Short News

ಕೊಡಗಿನಲ್ಲಿ ಜನರ ಬಳಿಕ ಜಾನುವಾರುಗಳಿಗೆ ಹೆಲ್ಪ್ ಲೈನ್

ಕೊಡಗಿನಲ್ಲಿ ಜನರ ಬಳಿಕ ಜಾನುವಾರುಗಳಿಗೆ ಹೆಲ್ಪ್ ಲೈನ್

ಕೊಡಗಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳು ಕೂಡ ಸಂಕಷ್ಟಕ್ಕೀಡಾಗಿದೆ ಹಾಗಾಗಿ ಪ್ರಾಣಿಗಳಿಗಾಗಿಯೇ ಸಹಾಯವಾಣಿಯನ್ನು ಆರಂಭಿಸಿದೆ. ಜೀವನೋಪಾಯಕ್ಕಾಗಿ ಅಲೆಮಾರಿಯಾಗುವ ಸಾಧ್ಯತೆ ಇದೆ. ಜಾನುವಾರುಗಳ್ನು ರಕ್ಷಿಸಿ ಅವುಗಳನ್ನು ಪಾಲಾನೆಗಾಗಿ ಸರ್ಕಾರ ಸೋಮವಾರಪೇಟೆಯ ಕುಶಾಲನರದಲ್ಲಿ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿ ಸುಧಾರಿಸುವ ತನಕ ಜಾನುವಾರುಗಳನ್ನು ಈ ಕೇಂದ್ರದಲ್ಲಿ ಪಾಲನೆ ಮಾಡಲಾಗುವುದು. ಸಂಕಷ್ಟಕ್ಕೀಡಾದ ಜಾನುವಾರುಗಳು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ: 08272-229449 ಸಂಪರ್ಕಿಸಬಹುದು.
ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಹುಳಿ ಮಿಶ್ರಿತ ಹಣ್ಣಿನ ಸಿಪ್ಪೆಯ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯ ಪ್ರಯೋಜನಗಳು

ಕಿತ್ತಳೆ ಸಿಪ್ಪೆಯಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿವೆ ಹಾಗೂ ಹಲವಾರು ಬಗೆಯ ಕ್ಯಾನ್ಸರ್ ಆವರಿಸುವುದರಿಂದ ರಕ್ಷಿಸುತ್ತವೆ. ಲಿಂಬೆ, ಕಿತ್ತಳೆ, ಚಕ್ಕೋತ ಮೊದಲಾದ ಹಣ್ಣುಗಳ ಸಿಪ್ಪೆಗಳಲ್ಲಿ ವಿಕಿರಣದಿಂದ ಜೀವಕೋಶಗಳು ಹಾನಿಗೊಳಗಾಗುವುದನ್ನು ತಡೆಯುವ ಶಕ್ತಿ ಇದೆ. ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಲಿಂಬೆಯ ಸಿಪ್ಪೆಯ ಸೇವನೆಯಿಂದ ನಮ್ಮ ರಕ್ತದಲ್ಲಿರುವ ಸೀರಂ ಟ್ರೈಗ್ಲಿಸರೈಡುಗಳು ಅಥವಾ ಕೊಲೆಸ್ಟ್ರಾಲ್ ನ ಒಂದು ಭಾಗ ಎಂದು ನಾವು ತಿಳಿದುಕೊಂಡಿರುವ ಈ ಅಂಶ ಕಡಿಮೆಯಾಗುತ್ತದೆ. ಅಲ್ಲದೇ ಕಿತ್ತಳೆಯ ಸಿಪ್ಪೆಯ ಸೇವನೆಯಿಂದ ಇನ್ಸುಲಿನ್ ಅನ್ನು ತಾಳಿಕೊಳ್ಳುವ ಕ್ಷಮತೆಯೂ ಉತ್ತಮಗೊಳ್ಳುತ್ತದೆ.

ಪಾಕಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ಪಾಕಿಸ್ತಾನ ವಿರುದ್ಧ ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾಟದ 5ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 8 ವಿಕೆಟ್ ಜಯ ಸಾಧಿಸಿದೆ. ನಾಯಕ ರೋಹಿತ್ ಶರ್ಮ ಅರ್ಧ ಶತಕ (52) ಮತ್ತು ಶಿಖರ್ ಧವನ್ 46 ರನ್ ನೆರವಿನಿಂದ ಭಾರತ ಏಷ್ಯಾ ಕಪ್ ದ್ವಿತೀಯ ಸೆಣಸಾಟದಲ್ಲಿ ಮುನ್ನಡೆ ಪಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಪಾಕಿಸ್ತಾನ 43.1 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 162 ರನ್ ಪೇರಿಸಿ ಭಾರತಕ್ಕೆ 163 ರನ್ ಗುರಿ ನೀಡಿತ್ತು.
ಇಂದಿನ (ಸೆ.20) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಇಂದಿನ (ಸೆ.20) ದ್ವಾದಶ ರಾಶಿಗಳ ನಿತ್ಯ ಭವಿಷ್ಯ

ಮೇಷ : ಉದ್ಯೋಗದಲ್ಲಿ ಉನ್ನತ ಸ್ಥಾನಪ್ರಾಪ್ತಿ. ವೃಷಭ : ರಾಜಕಾರಣಿಗಳಿಗೆ ಉತ್ತಮವಾದ ದಿನ. ಬಹುದಿನಗಳ ಕನಸು ನೆರವೇರುತ್ತದೆ. ಮಿಥುನ: ಷೇರುಪೇಟೆ ವ್ಯವಹಾರದವರಿಗೆ ಅನುಕೂಲ. ಕಟಕ : ಹೊಸ ಉದ್ಯೋಗದ ಬಗ್ಗೆ ಯೋಚಿಸುವಿರಿ.. ಸಿಂಹ: ವಿವೇಚನೆಯಿಂದ ಕಾರ್ಯಪ್ರವೃತ್ತರಾಗಿ. ಕನ್ಯಾ: ಮೇಲಧಿಕಾರಿಯಿಂದ ಸಹಕಾರ. ವ್ಯಾಪಾರ- ವ್ಯವಹಾರದಲ್ಲಿ ಚಿಂತೆ ದೂರ. ತುಲಾ: ಹಣಕಾಸಿನ ವಿಷಯದಲ್ಲಿ ಹಿಡಿತವಿರಲಿ. ವೃಶ್ಚಿಕ: ಉನ್ನತ ಅಧಿಕಾರಿಗಳ ಸಂತೋಷಕ್ಕಾಗಿ ಹೆಚ್ಚು ಹಣ ವ್ಯಯ ಮಾಡುವಿರಿ. ಧನುಸ್ಸು:ಹಿರಿಯರಿಂದ ದುಃಖ. ದೂರ ಪ್ರಯಾಣ ಒಳ್ಳೆಯದಲ್ಲ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more