Short News

ಜೆಡಿಎಸ್‌ ಕಾರ್ಯಕರ್ತರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವಂತಿಲ್ಲ!

ಜೆಡಿಎಸ್‌ ಕಾರ್ಯಕರ್ತರು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವಂತಿಲ್ಲ!

ವಿಧಾನಸೌಧದಲ್ಲಿ ಶಾಸಕರು ಸಚಿವರಿಗಿಂತ ಜೆಡಿಎಸ್‌ ಕಾರ್ಯಕರ್ತರೇ ಹೆಚ್ಚು ಕಾಣಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದು, ಇನ್ನುಮುಂದೆ ವಿಧಾನಸೌಧಕ್ಕೆ ಬಾರದಂತೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಜೆಡಿಎಸ್‌ ಸಭೆಯಲ್ಲಿ ಅಸಮಾಧಾನ ಹೊರಹಾಕಿರುವ ಕುಮಾರಸ್ವಾಮಿ, ವಿಧಾನಸೌಧದಲ್ಲಿ ಜೆಡಿಎಸ್‌ ಶಾಸಕರಿಗಿಂತಲೂ ಕಾರ್ಯಕರ್ತರು, ಮುಂಖಂಡರೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಹಾಗಾಗಿ ಏನೇ ಸಮಸ್ಯೆಗಳಿದ್ದರೂ ಜೆಪಿ ಭವನದಲ್ಲಿಯೇ ಬಗೆಹರಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ವಿಧಾನಸೌಧಕ್ಕೆ ಬರೆಬೇಡಿ ಎಂದು ಸೂಚನೆ ನೀಡಿದ್ದಾರೆ.
ಬಿಸ್ಕತ್​​ ಎಸೆದು ಸುದ್ದಿಯಾದ ರೇವಣ್ಣ ಟೀಕೆ ವ್ಯಕ್ತವಾದ ಬಳಿಕ ಸ್ಪಷ್ಟನೆ ನೀಡಿದ್ದು ಹೇಗೆ ಗೊತ್ತಾ?

ಬಿಸ್ಕತ್​​ ಎಸೆದು ಸುದ್ದಿಯಾದ ರೇವಣ್ಣ ಟೀಕೆ ವ್ಯಕ್ತವಾದ ಬಳಿಕ ಸ್ಪಷ್ಟನೆ ನೀಡಿದ್ದು ಹೇಗೆ ಗೊತ್ತಾ?

ಕೊಡಗಿನ ನಿರಾಶ್ರಿತರ ಶಿಬಿರದಲ್ಲಿ ನಿರಾಶ್ರಿತರಿಗೆ ಬಿಸ್ಕೆಟ್‌ ಅನ್ನು ದರ್ಪದಿಂದ ಎಸೆದು ಸಾಮಾಜಿಕ ಮಾಧ್ಯಮಗಳಿಂದ ಹಾಗೂ ಸಾರ್ವಜನಿಕರಿಂದ ತೀವ್ರ ಕೋಪಕ್ಕೆ ಗುರಿ ಆಗಿರುವ ಸಚಿವ ರೇವಣ್ಣ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರದಲ್ಲಿ ಇರುವವರಿಗೆ ಬಿಸ್ಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಬಿಸ್ಕೆಟ್ ಅನ್ನು ಎಸೆದೆ, ಒಳ್ಳೆಯ ಭಾವನೆಯಿಂದಲೇ ಅವರಿಗೆ ನೆರವು ಮಾಡಿದ್ದೇನೆ ಎಂದಿದ್ದಾರೆ. ರಾಮನಾಥಪುರದ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ್ದ ವೇಳೆ ಬಿಸ್ಕೆಟ್‌ ಪ್ಯಾಕೆಟ್‌ಗಳನ್ನು ಎಸೆಯುವ ವಿಡಿಯೋ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಅಮೇಜಾನ್ ಪ್ರೈಮ್‌ನಲ್ಲಿವೆ ಭಾರತ ಕೇಂದ್ರಿತ ಬೆಸ್ಟ್‌ ವಿಡಿಯೋ ಸರಣಿಗಳು..!

