Short News

ಶಿಡ್ಲಘಟ್ಟದ ಭಕ್ತರಹಳ್ಳಿ ಶಾಲೆಯ ಗ್ರಂಥಾಲಯಕ್ಕೆ ಜರ್ಮನಿ ಅನುದಾನ

ಶಿಡ್ಲಘಟ್ಟದ ಭಕ್ತರಹಳ್ಳಿ ಶಾಲೆಯ ಗ್ರಂಥಾಲಯಕ್ಕೆ ಜರ್ಮನಿ ಅನುದಾನ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಗೂ ಜರ್ಮನಿಗೂ, ಬರೋಡಾ ರಾಜ ಮನೆತನಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧ? ಬೆಟ್ಟದ ನೆಲ್ಲಿಕಾಯಿ ಹಾಗೂ ಸಮುದ್ರದ ಉಪ್ಪಿಗೂ ಇರುವ ಸಂಬಂಧದಂತೆ ಎಂಬುದು ಬುಧವಾರ ಸಾಬೀತಾಯಿತು ನೋಡಿ. ಭಕ್ತರಹಳ್ಳಿಯ ಬಿ.ಎಂ.ವಿ.ಎಜುಕೇಷನಲ್ ಟ್ರಸ್ಟ್ ಶಾಲೆ ಆವರಣದಲ್ಲಿ ಕಾನ್ಸುಲೇಟ್ ಜನರಲ್ ಆಫ್ ಜರ್ಮನಿಯ ಆರ್ಥಿಕ ನೆರವಿನಿಂದ ನಿರ್ಮಾಣ ಆಗಿರುವ ಗ್ರಂಥಾಲಯ ಹಾಗೂ ಪ್ರಯೋಗಾಲಯ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾನ್ಸುಲ್ ಜನರಲ್ ಆಫ್ ಜರ್ಮನಿ ಮಾರ್ಗಿಟ್ ಹೆಲ್ ವಿಗ್ ಬೊಟ್ಟೆ ಮಾತನಾಡಿ, ಈ ಶಾಲೆಯ ಮಕ್ಕಳನ್ನು ನೋಡಿದರೆ ಖುಷಿ ಆಗುತ್ತದೆ ಎಂದಿದ್ದಾರೆ.
ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಮೋದಿ

ಕೇರಳದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ಮೋದಿ

ಮಳೆಹಾನಿ, ಭಾರೀ ಪ್ರವಾಹದಿಂದ ಕಂಗೆಟ್ಟಿರುವ ಕೇರಳಕ್ಕೆ ಶುಕ್ರವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಅವರು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ. "ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಅಲ್ಲಿಗೆ ತೆರಳಿಯೇ ತಿಳಿದುಕೊಳ್ಳುವೆ" ಎಂದು ಮೋದಿ ಈ ಮುನ್ನ ಟ್ವೀಟ್ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ, ರಾಜ್ಯದ ಅನೇಕ ಭಾಗಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಇಲ್ಲಿಯವರೆಗೆ 324 ಜನರು ಪ್ರವಾಹದಿಂದಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳದ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ

ಹೆಚ್ಚುವರಿ ಸೇನಾಪಡೆ: ರಕ್ಷಣಾ ಸಚಿವೆ ನಿರ್ಮಲಾ ಜತೆ ಎಚ್ಡಿಕೆ ಚರ್ಚೆ

ಕೊಡಗಿನಲ್ಲಿ ಮಹಾಮಳೆ ಮುಂದುವರೆದಿರುವ ಪರಿಣಾಮ ಅಲ್ಲಿರುವ ಸೇನಾಸಿಬ್ಬಂದಿಯಿಂದ ಪರಿಸ್ಥಿತಿ ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಮತ್ತಷ್ಟು ಸೇನಾ ಸಿಬ್ಬಂದಿಯನ್ನು ನಿಯೋಜನೆ ಮಾಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ 70 ಸೇನಾ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ವಾಯುಸೇನಾ ಅಧಿಕಾರಿಗಳಿಂದ ಸಾವಿರಕ್ಕೂ ಹೆಚ್ಚಿನ ಸೇನಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ, ಇನ್ನೂ ಹೆಚ್ಚಿನ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜನೆ ಮಾಡುವಂತೆ ಎಚ್ಡಿಕೆ ಪತ್ರ ಬರೆದಿದ್ದಾರೆ.
ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ!

ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ!

ಬಾಲಿವುಡ್‌ನಲ್ಲಿ ಸಾಧನೆಯತ್ತ ಮುನ್ನುಗ್ಗುತ್ತಿರುವ ನಟಿ ಅನುಷ್ಕಾ ತಮ್ಮ ನಟನೆಯಿಂದ ಮಾತ್ರವಲ್ಲದೆ ಫ್ಯಾಷನ್ ಪ್ರಿಯತೆಯಿಂದಲೂ ತಮ್ಮ ಅಭಿಮಾನಿಗಳ ಮನಗೆದ್ದವರು ವಿರಾಟ್ ಕೊಹ್ಲಿ ಕೈಹಿಡಿದ ಮೇಲಂತೂ ತಮ್ಮ ಇಮೇಜ್ ಅನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಈ ಬೆಡಗಿ ತಮ್ಮದೇ ಹೆಸರನ್ನು ಬಾಲಿವುಡ್‌ನಲ್ಲಿ ಶಾಶ್ವತವಾಗಿಸಿದ್ದಾರೆ. ಅವರು ನಟಿಸಿದ ಯಾವುದೇ ಚಿತ್ರ ಕೂಡ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದ್ದು ಫುಲ್ ಪೈಸಾ ವಸೂಲ್ ಮಾಡಿದೆ.
ಈಗ ಸದ್ಯದಲ್ಲಿ ನಟಿ ಸೂಯಿ ದಾಗ್ ಚಿತ್ರದಲ್ಲಿ ಬ್ಯುಸಿಯಾಗಿದ್ದು ಸಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more