Short News

ಆಗಸ್ಟ್ 29ರಂದು ನಾಡಹಬ್ಬ ದಸರಾ ಗಜಪಯಣಕ್ಕೆ ಸ್ವಾಗತ

ಆಗಸ್ಟ್ 29ರಂದು ನಾಡಹಬ್ಬ ದಸರಾ ಗಜಪಯಣಕ್ಕೆ ಸ್ವಾಗತ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ. ಈ ಮಧ್ಯೆ, ಕೊಡಗು ಜಿಲ್ಲೆಯಲ್ಲಿನ ಪ್ರಾಕೃತಿಕ ವಿಕೋಪದಿಂದಾಗಿ ಮುಂದೂಡಲಾಗಿದ್ದ ಗಜಪಯಣ ಕಾರ್ಯಕ್ರಮ ಈಗ ಆ.29ಕ್ಕೆ ನಿಗದಿಯಾಗಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಗಜಪಯಣ ಆರಂಭವಾಗಲಿದ್ದು, ಅರಣ್ಯ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲಿರುವ 12 ಆನೆಗಳ ಪೈಕಿ 6 ಆನೆಗಳ ಮೊದಲ ತಂಡ ಆ.29ರಂದು ಮೈಸೂರಿನತ್ತ ಹೆಜ್ಜೆ ಹಾಕಲಿವೆ.
ಸುಳ್ಳುಗಳ 'ಬಫೂನ್ ರಾಜ' ರಾಹುಲ್ ಗಾಂಧಿ: ಜೇಟ್ಲಿ

ಸುಳ್ಳುಗಳ 'ಬಫೂನ್ ರಾಜ' ರಾಹುಲ್ ಗಾಂಧಿ: ಜೇಟ್ಲಿ

ರಫೇಲ್ ಯುದ್ಧ ವಿಮಾನ ಒಪ್ಪಂದ ಮತ್ತು 15 ಕೈಗಾರಿಕಾ ಸಂಸ್ಥೆಗಳಿಗೆ ಸಾಲ ಮನ್ನಾ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. 'ಹಾಸ್ಯಗಾರ ರಾಜಕುಮಾರ'ನ ಸುಳ್ಳುಗಳು ಎಂಬ ಫೇಸ್‌ಬುಕ್‌ ಪೋಸ್ಟ್ ಬರೆದಿರುವ ಅರುಣ್ ಜೇಟ್ಲಿ, ವಿಕಸನ ಹೊಂದಿರುವ ಪ್ರಜಾಪ್ರಭುತ್ವದಲ್ಲಿ ಸುಳ್ಳಿನ ಕಂತೆಯನ್ನೇ ಅವಲಂಬಿಸಿರುವ ಜನರು ಸಾರ್ವಜನಿಕ ಜೀವನದಲ್ಲಿ ಬದುಕಲು ಅನರ್ಹ ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಜೇಟ್ಲಿ ಈ ಹೇಳಿಕೆಯನ್ನು ಟ್ವಿಟ್ಟರ್‌ನಲ್ಲಿಯೂ ಪ್ರಕಟಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಪ್ರಸ್ತಾವನೆಗೆ ಭಾರತ ಒಪ್ಪಿಗೆ!

ಪಾಕಿಸ್ತಾನ ಪ್ರಧಾನಿ ಪ್ರಸ್ತಾವನೆಗೆ ಭಾರತ ಒಪ್ಪಿಗೆ!

ಪಾಕಿಸ್ತಾನ-ಭಾರತ ವಿದೇಶಾಂಗ ಸಚಿವರ ಮಾತುಕತೆ ನಡೆಸುವ ಇಮ್ರಾನ್ ಖಾನ್ ಅವರ ಪ್ರಸ್ತಾವನೆಗೆ ಭಾರತ ಒಪ್ಪಿಗೆ ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಭಯ ವಿದೇಶಾಂಗ ಸಚಿವರೂ ಪಾಲ್ಗೊಳ್ಳಲಿದ್ದು, ಈ ವೇಳೆ ಮಾತುಕತೆ ನಡೆಸುವುದಕ್ಕೆ ಭಾರತ ಒಪ್ಪಿಗೆ ನೀಡಿದೆ. ಈ ಬಗ್ಗೆ ಸ್ವತಃ ಎಂಇಎ ವಕ್ತಾರ ರವೀಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ನಡೆಸುವುದಕ್ಕೆ ಮನವಿ ಮಾಡಿತ್ತು. ಭಾರತ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಸುಷ್ಮಾ ಸ್ವರಾಜ್ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಯುಎನ್ ಜಿಎ ಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದಿದ್ದಾರೆ.
ಎಸಿಬಿ ದಾಳಿ, ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳ ಮೇಲೆ ಪ್ರಕರಣ

ಎಸಿಬಿ ದಾಳಿ, ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳ ಮೇಲೆ ಪ್ರಕರಣ

ನಿನ್ನೆ(ಸೆ.19) ಮತ್ತು ಇಂದು ಎಸಿಬಿಯು ವಿವಿಧ ಜಿಲ್ಲೆಗಳಲ್ಲಿ 4ಕಡೆ ದಾಳಿ ನಡೆಸಿ ಲಂಚ ಸ್ವೀಕರಿಸುತ್ತಿದ್ದ ಸರ್ಕಾರಿ ಅಧಿಕಾರಿಗಳನ್ನು ಅಪರಾಧ ಮಾಡುವ ಸಮಯದಲ್ಲೇ ಹಿಡಿದಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಪಿ.ಕುಮಾರಸ್ವಾಮಿ ಎಂಬವರು ಖಾತೆ ಬದಲಾವಣೆ ಮಾಡಿಕೊಡಲು 2500ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಯಾದಗಿರಿ ಜಿಲ್ಲೆ ಹುಣಸಿಗಿ ಗ್ರಾಮೀಣ ಭಾಗದ ಬೆಸ್ಕಾಂ ಸೆಕ್ಷನ್ ಅಧಿಕಾರಿ ಅಮರೇಶ ಎಂಬುವರು ಕಕ್ಕೇರಾ ಗ್ರಾಮದ ನಿವಾಸಿಯ ಜಮೀನಿನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕೊಡಲು 2000ಲಂಚ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more