Short News

ಅಕ್ಟೋಬರ್ ತಿಂಗಳಿನಲ್ಲಿ ಬಿಎಂಟಿಸಿ ಇ ಬಸ್ ಸೇವೆ ಆರಂಭ!

ಅಕ್ಟೋಬರ್ ತಿಂಗಳಿನಲ್ಲಿ ಬಿಎಂಟಿಸಿ ಇ ಬಸ್ ಸೇವೆ ಆರಂಭ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ ಸಂಚಾರವನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರ ಬಸ್ ಖರೀದಿಗೆ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಗುತ್ತಿಗೆ ಆಧಾರದ ಮೇಲೆ ಬಸ್ ಸಂಚಾರ ಆರಂಭವಾಗಲಿದೆ. ಮೊದಲ ಹಂತದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ 80 ಎಲೆಕ್ಟ್ರಿಕ್ ಬಸ್‌ಗಳು ಉದ್ಯಾನ ನಗರಿ ಬೆಂಗಳೂರಿನ ರಸ್ತೆಗೆ ಇಳಿಯಲಿವೆ. ಈ ಪೈಕಿ 60 ಎಸಿ ಬಸ್ ಹಾಗೂ 20 ನಾನ್ ಎಸಿ ಬಸ್ ಗಳು ಸಂಚರಿಸಲಿವೆ. ಇ ಬಸ್ ಸಂಚಾರಕ್ಕಾಗಿ ಕೇಂದ್ರ ಸರ್ಕಾರದಿಂದ 74 ಕೋಟಿ ರು ಸಿಕ್ಕಿದೆ. ಈ ಪೈಕಿ 14 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಟಿವಿಎಸ್‌ನಿಂದ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ

ಟಿವಿಎಸ್‌ನಿಂದ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆ

ಟಿವಿಎಸ್ ಸಂಸ್ಥೆಯು ತನ್ನ ಜನಪ್ರಿಯ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್ ಬಿಡುಗಡೆಗೊಳಿಸಿದ್ದು, ಗ್ರಾಹಕರ ಆಕರ್ಷಣೆಗಾಗಿ ವಿನೂತನ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ನೀಡಿರುವುದು ಬೈಕ್ ಖರೀದಿ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಟಿವಿಎಸ್ ಬಿಡುಗಡೆಗೊಳಿಸಿರುವ ಹೊಚ್ಚ ಹೊಸ ಸ್ಟಾರ್ ಸಿಟಿ ಪ್ಲಸ್ ಡ್ಯುಯಲ್ ಟೋನ್ ವೆರಿಯೆಂಟ್‌ಗಳ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 52,907ಕ್ಕೆ ನಿಗದಿಪಡಿಸಲಾಗಿದ್ದು, ಡ್ಯುಯಲ್ ಟೋನ್ ಕಲರ್ ಹೊರತುಪಡಿಸಿ ಯಾವುದೇ ರೀತಿಯ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಲಾಗಿಲ್ಲ.
ರಫೇಲ್ ಡೀಲ್ : ವಿತ್ತ ಸಚಿವರು ಟಾಸ್ ಗೆ ಆದ್ಯತೆ ನೀಡಬಹುದು ಎಂದು ವ್ಯಂಗ್ಯವಾಡಿದ ಚಿದು

ರಫೇಲ್ ಡೀಲ್ : ವಿತ್ತ ಸಚಿವರು ಟಾಸ್ ಗೆ ಆದ್ಯತೆ ನೀಡಬಹುದು ಎಂದು ವ್ಯಂಗ್ಯವಾಡಿದ ಚಿದು

ಸಹ ಪಾಲುದಾರನ ಆಯ್ಕೆ ಬಗ್ಗೆ ಫ್ರಾನ್ಸ್‌ನ ಅಧ್ಯಕ್ಷ ಪ್ರಾಂಕೊಯಿಸ್ ಹಾಲ್ಲೊಂಡ್ ನೀಡಿದ ಹೇಳಿಕೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ ನಂತರ ರಫೇಲ್ ಖರೀದಿ ಒಪ್ಪಂದದದಲ್ಲಿ ನಡೆದ ಭ್ರಷ್ಟಾಚಾರದ ತನಿಖೆಗೆ ನಿರಾಕರಿಸುತ್ತಿರುವ ಕೇಂದ್ರವನ್ನು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸೋಮವಾರ ಟೀಕಿಸಿದ್ದಾರೆ.''ಸತ್ಯಕ್ಕೆ ಎರಡು ಆಯಾಮಗಳಿಲ್ಲ.'' ಎಂದು ಹಣಕಾಸು ಸಚಿವ ಜೇಟ್ಲಿ ಹೇಳಿದ್ದರು. ಹಣಕಾಸು ಸಚಿವರ ಪ್ರಕಾರ ಎರಡು ಆಯಾಮಗಳಿವೆ. ಯಾವ ಆಯಾಮ ಸತ್ಯ ಎಂಬುದನ್ನು ತಿಳಿಯಲು ಇರುವ ಉತ್ತಮ ದಾರಿ ಯಾವುದು? ಒಂದು ತನಿಖೆಗೆ ಆದೇಶ ನೀಡುವುದು, ಇನ್ನೊಂದು ಕಾಯಿನ್ ಟಾಸ್ ಮಾಡುವುದು ಎಂದು ಚಿದು ವ್ಯಂಗ್ಯವಾಡಿದ್ದಾರೆ.
ಆದಷ್ಟು ಬೇಗ ಹುಷಾರಾಗು ಗೆಳೆಯ ಎಂದು ದರ್ಶನ್ ಗೆ ವಿಶ್ ಮಾಡಿ ಟ್ವೀಟ್ ಮಾಡಿದ ಕಿಚ್ಚ !

ಆದಷ್ಟು ಬೇಗ ಹುಷಾರಾಗು ಗೆಳೆಯ ಎಂದು ದರ್ಶನ್ ಗೆ ವಿಶ್ ಮಾಡಿ ಟ್ವೀಟ್ ಮಾಡಿದ ಕಿಚ್ಚ !

ಸ್ಯಾಂಡಲ್​ವುಡ್ ನ ಒಂದು ಕಾಲದ ಜಿಗರಿ ದೋಸ್ತುಗಳೆಂದರೆ ನಟ ದರ್ಶನ್ ಮತ್ತು ಸುದೀಪ್​. ಆದರೆ ಬಳಿಕ ಇವರ ಮಧ್ಯೆ ಬಿರುಕು ಉಂಟಾಗಿತ್ತು. ಇದೀಗ ನಟ ದರ್ಶನ್ ಗೆ ಅಪಘಾತವಾಗಿರುವ ಸುದ್ದಿ ತಿಳಿದು ಸುದೀಪ್​ ಆತಂಕಗೊಂಡಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ‘ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಆದಷ್ಟು ಬೇಗ ಹುಷಾರಾಗು ಗೆಳೆಯ' ಎಂದು ಬರೆದುಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಟ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಚಲಿಸುತ್ತಿದ್ದ ಕಾರು ಮೈಸೂರಿನ ಹಿನಕಲ್ ಬಳಿ ಸೋಮವಾರ ಮುಂಜಾನೆ ಸುಮಾರು 3 ಗಂಟೆ ವೇಳೆ ಅಪಘಾತಕ್ಕೀಡಾಗಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more