Short News

ಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶ

ಕೇರಳಕ್ಕೊಂದು ಕರ್ನಾಟಕಕ್ಕೊಂದು ನೀತಿ: ಕೇಂದ್ರದ ವಿರುದ್ಧ ಪರಂ ಆಕ್ರೋಶ

ಕೇಂದ್ರ ಸರ್ಕಾರ ಕೇರಳಕ್ಕೊಂದು ನೀತಿ, ಕರ್ನಾಟಕಕ್ಕೊಂದು ನೀತಿ ಅನುಸರಿಸುತ್ತಾ ಮಲತಾಯಿ ಧೋರಣೆ ತೋರುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಕೊಡಗು ಮರುನಿರ್ಮಾಣಕ್ಕೆ ರಾಜ್ಯಸರಕಾರ ಬದ್ಧವಿದೆ. ಅಲ್ಲಿನ‌ ಅನಾಹುತ,ಹಾನಿ ಬಗ್ಗೆ ಆದ್ಯತೆ ಮೇಲೆ ಸರಿ ಮಾಡಲಾಗುವುದು. ಕೇಂದ್ರ ಸರಕಾರ ಹಣಕಾಸಿನ‌ ನೆರವು ಕೊಟ್ಟಿಲ್ಲ. ಕನಿಷ್ಠ ಆತ್ಮಸ್ಥೈರ್ಯವನ್ನಾದರೂ ತುಂಬಿದ್ದರೆ ಅಲ್ಲಿನ ನಿರಾಶ್ರಿತರಿಗೂ ನೆಮ್ಮದಿ ಇರುತ್ತಿತ್ತು ಎಂದಿದ್ದಾರೆ.
ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ, ಮಹಿಳಾ ಮತಗಳ ಮೇಲೆ ರಾಹುಲ್​ ಕಣ್ಣು

ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ, ಮಹಿಳಾ ಮತಗಳ ಮೇಲೆ ರಾಹುಲ್​ ಕಣ್ಣು

ಇದೇ ನವೆಂಬರ್​, ಡಿಸೆಂಬರ್​ ನಲ್ಲಿ ನಡೆಯುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ನಡುವೆ ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿಕೊಂಡು ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಸರಣಿ ಪ್ರವಾಸ ಆರಂಭಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಸಂಕಲ್ಪಯಾತ್ರೆಗೆ ಚಾಲನೆ ನೀಡಿರುವ ಅವರು, ಆಂಧ್ರಕ್ಕೂ ಭೇಟಿ ನೀಡಿ ಕರ್ನೂಲ್​​ನಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ್ದರು. ಇದರ ಮುಂದುವರೆದ ಭಾಗವಾಗಿ ಇಂದು ರಾಜಸ್ಥಾನದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಈ ಬಾರಿ ಹೆಚ್ಚಿನ ಮಹಿಳೆಯರನ್ನು ಕಣದಲ್ಲಿ ಕಾಣ ಬಯಸುತ್ತೇನೆ ಎಂದಿದ್ದಾರೆ.
ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು

ಐಸಿಸ್ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿ ಭಾರತಕ್ಕೆ ಗಡಿಪಾರು

ಇಸ್ಲಾಮಿಕ್ ಸ್ಟೇಟ್ ಉಗ್ರರ ಸಂಘಟನೆ ಸೇರಿಕೊಂಡಿದ್ದ ಕೇರಳದ ನಿವಾಸಿಯನ್ನು ಅಫ್ಘಾನಿಸ್ತಾನದ ಕಾಬೂಲ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ಕೇರಳದ ವಯನಾಡಿನ ನಿವಾಸಿಯಾಗಿರುವ 26 ವರ್ಷದ ನಶೀದುಲ್ ಹಮ್ಜಾಫರ್‌ನನ್ನು ಅಫ್ಘಾನಿಸ್ತಾನದ ಭದ್ರತಾ ಸಂಸ್ಥೆಗಳು ಐಸಿಸ್ ಸೇರುವ ಸಲುವಾಗಿ ದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ಕಳೆದ ವರ್ಷ ಬಂಧಿಸಿದ್ದವು. ಕಾಸರಗೋಡು ಜಿಲ್ಲೆಯ 14 ಆರೋಪಿಗಳು ಭಾರತ ಮತ್ತು ತಾವು ಕೆಲಸ ಮಾಡುತ್ತಿದ್ದ ಮಧ್ಯಪ್ರಾಚ್ಯದಿಂದ 2016ರ ಮೇ ತಿಂಗಳಿನಿಂದ ಜುಲೈ ಆರಂಭದ ವಾರದಲ್ಲಿ ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿಕೊಂಡಿದ್ದರು.
ಸಂಧಿವಾತ ಗುಣಪಡಿಸಲು ಇಲ್ಲಿದೆ ನೋಡಿ ಪವರ್‌ಫುಲ್ ಮನೆಮದ್ದುಗಳು

ಸಂಧಿವಾತ ಗುಣಪಡಿಸಲು ಇಲ್ಲಿದೆ ನೋಡಿ ಪವರ್‌ಫುಲ್ ಮನೆಮದ್ದುಗಳು

ಅರಿಶಿನ ಮತ್ತು ಶುಂಠಿ ಕುದಿಸಿ ಸೋಸಿದ ಟೀ ಸೇವಿಸುತ್ತಾ ಬರಬೇಕು. ಜೊತೆಗೇ ಈಗತಾನೇ ಅರೆದ ಹಸಿಶುಂಠಿ ಮತ್ತು ಹಸಿ ಅರಿಶಿನದ ಕೊಂಬಿನ ಲೇಪನವನ್ನು ಕೊಂಚ ಬಿಸಿನೀರಿನೊಂದಿಗೆ ಬೆರೆಸಿ ಇದಕ್ಕೆ ಕೊಂಚ ಜೇನ್ಜು ಬೆರೆಸಿ ಸೇವಿಸುವ ಮೂಲಕ ಸಂಧಿವಾತ ಕಡಿಮೆಯಾಗುವ ಜೊತೆಗೇ ದಿನದ ದಣಿವು ಸಹಾ ಮಾಯವಾಗುತ್ತದೆ. ನೋವಿರುವ ಭಾಗದಲ್ಲಿ ಎರಡು ಮೂರು ತೊಟ್ಟು ಮಾತ್ರದಷ್ಟು ಆಲಿವ್ ಎಣ್ಣೆ ಸಾಕಾಗುತ್ತದೆ. ಇದರ ಕ್ಷಮತೆಯನ್ನು ಹೆಚ್ಚಿಸಲು ನಿಮ್ಮ ಆಯ್ಕೆಯ ಅವಶ್ಯಕ ತೈಲದ ಒಂದೆರಡು ತೊಟ್ಟುಗಳನ್ನು ಬೆರೆಸಿದರೆ ನೋವು ಶಮನವಾಗುವ ಗತಿ ಇನ್ನೂ ಹೆಚ್ಚುತ್ತದೆ. ನೋವಿರುವ ಭಾಗ ಪೂರ್ಣವಾಗಿ ನೀರಿನಲ್ಲಿ ಮುಳುಗಲು ಸಾಧ್ಯವಾಗುವಷ್ಟು

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more