Short News

ಕೊಡಗು ಪರಿಹಾರ: ಕೇಂದ್ರದ ವಿರುದ್ಧ ಕೃಷ್ಣ ಬೈರೇಗೌಡ ಆಕ್ರೋಶ

ಕೊಡಗು ಪರಿಹಾರ: ಕೇಂದ್ರದ ವಿರುದ್ಧ ಕೃಷ್ಣ ಬೈರೇಗೌಡ ಆಕ್ರೋಶ

ಕೇರಳ, ಕೊಡಗು ಎರಡೂ ಕಡೆಯು ಪ್ರವಾಹ ಬಂದಿದೆ ಆದರೆ ಕೇಂದ್ರ ಸರ್ಕಾರ ಕೇರಳಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿದ್ದು ಕರ್ನಾಟಕಕ್ಕೆ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ನೆರೆ ಸಂತ್ರಸ್ತರಿಗೆ ಇದುವರೆಗೂ ನಯಾಪೈಸೆ ಪರಿಹಾರ ದೊರೆತಿಲ್ಲ. ರಾಜ್ಯ ಸರ್ಕಾರ ಈಗಾಗಲೇ ಪರಿಹಾರಕ್ಕಾಗಿ ಎರಡು ಸಾವಿರ ಕೋಟಿ ಮನವಿ ಮಾಡಿದೆ, ಕೇಂದ್ರ ಸರ್ಕಾರದಿಂದ ಇದಕ್ಕೆ ಪೂರಕ ಸ್ಪಂದನೆ ದೊರೆತಿಲ್ಲ ಎಂದರು.
ಮುಸ್ಲಿಮರ ಸ್ಮಶಾನದಲ್ಲಿ ಭಯೋತ್ಪಾದಕರ ಶವಸಂಸ್ಕಾರಕ್ಕೆ ಸಿಗಲಿಲ್ಲ ಜಾಗ!

ಮುಸ್ಲಿಮರ ಸ್ಮಶಾನದಲ್ಲಿ ಭಯೋತ್ಪಾದಕರ ಶವಸಂಸ್ಕಾರಕ್ಕೆ ಸಿಗಲಿಲ್ಲ ಜಾಗ!

ಸೆ.13ರಂದು ಭಾರತೀಯ ಸೇನೆ ಮತ್ತು ಭಯೋತಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಜೈಶ್ ಇ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ 3 ಭಯೋತ್ಪಾದಕರನ್ನು ಹತ್ಯೆಮಾಡಲಾಗಿತ್ತು. ಅವರ ದೇಹದ ಅಂತ್ಯ ಸಂಸ್ಕಾರಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಮಶಾನವೊಂದರಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, 'ಭಯೋತ್ಪಾದಕರಿಗೂ ನಾವು ನಂಬಿರುವ ಇಸ್ಲಾಮಿಕ್ ತತ್ತ್ವಗಳಿಗೂ ತಾಳತಂತು ಇಲ್ಲ. ಅವರು ಪಾಕಿಸ್ತಾನಕ್ಕೆ ಸೇರಿದವರು. ಅವರು ತುಳಿದ ಹಾದಿಯನ್ನು ನಾವೆಂದಿಗೂ ಬೆಂಬಲಿಸುವುದಿಲ್ಲ. ಆದ್ದರಿಂದ ಅವರ ಶವಕ್ಕೂ ನಮ್ಮಲ್ಲಿ ಜಾಗವಿಲ್ಲ' ಎಂದು ಜಮ್ಮು ಮತ್ತು ಕಾಶ್ಮೀರದ ರಾಯ್ಸಿ ಜಿಲ್ಲೆಯ ಕಕ್ರಯಾಲ್ ನಲ್ಲಿ ಸ್ಮಶಾನದ ವ್ಯವಸ್ಥಾಪಕರು ಹೇಳಿದ್ದಾರೆ.
ಆಯುಷ್ಮಾನ್‌ ಭಾರತ ಆರೋಗ್ಯ ವಿಮೆ ಯೋಜನೆ ಸೆ.25 ರಂದು ಲೋಕಾರ್ಪಣೆ

ಆಯುಷ್ಮಾನ್‌ ಭಾರತ ಆರೋಗ್ಯ ವಿಮೆ ಯೋಜನೆ ಸೆ.25 ರಂದು ಲೋಕಾರ್ಪಣೆ

ಇದೇ ತಿಂಗಳ 25 ರಂದು ಮೋದಿ ಕೇರ್‌ ಎಂದೇ ಕರೆಯಲಾದ ಆಯುಷ್ಮಾನ್‌ ಭಾರತ ಆರೋಗ್ಯ ವಿಮೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ. 27 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಗೆ ಸೇರ್ಪಡೆಗೊಳ್ಳಲು ಸಿದ್ಧವಾಗಿವೆ. ಪಂಡಿತ್‌ ದೀನದಯಾಳ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವದ ದಿನದಂದೇ ಉದ್ಘಾಟನೆಗೊಳ್ಳಲಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಲಯದ 15 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಗೆ ಸೇರ್ಪಡೆಗೊಳ್ಳಲು ಸಮ್ಮತಿಸಿವೆ. ಇದರಿಂದ 10.74 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ವಿಮೆ ಸಿಗಲಿದೆ.
ಕೊಹ್ಲಿ, ಮೀರಾಬಾಯಿ 'ಖೇಲ್ ರತ್ನ', ನೀರಜ್ ಚೋಪ್ರಾ, ಹಿಮಾ ದಾಸ್ ಗೆ ಅರ್ಜುನ ಪ್ರಶಸ್ತಿ!

ಕೊಹ್ಲಿ, ಮೀರಾಬಾಯಿ 'ಖೇಲ್ ರತ್ನ', ನೀರಜ್ ಚೋಪ್ರಾ, ಹಿಮಾ ದಾಸ್ ಗೆ ಅರ್ಜುನ ಪ್ರಶಸ್ತಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಭಾರತ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರ ಲಭಿಸಿದೆ. ಇದೇ ಸೆಪ್ಟೆಂಬರ್ 25 ರಂದು ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಖೇಲ್ ರತ್ನ ಪುರಸ್ಕಾರಕ್ಕೆ ಕೊಹ್ಲಿ ಹಾಗೂ ಮೀರಾಬಾಯಿ ಪಾತ್ರವಾಗಿರುವುದನ್ನು ಕ್ರೀಡಾ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. ಇನ್ನು ಸ್ಟಾರ್ ಜಾವೆಲಿನ್ ಎಸೆತಗಾರ ನೀರಾಜ್ ಚೋಪ್ರಾ ಸೇರಿ 20 ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಲಭಿಸಿದೆ.ಇದೇ ವೇಳೆ 8 ಮಂದಿಗೆ ದ್ರೋಣಾಚಾರ್ಯ್, ನಾಲ್ವರಿಗೆ ಧ್ಯಾನ್ ಚಂದ್ ಪುರಸ್ಕಾರ ದಕ್ಕಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more