Short News

ಅಕ್ರಮ ಫ್ಲೆಕ್ಸ್ : ಸಿಎಸ್ ಮುಚ್ಚಳಿಕೆ ಪತ್ರಕ್ಕೆ ಹೈಕೋರ್ಟ್ ಚಾಟಿಯೇಟು

ಅಕ್ರಮ ಫ್ಲೆಕ್ಸ್ : ಸಿಎಸ್ ಮುಚ್ಚಳಿಕೆ ಪತ್ರಕ್ಕೆ ಹೈಕೋರ್ಟ್ ಚಾಟಿಯೇಟು

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಅಕ್ರಮ ಬ್ಯಾನರ್‌, ಫ್ಲೆಕ್ಸ್‌, ಹೋರ್ಡಿಂಗ್ಸ್‌ಗಳ ತೆರವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೈಕೋರ್ಟ್‌ಗೆ ಶುಕ್ರವಾರ ಪ್ರಮಾಣಪತ್ರ ಸಲ್ಲಿಸಿದ್ದಾರೆ.ಈ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಹೈಕೋರ್ಟ್‌ ತೀರ್ವ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಕಣ್ಣೊರೆಸುವ ತಂತ್ರಗಳನ್ನು ನಿಲ್ಲಿಸಿ ಎಂದು ಕಟುವಾಗಿಯೇ ನುಡಿದಿದೆ. ಅನಧಿಕೃತ ಫ್ಲೆಕ್ಸ್‌ ಗಳ ಹಾವಳಿ ಮಿತಿಮೀರಿದ್ದು ಇವೆಲ್ಲವನ್ನೂ ತೆರವುಗೊಳಿಸುವಂತೆ ಪೊಲೀಸರು ಹಾಗೂ ಬಿಬಿಎಂಪಿ ಹೈಕೋರ್ಟ್‌ ಸೂಚನೆ ನೀಡಿತ್ತು. ಆದರೆ ಎಷ್ಟು ಹೋರ್ಡಿಂಗ್‌ಗಳನ್ನು ತೆರವುಗೊಳಿಸಿದ್ದೇವೆ ಎನ್ನುವ ಪೂರ್ಣ ಮಾಹಿತಿಯನ್ನು ನೀಡಿಲ್ಲ.
ಮಲೆಷ್ಯಾದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ಇಂಟರ್‌ನೆಟ್‌ ನಿಷೇಧ!!

ಮಲೆಷ್ಯಾದಲ್ಲಿ 17 ವರ್ಷದೊಳಗಿನ ಮಕ್ಕಳಿಗೆ ಇಂಟರ್‌ನೆಟ್‌ ನಿಷೇಧ!!

ಮಕ್ಕಳ ಮೇಲೆ ಅಂತರ್ಜಾಲವು ಬೀರುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ಸಲುವಾಗಿ 17ವರ್ಷದೊಳಗಿನ ಯುವಪೀಳಿಗೆಗೆ ರಾತ್ರಿ ವೇಳೆ ಅಂತರ್ಜಾಲವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲು ಮಲೇಷ್ಯಾ ಸರಕಾರ ಯೋಜಿಸುತ್ತಿದೆ. ಸಾಮಾಜಿಕ ಜಾಲತಾಣ ಬಳಕೆಯ ಚಟ ಹತ್ತಿಕ್ಕಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ವಿಡಿಯೊ ಗೇಮ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆಯ ಚಟ ಹತ್ತಿಕ್ಕಲು ರಾತ್ರಿ 12 ಗಂಟೆಯಿಂದ ಬೆಳಗಿನ ಜಾವ 6 ಗಂಟೆವರೆಗೆ ಇಂಟರ್‌ನೆಟ್‌ ಬಳಕೆ ನಿಷೇಧಿಸಲು ಮಲೇಷ್ಯಾ ಸರಕಾರ ಯೋಜಿಸುತ್ತಿದೆ. ಉಪ ಆರೋಗ್ಯ ಸಚಿವ ಡಾ.ಲೀ ಬೂನ್‌ ಚೈ ಅವರು ಈ ಬಗ್ಗೆ ಮಲೇಷ್ಯಾ ಸಂಸತ್‌ಗೆ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

ಚಿಕ್ಕಮಗಳೂರು : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ ಇದೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 31, 2018. ಜಿಲ್ಲಾ ಪಂಚಾಯತ್ ಚಿಕ್ಕಮಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 19 ಅಂಗನವಾಡಿ ಕಾರ್ಯಕರ್ತೆ, 77 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 18 ರಿಂದ 35 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ 45 ವರ್ಷದ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ.
ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ

ಯೋಗಿ ಆದಿತ್ಯನಾಥ ಜೀವನಗಾಥೆ ಪುಸ್ತಕ ಭಾರಿ ಮಾರಾಟ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೀವನಗಾಥೆಯ ಕೃತಿ 'ಯೋಗಿ ಆದಿತ್ಯನಾಥ: ದಿ ರೈಸ್ ಆಫ್‌ ಎ ಸ್ಯಾಫ್ರೋನ್ ಸೋಷಿಯಲಿಸ್ಟ್' ದೇಶದ ಅತಿ ಹೆಚ್ಚು ಮಾರಾಟ ಕಂಡ ಪುಸ್ತಕಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಲಕ್ನೋದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಉಪ ಸ್ಥಾನಿಕ ಸಂಪಾದಕ ಪ್ರವೀಣ್ ಕುಮಾರ್ ಈ ಪುಸ್ತಕ ಬರೆದಿದ್ದು, ಉತ್ತರಾಖಂಡದ ಚಿಕ್ಕ ಹಳ್ಳಿಯಿಂದ ಗೋರಖನಾಥ ದೇವಸ್ಥಾನ, ಸಂಸತ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವವರೆಗಿನ ಯೋಗಿ ಆದಿತ್ಯನಾಥ ಅವರ ಪಯಣದ ಕುರಿತು ಮಾಹಿತಿಯನ್ನು ಒಳಗೊಂಡಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more