Maruti: ಬೆಲೆ ಬರೀ ಇಷ್ಟೇನಾ? 30 ಲಕ್ಷ ಮಂದಿ ಮುಗಿಬಿದ್ದು ಖರೀದಿ!
ಆಟೋಮೊಬೈಲ್ಸ್
- 2 hr, 21 min ago
ಭಾರತದಲ್ಲಿ ಎಸ್ಯುವಿಗಳು ಬಂದ ನಂತರ ಸೆಡಾನ್ಗಳಿಗೆ ಡಿಮ್ಯಾಂಡ್ ಕಡಿಮೆಯಾಗಿರುವುದು ಎಲ್ಲರಿಗೂ ಗೊತ್ತು. ಆದರೆ ಈ ಒಂದು ಸೆಡಾನ್ ಕಾರು ಎಸ್ಯುವಿಗಳನ್ನು ಮೀರಿ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಎಸ್ಯುವಿಗಳ ಅಬ್ಬರದ ನಡೆಯುವೆಯೂ ಈ ಸಣ್ಣ ಕಾಂಪ್ಯಾಕ್ಟ್ ಸೆಡಾನ್ ಕಾರು ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 30 ಲಕ್ಷ ಕಾರುಗಳು ಮಾರಾಟವಾಗಿವೆ. ಹೌದು, ಭಾರತದಲ್ಲಿ ಮಾರುತಿ ಡಿಜೈರ್ (Maruti Suzuki Dzire) ಕಾಂಪ್ಯಾಕ್ಟ್ ಸೆಡಾನ್ 30 ಲಕ್ಷ (3 ಮಿಲಿಯನ್) ಮಾರಾಟದ ಗಡಿಯನ್ನು ದಾಟಿದೆ ಎಂದು ಮಾರುತಿ ಸುಜುಕಿ (Maruti Suzuki) ಘೋಷಿಸಿದೆ. ಡಿಜೈರ್ ಮಾಲೀಕರಲ್ಲಿ ಸುಮಾರು ಅರ್ಧದಷ್ಟು ಜನರು ಮೊದಲ ಬಾರಿಯ ಕಾರು ಖರೀದಿದಾರರಾಗಿರುವುದು ವಿಶೇಷ.