Short News

10 ರೂ ನಾಣ್ಯವನ್ನು ನಿರಾಕರಿಸುವಂತಿಲ್ಲ: ಬಿಎಂಆರ್‌ಸಿಎಲ್‌ ಸೂಚನೆ

10 ರೂ ನಾಣ್ಯವನ್ನು ನಿರಾಕರಿಸುವಂತಿಲ್ಲ: ಬಿಎಂಆರ್‌ಸಿಎಲ್‌ ಸೂಚನೆ

10ರೂ. ನಾಣ್ಯವನ್ನು ಸ್ವೀಕರಿಸಲು ಎಲ್ಲರೂ ಹಿಂದುಮುಂದು ನೋಡುತ್ತಾರೆ, RBI ಈ ಕುರಿತು ಸ್ಪಷ್ಟನೆ ನೀಡಿದ್ದರೂ ಕೂಡ ಹತ್ತು ರೂಪಾಯಿ ನಾಣ್ಯವನ್ನು ಎಲ್ಲಿಯೂ ಸ್ವೀಕರಿಸುವುದಿಲ್ಲ. ನಮ್ಮ ಮೆಟ್ರೋದ ಹೊಸ ಪಾರ್ಕಿಂಗ್‌ನಲ್ಲಿ ಶುಲ್ಕ ಪಾವತಿಸುವಾಗ 10ರೂ. ನಾಣ್ಯ ನಿರಾಕರಿಸಿದ ಗುತ್ತಿಗೆ ಕಂಪನಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಮೆಟ್ರೋ ನಿಗಮ ನೀಡಿದೆ. ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೆ ವಿಕೆಡ್‌ ರೈಡ್‌ ಕಂಪನಿಗೆ ಹೊಸದಾಗಿ ಗುತ್ತಿಗೆ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಸೂಚನೆ ಪ್ರಕಾರ 10ರೂ. ನಾಣ್ಯವನ್ನು ವಿನಿಮಯ ಮಾಡಿಕೊಳ್ಳದಿರುವುದು ತಪ್ಪಾಗುತ್ತದೆ ಎಂದು ಸೂಚನೆ ನೀಡಿದ್ದಾರೆ.
ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ

ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಗಾಥೆಯ ಕೃತಿ 'ಯೋಗಿ ಆದಿತ್ಯನಾಥ: ದಿ ರೈಸ್ ಆಫ್‌ ಎ ಸ್ಯಾಫ್ರೋನ್ ಸೋಷಿಯಲಿಸ್ಟ್' ದೇಶದ ಅತಿ ಹೆಚ್ಚು ಮಾರಾಟ ಕಂಡ ಪುಸ್ತಕಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಲಕ್ನೋದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ಈ ಪುಸ್ತಕ ಬರೆದಿದ್ದು, ಉತ್ತರಾಖಂಡದ ಚಿಕ್ಕ ಹಳ್ಳಿಯಿಂದ ಗೋರಖನಾಥ ದೇವಸ್ಥಾನ, ಸಂಸತ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವವರೆಗಿನ ಯೋಗಿ ಆದಿತ್ಯನಾಥ ಅವರ ಪಯಣದ ಕುರಿತು ಮಾಹಿತಿಯನ್ನು ಒಳಗೊಂಡಿದೆ.
ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಹೊಸ ಹೆಸರಿನೊಂದಿಗೆ ಮಾರುಕಟ್ಟೆಗೆ ಬರಲಿದೆ ಹೀರೋ ಹೊಸ ಡ್ಯುಯೆಟ್ 125

ಹೀರೋ ಮೋಟೋಕಾರ್ಪ್ ಸಂಸ್ಥೆಯು ಮುಂಬರುವ ಉತ್ಸವ ದಿನಗಳಲ್ಲಿ ತನ್ನ ಬಹುನೀರಿಕ್ಷಿತಿ ಡ್ಯುಯೆಟ್ 125 ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಹೊಸ ಸ್ಕೂಟರ್ ಅನ್ನು ಡ್ಯುಯೆಟ್‌ 125 ಬದಲಾಗಿ ವಿನೂತನ ರೀತಿಯ ಮರುನಾಮಕರಣಕ್ಕೆ ಮುಂದಾಗಿದೆ. ಹೀರೋ ಸಂಸ್ಥೆಯು ಹೊಸ ಡ್ಯುಯೆಟ್ 125 ಸ್ಕೂಟರ್ ಅನ್ನು ಡೆಸ್ಟಿನಿ 125 ಎಂದು ಮರುನಾಮಕರಣ ಮಾಡಿದೆ ಎಂಬ ಮಾಹಿತಿಗಳು ಲಭ್ಯವಾಗಿದ್ದು, ಹೊಸ ಹೆಸರಿನ ಬ್ಯಾಡ್ಜ್ ಪಡೆದುಕೊಂಡಿರುವ ಡೆಸ್ಟಿನಿ 125 ಸ್ಕೂಟರ್‌ಗಳನ್ನ ಹೀರೋ ಸಂಸ್ಥೆಯು ಈಗಾಗಲೇ ಡೀಲರ್ಸ್ ಯಾರ್ಡ್‌ಗಳಿಗೆ ರವಾನೆ ಮಾಡುತ್ತಿರುವುದಾಗಿ ಕೆಲವು ಸುದ್ದಿಮಾಧ್ಯಮಗಳು ವರದಿ ಮಾಡಿವೆ.
ಆಸುಸ್‌ನಿಂದ ಡ್ಯುಯಲ್ ಡಿಸ್‌ಪ್ಲೇ ಲ್ಯಾಪ್‌ಟಾಪ್ ಬಿಡುಗಡೆ..!

ಆಸುಸ್‌ನಿಂದ ಡ್ಯುಯಲ್ ಡಿಸ್‌ಪ್ಲೇ ಲ್ಯಾಪ್‌ಟಾಪ್ ಬಿಡುಗಡೆ..!

ಆಸುಸ್ ಭಾರತೀಯ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಸಾಕಷ್ಟು ಬೆಳವಣಿಗೆಯನ್ನು ಸಾಧಿಸುತ್ತಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಹೊಸ ಮಾದರಿಯ ಲ್ಯಾಪ್ ಟಾಪ್ ಗಳನ್ನು ಲಾಂಚ್ ಮಾಡಿದ್ದು, ಆರು ಲ್ಯಾಪ್ ಟಾಪ್ ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೈಲೈಟ್ ಎಂದರೆ UX580 ಅಥವಾ ಜೆನ್ ಫೋನ್ ಪ್ರೋ ಸರಣಿಯದ್ದಾಗಿದೆ. ಇದರಲ್ಲಿ ಡ್ಯುಯಲ್ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅದರಲ್ಲಿ ಟಚ್ ಪ್ಯಾಡ್ ನಲ್ಲಿ ಸ್ಕ್ರಿನ್ ವೊಂದನ್ನು ಅಳವಡಿಸಲಾಗಿದೆ. ಇದು ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ದೊಡ್ಡ ಮಾದರಿಯಲ್ಲಿ ಸದ್ದು ಮಾಡಲಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more