Short News

ಪುಂಜಾಲಕಟ್ಟೆಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಪುಂಜಾಲಕಟ್ಟೆಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಜಾನುವಾರುಗಳನ್ನು ಕಳ್ಳತನ ಮಾಡಿ, ಹಿಂಸಾತ್ಮಕ ರೀತಿಯಲ್ಲಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವವರನ್ನು ಬೆನ್ನಟ್ಟಿ ಗೋವುಗಳನ್ನು ರಕ್ಷಿಸಿದ ಘಟನೆ ಪುಂಜಾಲಕಟ್ಟೆಯ ಸೊಣಂದೂರು ಅಡ್ತಿಳ ಎಂಬಲ್ಲಿ ನಡೆದಿದೆ. ಮಂಗಳೂರು ಜಿಲ್ಲಾ ಡಿಸಿಐಬಿ ಪೊಲೀಸರ ತಂಡ ಈ ಸಾಹಸ ಮೆರೆದಿದೆ. ಈ ಸಂದರ್ಭದಲ್ಲಿ ವಾಹನವನ್ನು ಆರೋಪಿಗಳು ಸ್ಥಳದಲ್ಲಿಯೇ ಬಿಟ್ಟು ಸಾಗಾಟದ ಸಮಯದಲ್ಲಿ ಬೆಂಗಾವಲಿಗಿದ್ದ ವಾಹನದಲ್ಲಿ ಪರಾರಿಯಾಗಿದ್ದಾರೆ. ಅಕ್ರಮ ಜಾನುವಾರು ಸಾಗಾಟದ ಕುರಿತು ಖಚಿತ ಮಾಹಿತಿ ಪಡೆದ ಡಿಸಿಐಬಿ ಪೊಲೀಸರ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಸಮೀಪ ಗಸ್ತಿನಲ್ಲಿದ್ದರು.
ಎಸ್ಬಿಐ ಚಿನ್ನದ ಠೇವಣಿ ಯೋಜನೆ: ಅರ್ಹತೆ, ಬಡ್ಡಿದರ ಮತ್ತು ಇತರೆ ಮಾಹಿತಿ

ಎಸ್ಬಿಐ ಚಿನ್ನದ ಠೇವಣಿ ಯೋಜನೆ: ಅರ್ಹತೆ, ಬಡ್ಡಿದರ ಮತ್ತು ಇತರೆ ಮಾಹಿತಿ

  • ಚಿನ್ನಾಭರಣಗಳೆಂದರೆ ಭಾರತೀಯರಿಗೆ ವಿಪರೀತ ವ್ಯಾಮೋಹ. ಚಿನ್ನವನ್ನು ಆಪತ್ಕಾಲದ ಬಂಧು ಎಂದು ಕೂಡ ಕರೆಯುವುದುಂಟು. ಅನೇಕ ಕಷ್ಟದ ಸಂದರ್ಭದಲ್ಲಿ ನಾವು ಚಿನ್ನವನ್ನು ಅಡವಿಟ್ಟು ಹಣ ಪಡೆಯುವುದುಂಟು. ಅದಕ್ಕಾಗಿ ಬ್ಯಾಂಕುಗಳೂ ಕೂಡ ಇತ್ತೀಚೆಗೆ ಉತ್ತಮ ಆಫರ್ ಗಳನ್ನು ನೀಡುತ್ತಿವೆ. ಅಷ್ಟೇ ಅಲ್ಲ, ಈಗ ಚಿನ್ನವನ್ನು ಠೇವಣಿ ಇಡುವುದಕ್ಕೂ ಅವಕಾಶವಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಎಸ್ಬಿಐ ಚಿನ್ನದ ಠೇವಣಿ ಯೋಜನೆಯನ್ನು (Gold Deposit Scheme) ಪರಿಷ್ಕರಿಸಿದ್ದು ಅದರ ವಿವರಣೆ ಈ ಲೇಖನದಲ್ಲಿದೆ.

ಶಿರಾಡಿ ಬಂದ್ : ಚಾರ್ಮಾಡಿ ಘಾಟ್ ರಸ್ತೆ ಮೇಲೆ ವಿಪರೀತ ಸಂಚಾರ ದಟ್ಟಣೆ

ಶಿರಾಡಿ ಬಂದ್ : ಚಾರ್ಮಾಡಿ ಘಾಟ್ ರಸ್ತೆ ಮೇಲೆ ವಿಪರೀತ ಸಂಚಾರ ದಟ್ಟಣೆ

ಭಾರೀ ಮಳೆಯ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಿದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ದಟ್ಟಣೆ ಜಾಸ್ತಿಯಾಗಿದೆ. ಚಾರ್ಮಾಡಿ ಘಾಟ್ ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತಿರುವ ಕಾರಣಕ್ಕೆ ಹೀಗೆ ಸಮಸ್ಯೆಯಾಗಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ಗಾತ್ರದ ವಾಹನಗಳು ಸಂಚಾರ ಮಾಡುತ್ತಿವೆ. ಸಾಮಾನ್ಯವಾಗಿ ಈ ವಾಹನಗಳು ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಆದರೆ ಈಗ ಆ ಎಲ್ಲ ಒತ್ತಡವೂ ಚಾರ್ಮಾಡಿ ಘಾಟ್ ರಸ್ತೆಯ ಮೇಲೆ ಬಿದ್ದಿರುವುದರಿಂದ ಈ ಸನ್ನಿವೇಶ ಸೃಷ್ಟಿಯಾಗಿದೆ.
ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

ಕೊಡಗು, ಕರಾವಳಿ ಭಾಗದಲ್ಲಿ ಮಳೆ ಮುಂದುವರೆದು ಪ್ರವಾಹಕ್ಕೆ ಎಡೆಮಾಡಿಕೊಟ್ಟಿದೆ. ಸಂಕಷ್ಟದಲ್ಲಿರುವ ಜನತೆಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಈ ಕುರಿತು ನಟಿ ಸಂಯುಕ್ತಾ ಹೊರ್ನಾಡ್‌ ಸಹಾಯವಾಣಿ ಸಂಖ್ಯೆಗಳನ್ನು ಟ್ವೀಟ್‌ ಮಾಡಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ, ನಾಪೋಕ್ಲು, ಅಯ್ಯಂಗೇರಿ, ಭಾಗಮಂಡಲ, ಚೆಟ್ಟಿಮಾನಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದೆ. ಗುರುವಾರ ಸ್ವಲ್ಪ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕಾಗಿದ್ದು, ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯವಸ್ತವಾಗಿದೆ. ಕೊಡಗು ಜಿಲ್ಲಾಧಿಕಾರಿ-9482628409, ಜಿಲ್ಲಾ ಪಂಚಾಯತ್‌ ಸಿಇಓ-9480869000.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more