ಅಮೇಜಾನ್ ಪ್ರೈಮ್‌ನಲ್ಲಿವೆ ಭಾರತ ಕೇಂದ್ರಿತ ಬೆಸ್ಟ್‌ ವಿಡಿಯೋ ಸರಣಿಗಳು..!

ಅಮೇಜಾನ್ ಪ್ರೈಮ್ ಇನ್ವೆನ್ಸ್ ಮೆಂಟ್ ಭಾರತದಲ್ಲಿ ಮಾಡಬಹುದಾದ ಬೆಸ್ಟ್ ಇನ್ವೆಸ್ಟ್ ಮೆಂಟ್ ಗಳಲ್ಲಿ ಒಂದಾಗಿದೆ. ಇದರಲ್ಲಿ ನಿಮಗೆ ದೊಡ್ಡ ಮಟ್ಟದ ಡೀಲ್ ಗಳು ಲಭ್ಯವಾಗುತ್ತದೆ. ಒಂದೇ ದಿನದಲ್ಲಿ ಡೆಲಿವರಿ, ಅಮೇಜಾನ್ ಪ್ರೈಮ್ ಡೇ ಡೀಲ್ ಮತ್ತು ಪ್ರೈಮ್ ಚಂದಾದಾರರಿಗೆ ಬೇಗನೆ ಡೆಲಿವರಿ ಅವಕಾಶ ಹೀಗೆ ಹತ್ತು ಹಲವು ಅವಕಾಶಗಳು ಸಿಗುತ್ತದೆ. ಅಮೇಜಾನ್ ನ ಪ್ರೈಮ್ ಚಂದಾದಾರಿಕೆಯು ತಿಂಗಳಿಗೆ 129 ರುಪಾಯಿ ಅಥವಾ 12 ತಿಂಗಳಿಗೆ 999 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತದೆ . ಖಂಡಿತವಾಗಲೂ ಇದು ಹಣಕ್ಕೆ ತಕ್ಕ ಲಾಭವನ್ನು ಒದಗಿಸುತ್ತದೆ.

ದೋಸೆ ಮಾರಿದ ಉಪೇಂದ್ರ: ಇದು ರಿಯಲ್ ಸ್ಟಾರ್ ಮಾಡಿದ ರಿಯಲ್ ಕೆಲಸ.!

ದೋಸೆ ಮಾರಿದ ಉಪೇಂದ್ರ: ಇದು ರಿಯಲ್ ಸ್ಟಾರ್ ಮಾಡಿದ ರಿಯಲ್ ಕೆಲಸ.!

ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಹೂವಿನ ವ್ಯಾಪಾರ ಮಾಡಿ ಪುಷ್ಪಲತಾ ಎಂಬ ಮಹಿಳೆಗೆ ಸಹಾಯ ಮಾಡಿದ್ದರು. ಈ ವಾರದ ಸಂಚಿಕೆಯಲ್ಲಿ ಪ್ರಿಯಾಂಕಾ ಪತಿ ಉಪೇಂದ್ರ ಹೋಟೆಲ್ ನಲ್ಲಿ ಕೆಲಸ ಮಾಡುವ ಮೂಲಕ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡು, ವಿಕಲ ಚೇತನ ಅಕ್ಕ ಮತ್ತು ತಮ್ಮನನ್ನು ಸಾಕಲು ಕಷ್ಟ ಪಡುತ್ತಿರುವ ಕೋಮಲ ಅವರಿಗಾಗಿ ಸಹಾಯ ಮಾಡಲು ಸೂಪರ್ ಸ್ಟಾರ್ ಉಪೇಂದ್ರ ರೆಡಿಯಾಗಿದ್ದಾರೆ. ಹೋಟೆಲ್ ನಲ್ಲಿ ದೋಸೆ, ಇಡ್ಲಿ ಮತ್ತು ಚಿತ್ರಾನ್ನವನ್ನು ತಯಾರಿಸಿ ಮಾರಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more