Short News

ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆ ಚುನಾವಣೆಗೆ ಒಪ್ಪಿಗೆ

ಮೈಸೂರು, ಶಿವಮೊಗ್ಗ, ತುಮಕೂರು ಪಾಲಿಕೆ ಚುನಾವಣೆಗೆ ಒಪ್ಪಿಗೆ

ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಮಹಾನಗರ ಪಾಲಿಕೆಗಳ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದೆ. ಮೀಸಲಾತಿ, ವಾರ್ಡ್ ಮರು ವಿಂಗಡನೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ಗುರುವಾರ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಏಕಸದಸ್ಯ ಪೀಠ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು. ಶಿವಮೊಗ್ಗ, ಮೈಸೂರು ಮತ್ತು ತುಮಕೂರು ಮಹಾನಗರ ಪಾಲಿಕೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಿತು.ತುಮಕೂರಿನ ಕೆ.ಸಂದೀಪ್, ಮೈಸೂರಿನ ಎಂ.ಅನ್ವರ್ ಮುಂತಾದವರು ಪ್ರತ್ಯೇಕವಾಗಿ ರಿಟ್ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ಗೆ ದಾಖಲಿಸಿದ್ದರು.
ಶೀಘ್ರದಲ್ಲೇ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ  ಜಯಾಲಲಿತಾ ಜೀವನಾಧಾರಿತ ಸಿನೆಮಾ

ಶೀಘ್ರದಲ್ಲೇ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ ಜಯಾಲಲಿತಾ ಜೀವನಾಧಾರಿತ ಸಿನೆಮಾ

ತಮಿಳುನಾಡು ಜನತೆ ಪಾಲಿನ ಅಮ್ಮ , ಮಾಜಿ ಮುಖ್ಯಮಂತ್ರಿ ಜಯಾಲಲಿತಾರ ಜೀವನ ಕಥೆ ಬೆಳ್ಳಿತೆರೆ ಮೇಲೆ ಮೂಡಿ ಬರಲಿದೆ. 2019ರಲ್ಲಿ ಅಮ್ಮನ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಲನಚಿತ್ರ ವಿಮರ್ಶಕ ತರುಣ್​ ಆದರ್ಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಜಯಲಲಿತಾ ಅವರ ಹುಟ್ಟುಹಬ್ಬದ ದಿನವಾದ ಫೆಬ್ರವರಿ 24, 2019ರಂದು ಚಿತ್ರ ಬಿಡುಗಡೆಯಾಗುತ್ತಿದೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಜಯಾ ಸಿನೆಮಾ ತಾರೆಯೂ ಆಗಿದ್ದರು. ವಿವಿಧ ಭಾಷೆಗಳ 140 ಸಿನಿಮಾಗಳಲ್ಲಿ ಆಕೆ ನಟಿಸಿದ್ದರು.
ಅಚ್ಚರಿಯಾದರೂ ನಿಜ! ಆನೆ ಹೊಟ್ಟೆಯೊಳಗೆ ಪಶುವೈದ್ಯ!
<iframe class="rumble" width="640" height="360" src="https://rumble.com/embed/ugfce.v3ll9r/" frameborder="0" allowfullscreen></iframe>

ಅಚ್ಚರಿಯಾದರೂ ನಿಜ! ಆನೆ ಹೊಟ್ಟೆಯೊಳಗೆ ಪಶುವೈದ್ಯ!

ಕೇರಳದಲ್ಲಿ ಪಶುವೈದ್ಯರಾಗಿರುವ ಮಹೇಶ್ ಬಾಬು ಅವರು ಸತ್ತ ಪ್ರಾಣಿಗಳ ಅಂಗಾಂಗಗಳನ್ನು ತೆಗೆದು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಕೆಲಸ ಮಾಡುತ್ತಾರೆ. ಈ ಆನೆಯು ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಆನೆಯ ಹೊಟ್ಟೆಯೊಳಗಿನ ಅಂಗಾಂಗಗಳನ್ನು ತೆಗೆಯಲು ಆಗುವುದಿಲ್ಲವೆಂದು ತಿಳಿದ ಅವರು ಆನೆಯ ಹೊಟ್ಟೆಯೊಳಗೆ ಹೋಗಲು ನಿರ್ಧರಿಸಿದರು.ಗದ್ದೆಯೊಳಗೆ ಆನೆಗಳ ಹಿಂಡು ನುಗ್ಗಿ ಬಂದು ಬೆಳೆಗೆ ಹಾನಿ ಮಾಡುವುದನ್ನು ತಡೆಯಲು ಇಲ್ಲಿನ ರೈತರು ತಮ್ಮ ಹೊಲಗಳಿಗೆ ವಿದ್ಯುತ್ ಬೇಲಿಯನ್ನು ಅಳವಡಿಸಿದ್ದಾರೆ. ಈ ಆನೆಯು ಬೇಲಿಯ ವಿದ್ಯುತ್ ಆಘಾತಕ್ಕೆ ಸಿಲುಕಿ ಸಾವನ್ನಪ್ಪಿದೆ.

ಮಲೆನಾಡಲ್ಲಿ ನಿಲ್ಲದ ಮಳೆ ಅಬ್ಬರ, ನಾಲ್ಕೈದು ಕಡೆ ಬಿರುಕುಬಿಟ್ಟ ರಸ್ತೆ

ಮಲೆನಾಡಲ್ಲಿ ನಿಲ್ಲದ ಮಳೆ ಅಬ್ಬರ, ನಾಲ್ಕೈದು ಕಡೆ ಬಿರುಕುಬಿಟ್ಟ ರಸ್ತೆ

ಮಲೆನಾಡಿನಲ್ಲಿ ಮುಂದುವರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರಸ್ತೆ ಬಿರುಕು ಬಿಟ್ಟು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕೊಪ್ಪ ತಾಲೂಕಿನ ಗುಡ್ಡೆತೋಟದ ರಸ್ತೆಯಲ್ಲಿ 4ಗ್ರಾಮಗಳಿಗೆ ಸಂಚಾರ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಭೂ ಕುಸಿತಗೊಂಡು ರಸ್ತೆ ಬಿಡಿಕು ಬಿಟ್ಟ ಪರಿಣಾಮ ರಸ್ತೆ ಮಾರ್ಗವಿಲ್ಲದೆ ನೂರಾರು ಗ್ರಾಮದ ಗ್ರಾಮಸ್ಥರು ಪರದಾಡುತ್ತಿದ್ದಾರೆ. 4-5 ಕಡೆಯಲ್ಲಿ ರಸ್ತೆ ಬಿರುಕು ಬಿಟ್ಟಿದ್ದು, ಮೊನ್ನೆ ಸಹ ಒಂದು ಕಡೆ ಬಿರುಕು ಬಿಟ್ಟಿತ್ತು. ಅಷ್ಟೇ ಅಲ್ಲ, NRಪುರ ತಾಲೂಕಿನ ಮೇಲ್ಪಾಲ್ ಗ್ರಾಮದ‌ ಸಮೀಪ ಮೇಲ್ಪಾಲ್_ಹೊಡ್ಸಲು ಗ್ರಾಮದ ಮಧ್ಯೆಯೂ ಅವಘಡ ಸಂಭವಿಸಿದ್ದು, ಸುಮಾರು 10ಅಡಿ ಆಳಕ್ಕೆ 300ಮೀಟರ್ ರಸ್ತೆ ಕುಸಿದಿದೆ. 
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more