Short News

ಕರಾವಳಿಯಲ್ಲಿ ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್

ಕರಾವಳಿಯಲ್ಲಿ ಮಳೆಯ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಬಂದ್

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಹವಾಮಾನ ಬದಲಾಗಿ ಮತ್ತೆ ಮಳೆ ಬಿರುಸುಗೊಂಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಗುಂಡ್ಯಾ, ಶಿರಾಡಿ, ಸುಬ್ರಹ್ಮಣ್ಯ ಸೇರಿದಂತೆ ಘಟ್ಟದ ತಪ್ಪಲಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗುಂಡ್ಯ ಸಮೀಪದ ಉದನೆ ಎಂಬಲ್ಲಿ ಹೊಳೆ ತುಂಬಿ ಹರಿದಿದ್ದು, ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೇತುವೆ ಮೇಲಿನಿಂದ ಹರಿದಿದೆ. ಹೀಗಾಗಿ ಹೆದ್ದಾರಿ ಸಂಪರ್ಕ ಬಂದ್ ಮಾಡಲಾಗಿದ್ದು, ಇಕ್ಕೆಲಗಳಲ್ಲಿ ವಾಹನಗಳು ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಿವೆ.‌
ಕೋಣಂದೂರಿನಲ್ಲಿ ಮಳೆ ಹೊಡೆತಕ್ಕೆ ಗೋಡೆ ಕುಸಿದು ಬಾಲಕ ಸಾವು

ಕೋಣಂದೂರಿನಲ್ಲಿ ಮಳೆ ಹೊಡೆತಕ್ಕೆ ಗೋಡೆ ಕುಸಿದು ಬಾಲಕ ಸಾವು

ಭಾರೀ ಮಳೆಗೆ ತಾಲೂಕಿನ ಕೋಣಂದೂರಿನ ಕೆಇಬಿ ಹಿಂಭಾಗದಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಅಯುಬ್ ಎಂಬುವವರ ಮನೆ ಗೋಡೆ ಕುಸಿದು ಅವರ ಮಗ ಮಸೂದ್ (5 ವರ್ಷ) ಇಂದು ಗುರುವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಮತ್ತು ಕೋಣಂದೂರು ಪೋಲಿಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗ್ಗೆ ಕಾಫಿ ಕುಡಿಯುತ್ತ ಕುಳಿತಿದ್ದ ಸಮಯದಲ್ಲಿ ಮಳೆಯಿಂದ ತೇವಗೊಂಡಿದ್ದ ಗೋಡೆ ಕುಸಿದು ಬಾಲಕನ ಮೇಲೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶಿವಮೊಗ್ಗ ಸೇರಿದಂತೆ, ದಕ್ಷಿಣ ಕನ್ನಡ, ಬಳ್ಳಾರಿ, ಉತ್ತರ ಕನ್ನಡ ಭಾಗಗಳಲ್ಲಿ ಕಳೆದೆರೆಡು ವಾರಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ.
ಶೀಘ್ರದಲ್ಲೇ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ  ಜಯಾಲಲಿತಾ ಜೀವನಾಧಾರಿತ ಸಿನೆಮಾ

ಶೀಘ್ರದಲ್ಲೇ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ ಜಯಾಲಲಿತಾ ಜೀವನಾಧಾರಿತ ಸಿನೆಮಾ

ತಮಿಳುನಾಡು ಜನತೆ ಪಾಲಿನ ಅಮ್ಮ , ಮಾಜಿ ಮುಖ್ಯಮಂತ್ರಿ ಜಯಾಲಲಿತಾರ ಜೀವನ ಕಥೆ ಬೆಳ್ಳಿತೆರೆ ಮೇಲೆ ಮೂಡಿ ಬರಲಿದೆ. 2019ರಲ್ಲಿ ಅಮ್ಮನ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಲನಚಿತ್ರ ವಿಮರ್ಶಕ ತರುಣ್​ ಆದರ್ಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಜಯಲಲಿತಾ ಅವರ ಹುಟ್ಟುಹಬ್ಬದ ದಿನವಾದ ಫೆಬ್ರವರಿ 24, 2019ರಂದು ಚಿತ್ರ ಬಿಡುಗಡೆಯಾಗುತ್ತಿದೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಜಯಾ ಸಿನೆಮಾ ತಾರೆಯೂ ಆಗಿದ್ದರು. ವಿವಿಧ ಭಾಷೆಗಳ 140 ಸಿನಿಮಾಗಳಲ್ಲಿ ಆಕೆ ನಟಿಸಿದ್ದರು.
ಅಚ್ಚರಿಯಾದರೂ ನಿಜ! ಆನೆ ಹೊಟ್ಟೆಯೊಳಗೆ ಪಶುವೈದ್ಯ!
<iframe class="rumble" width="640" height="360" src="https://rumble.com/embed/ugfce.v3ll9r/" frameborder="0" allowfullscreen></iframe>

ಅಚ್ಚರಿಯಾದರೂ ನಿಜ! ಆನೆ ಹೊಟ್ಟೆಯೊಳಗೆ ಪಶುವೈದ್ಯ!

ಕೇರಳದಲ್ಲಿ ಪಶುವೈದ್ಯರಾಗಿರುವ ಮಹೇಶ್ ಬಾಬು ಅವರು ಸತ್ತ ಪ್ರಾಣಿಗಳ ಅಂಗಾಂಗಗಳನ್ನು ತೆಗೆದು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಕೆಲಸ ಮಾಡುತ್ತಾರೆ. ಈ ಆನೆಯು ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಆನೆಯ ಹೊಟ್ಟೆಯೊಳಗಿನ ಅಂಗಾಂಗಗಳನ್ನು ತೆಗೆಯಲು ಆಗುವುದಿಲ್ಲವೆಂದು ತಿಳಿದ ಅವರು ಆನೆಯ ಹೊಟ್ಟೆಯೊಳಗೆ ಹೋಗಲು ನಿರ್ಧರಿಸಿದರು.ಗದ್ದೆಯೊಳಗೆ ಆನೆಗಳ ಹಿಂಡು ನುಗ್ಗಿ ಬಂದು ಬೆಳೆಗೆ ಹಾನಿ ಮಾಡುವುದನ್ನು ತಡೆಯಲು ಇಲ್ಲಿನ ರೈತರು ತಮ್ಮ ಹೊಲಗಳಿಗೆ ವಿದ್ಯುತ್ ಬೇಲಿಯನ್ನು ಅಳವಡಿಸಿದ್ದಾರೆ. ಈ ಆನೆಯು ಬೇಲಿಯ ವಿದ್ಯುತ್ ಆಘಾತಕ್ಕೆ ಸಿಲುಕಿ ಸಾವನ್ನಪ್ಪಿದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more