Short News

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಖಾಸಗಿ ವಿದ್ಯಾ ಸಂಸ್ಥೆ

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಖಾಸಗಿ ವಿದ್ಯಾ ಸಂಸ್ಥೆ

ಶಿಕ್ಷಣ ವ್ಯಾಪಾರವಾಗಿಬಿಟ್ಟಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ, ಕೆಲವು ಖಾಸಗಿ ವಿದ್ಯಾ ಸಂಸ್ಥೆಗಳು ಈ ಮಾತನ್ನು ಸುಳ್ಳು ಮಾಡುವತ್ತ ಮಹತ್ವದ ಮಾನವೀಯ ಹೆಜ್ಜೆ ಇಟ್ಟಿವೆ. ಕೊಡಗಿನ ಪ್ರವಾಹದಿಂದ ತೊಂದರೆಗೊಳಪಟ್ಟ ಮಕ್ಕಳಿಗೆ ಒಂದುವರ್ಷದ ಕಾಲ ಉಚಿತವಾಗಿ ಶಿಕ್ಷಣ ನೀಡಲು ಕೆಲವು ಖಾಸಗಿ ವಿದ್ಯಾಸಂಸ್ಥೆಗಳು ಮುಂದೆ ಬಂದಿದೆ. ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆ, ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ ಈ ಮಾನವೀಯ ನಿರ್ಧಾರ ಕೈಗೊಂಡಿದ್ದು, 5ವರ್ಷದ ವಿದ್ಯಾರ್ಥಿಗಳಿಂದ ಹಿಡಿದು ಎಂಜಿನಿಯರಿಂಗ್ ವರೆಗೆ 1 ವರ್ಷದ ಕಾಲ ಈ ವಿದ್ಯಾ ಸಂಸ್ಥೆಗಳಿಗೆ ಉಚಿತವಾಗಿ ಅಡ್ಮಿಷನ್ ಪಡೆದು ಶಿಕ್ಷಣ ಪಡೆಯಬಹುದು.
'ಮಸೀದಿಯು ಇಸ್ಲಾಂನ ಮುಖ್ಯ ಭಾಗವೇ ಎಂದು ತಿಳಿಯಲು 2 ವರ್ಷ ಬೇಕಾ?'

'ಮಸೀದಿಯು ಇಸ್ಲಾಂನ ಮುಖ್ಯ ಭಾಗವೇ ಎಂದು ತಿಳಿಯಲು 2 ವರ್ಷ ಬೇಕಾ?'

ಒಂದು ವೇಳೆ ಸಂಸತ್ ನಿಂದ ಸಂವಿಧಾನಕ್ಕೆ ವಿರುದ್ಧವಾದ ಕಾನೂನು ಮಾಡಿದರೆ ಆಗ ಸುಪ್ರೀಂ ಕೋರ್ಟ್ ಸರ್ವೋಚ್ಚ ಆಗುತ್ತದೆ. ಆದರೆ ಕಾನೂನು ರೂಪಿಸುವ ಅಧಿಕಾರ ಇರುವುದು ಸಂಸತ್ ಗೆ ಅದರರ್ಥ ನಾವು ಸಂಸತ್ ನ ದಾರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗಂತ ನಾವು ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದಲ್ಲ ಎಂಬ ಟ್ವೀಟ್ ಮಾಡಿದ್ದಾರೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಕೊನೆಗೆ ಸಂವಿಧಾನದ ಪ್ರಕಾರ ಸುಪ್ರೀಂ ಕೋರ್ಟ್ ಸರ್ವೋಚ್ಚ ಅಲ್ಲ. ಸುಪ್ರೀಂ ಕೋರ್ಟ್ ಒಂದು ಸ್ತಂಭವಾದರೆ, ಮತ್ತೊಂದು ಸ್ತಂಭ ಸಂಸತ್ ಎಂದಿದ್ದಾರೆ.
ಚಿತ್ರರಂಗದಿಂದ ದುನಿಯಾ ವಿಜಯ್ ಬಹಿಪ್ಕರಿಸಬೇಕು ಎಂದು ಒತ್ತಾಯ

ಚಿತ್ರರಂಗದಿಂದ ದುನಿಯಾ ವಿಜಯ್ ಬಹಿಪ್ಕರಿಸಬೇಕು ಎಂದು ಒತ್ತಾಯ

ನಿನ್ನೆ ದುನಿಯಾ ವಿಜಯ್ ಪ್ರಕರಣದ ಬಗ್ಗೆ ಮಾತನಾಡಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಇದು ದುನಿಯಾ ವಿಜಯ್ ಅವರ ವೈಯಕ್ತಿಯ ವಿಚಾರ ಹೀಗಾಗಿ ಚಿತ್ರರಂಗದಿಂದ ಬಹಿಷ್ಕಾರ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆದರೆ, ಇದೀಗ ಕನ್ನಡ ಚಳುವಳಿ ಒಕ್ಕೂಟ ದುನಿಯಾ ವಿಜಯ್ ವಿರುದ್ಧ ಫಿಲ್ಮ್ ಚೆಂಬರ್ ಗೆ ದೂರು ನೀಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಭಾಮಾ ಹರೀಶ್ ಅವರಿಗೆ ಮನವಿ ಪತ್ರ ನೀಡಿದೆ. ಅದರಲ್ಲಿ ದುನಿಯಾ ವಿಜಯ್ ನನ್ನು ಚಿತ್ರರಂಗದಿಂದ ಹೊರಗೆ ಹಾಕಬೇಕು ಎಂದು ಒತ್ತಾಯ ಮಾಡಿದ್ದಾರೆ. 
ಸಿಎಂ ಟ್ವೀಟ್ ಗೆ ಪ್ರತಿಕ್ರಿಯೆ: ಬಿಬಿಎಂಪಿಗೆ ಛೀ ಥೂ ಎಂದು ಉಗಿದ ಜನತೆ

ಸಿಎಂ ಟ್ವೀಟ್ ಗೆ ಪ್ರತಿಕ್ರಿಯೆ: ಬಿಬಿಎಂಪಿಗೆ ಛೀ ಥೂ ಎಂದು ಉಗಿದ ಜನತೆ

ಬೆಂಗಳೂರಲ್ಲಿ ಸಂಜೆ ಮಳೆಯ ಆರ್ಭಟಕ್ಕೆ ಮತ್ತೊಮ್ಮೆ ಮಹಾನಗರ ಬೆಚ್ಚಿದೆ. ಮಳೆ ಬಗ್ಗೆ ಜಾಗೃತೆಯಿಂದಿರಿ, ಬಿಬಿಎಂಪಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ಆದರೆ, ಸಾರ್ವಜನಿಕರು ಇದಕ್ಕೆ ಉತ್ತರವಾಗಿ ಬಿಬಿಎಂಪಿ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ತಗ್ಗು ಪ್ರದೇಶಗಳು ಸೇರಿದಂತೆ ಹಲವೆಡೆ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬೆಳಗ್ಗೆ ಬಿಸಿಲು, ಮಧ್ಯಾಹ್ನಕ್ಕೆ ಮೋಡ ಕವಿದ ವಾತಾವರಣ, ಸಂಜೆ ತುಂತುರು, ರಾತ್ರಿಯಾದರೆ ಭೋರ್ಗರೆಯುವ ಮಳೆ ಅಬ್ಬರದ ನಡುವೆ ಬಿಬಿಎಂಪಿ ಸುಖ ನಿದ್ದೆಯಲ್ಲಿದೆ ಎಂದು ಬೆಂಗಳೂರಿಗರು ಕೆಂಡಕಾರಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more