಿ ಒತ್ತುವರಿ ವಿರುದ್ಧ ಝಳಪಿಸಿದ ಜೆಸಿಬಿ ಕಾರ್ಯಾಚರಣೆ

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಒತ್ತುವರಿ ಕಾರ್ಯಾಚರಣೆ ನಡೆಸಿ ಸುಮಾರು 15ಕೋಟಿ ಮೌಲ್ಯದ ಜಾಗವನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಬೆಂಗಳೂರು ಜಿಲ್ಲಾ ಪೂರ್ವ ಭಾಗದ ಕೆಆರ್ ಪುರ ಹೋಬಳಿಯ ಬಾಣಸವಾಡಿ ಸರ್ವೇ ನಂಬರ್ 07ರಲ್ಲಿ 0.27ಗುಂಟೆ ಜಮೀನು ಒತ್ತುವರಿ ತೆರವುಗೊಳಿಸಲಾಯಿತು. ಗ್ರಾನೈಟ್‌ ಅಂಗಡಿ ಮಾಡಿಕೊಂಡಿದ್ದ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಡಿ.ಸಿ. ವಿಜಯ್‌ ಶಂಕರ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗಿತ್ತು. ನಗರದ ಒಟ್ಟು ನಾಲ್ಕು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಒಟ್ಟು 6.10 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದ್ದು 37ಕೋಟಿ ಮೌಲ್ಯದ ಸರ್ಕಾರಿ ಜಮೀನು ಇದಾಗಿದೆ.
ಕೇಸ್ ಹಾಕಿದ್ದಕ್ಕೆ ರಮ್ಯಾ ನೀಡಿದ್ದು ಎರಡೇ ಪದದ ಉತ್ತರ!

ಕೇಸ್ ಹಾಕಿದ್ದಕ್ಕೆ ರಮ್ಯಾ ನೀಡಿದ್ದು ಎರಡೇ ಪದದ ಉತ್ತರ!

ಪ್ರಧಾನಿ ಮೋದಿ ಅವರನ್ನು ಅವಹೇಳನಾಕಾರಿಯಾಗಿ ಚಿತ್ರಿಸುವ ಫೋಟೊವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ ಎಂದು ಆರೋಪಿಸಿ ತಮ್ಮ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್‌ಐಆರ್ ಕುರಿತು ಕಾಂಗ್ರೆಸ್‌ ಕಾರ್ಯಕರ್ತೆ ರಮ್ಯಾ ಎರಡೇ ಪದದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧದ ದೂರನ್ನು ರಮ್ಯಾ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸಷ್ಪವಾಗಿದೆ. ಪತ್ರಕರ್ತೆ ಕಾರ್ಣಿಕಾ ಕೊಹ್ಲಿ ಅವರು ಮಾಡಿದ್ದ ಟ್ವೀಟ್‌ ಹಂಚಿಕೊಂಡಿರುವ ರಮ್ಯಾ, 'ಓಹ್ ವೆಲ್' ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಿಮ್ಮ ಅಧಿಕೃತ ಹೇಳಿಕೆಯೇ ಎಂದು ಕಾರ್ಣಿಕಾ ಪ್ರಶ್ನಿಸಿದ್ದು, ಅದಕ್ಕೆ ರಮ್ಯಾ 'ಹೌದು' ಎಂದು ಉತ್ತರಿಸಿದ್ದಾರೆ.
ಜಾಮೀನು ಸಿಕ್ಕಿಲ್ಲ, ದುನಿಯಾ ವಿಜಯ್ ಮುಂದಿನ ನಿರ್ಧಾರವೇನು.?

ಜಾಮೀನು ಸಿಕ್ಕಿಲ್ಲ, ದುನಿಯಾ ವಿಜಯ್ ಮುಂದಿನ ನಿರ್ಧಾರವೇನು.?

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲಿನ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ಜಾಮೀನು ಅರ್ಜಿಯನ್ನ ಮ್ಯಾಜಿಸ್ಟ್ರೇಟ್ ಕೋರ್ಟ್ ಇಂದು ತಿರಸ್ಕರಿಸಿದೆ. ಸೆರೆಮನೆಯಲ್ಲಿರುವ ವಿಜಿ ಅವರ ಮುಂದಿನ ನಿರ್ಧಾರವೇನು ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ ವಿಜಿ ಪರ ವಕೀಲ ಶಿವಕುಮಾರ್ ಅವರು ಮಾತನಾಡಿದ್ದು, ಸೆಷೆನ್ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಕೋರ್ಟ್ ಆದೇಶದ ಪ್ರತಿ ಇನ್ನು ವಕೀಲ ಕೈಸೇರಿಲ್ಲ. ಒಮ್ಮೆ ಆದೇಶ ಪ್ರತಿಯಲ್ಲಿ ಕೈಸೇರಿದ ನಂತರ ಯಾಕೆ ಜಾಮೀನು ವಜಾ ಮಾಡಲಾಗಿದೆ ಎಂದು ತಿಳಿಯಲಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ 'ಐರಾವತ' ಟ್ಯಾಕ್ಸಿ ಯೋಜನೆ

ಸಮಾಜ ಕಲ್ಯಾಣ ಇಲಾಖೆಯಿಂದ 'ಐರಾವತ' ಟ್ಯಾಕ್ಸಿ ಯೋಜನೆ

ಸಮಾಜ ಕಲ್ಯಾಣ ಇಲಾಖೆ ಎಸ್‌ಸಿ/ಎಸ್‌ಟಿ ಪಂಗಡದ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸಲು ಹೊಸ ಯೋಜನೆಯನ್ನು ಜಾರಿಗೆ ತರಲಿದೆ. ಈ ಯೋಜನೆ ಅನ್ವಯ 3ನಗರದಲ್ಲಿ ಹೊಸ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತದೆ. 225ಕೋಟಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ 'ಐರಾವತ' ಎಂಬ ಯೋಜನೆ ಜಾರಿಗೆ ತರಲಿದೆ. ಯೋಜನೆ ಅನ್ವಯ 4500ಟ್ಯಾಕ್ಸಿಗಳನ್ನು ಖರೀದಿ ಮಾಡಲಾಗುತ್ತಿದ್ದು, 3ನಗರದಲ್ಲಿ ಟ್ಯಾಕ್ಸಿಗಳು ಸಂಚಾರ ನಡೆಸಲಿವೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಿಂದೆಯೂ ಟ್ಯಾಕ್ಸಿ ಖರೀದಿ ಯೋಜನೆ ಜಾರಿಯಲ್ಲಿತ್ತು. ಆದರೆ, ಅದರ ಅನುಷ್ಠಾನದ ಬಗ್ಗೆ ಹಲವಾರು ದೂರುಗಳಿದ್ದವು. ಆದ್ದರಿಂದ, ನೂತನ ಮಾದರಿಯಲ್ಲಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more