Short News

ಗ್ರಾಮಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ... ಕೊನೆಯ ದಿನಾಂಕ ಆಗಸ್ಟ್ 31

ಗ್ರಾಮಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ... ಕೊನೆಯ ದಿನಾಂಕ ಆಗಸ್ಟ್ 31

ಬೆಳಗಾವಿ ಜಿಲ್ಲಾ ಕಂದಾಯ ಇಲಾಖೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇರ ನೇಮಕಾತಿ ಕುರಿತು ಇದೀಗ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಸ್ಟ್ 31, 2018. ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ ಜುಲೈ 27, 2018. ದ್ವಿತೀಯ ಪಿಯುಸಿ ವಿದ್ಯಾಭ್ಯಾಸವಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ಬಗೆಗಿನ ಹೆಚ್ಚಿನ ಮಾಹಿತಿಗಾಗಿ http://www.regional-commissioner-belgaum.gov.in/english/belgaum.html ಗೆ ಭೇಟೆ ನೀಡಿ.
ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ

ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ

ಯುಜಿಸಿ, ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ 2018 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ಇದೇ ಸೆಪ್ಟಂಬರ್ 30 ರಂದು ಕೊನೆಗೊಳ್ಳಲಿದೆ. ನವಂಬರ್ 19ರಂದು ಈ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಲಭ್ಯವಾಗಲಿದ್ದು, ಜನವರಿ 10, 2018 ರಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಡಿಸಂಬರ್ 9 ರಿಂದ 23, 2018 ರವರೆಗೆ ಈ ಪರೀಕ್ಷೆ ನಡೆಯಲಿದ್ದು, 84 ಸಬ್‌ಜೆಕ್ಟ್ ನಲ್ಲಿ ಒಟ್ಟು 91 ಪರೀಕ್ಷೆ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಎರಡು ಪೋಸ್ಟ್ ಗೆ ನಡೆಸುವ ಪರೀಕ್ಷೆ ಇದಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 1 ರೊಳಗೆ ಅರ್ಜೀ ಶುಲ್ಕ ಪಾವತಿಸಬಹುದಾಗಿದೆ.
ಅಚ್ಚರಿ ಜಗತ್ತು: ಬೀಚ್‌ನಲ್ಲಿ ನಗ್ನವಾಗಿಯೇ ಮದುವೆಯಾದ ಜೋಡಿ!

ಅಚ್ಚರಿ ಜಗತ್ತು: ಬೀಚ್‌ನಲ್ಲಿ ನಗ್ನವಾಗಿಯೇ ಮದುವೆಯಾದ ಜೋಡಿ!

ಇಟಲಿಯ ದ್ವೀಪವಾಗಿರುವಂತಹ ಸರ್ಡಾನಿಯಾದಲ್ಲಿ ಈ ಮದುವೆ ಕಾರ್ಯಕ್ರಮವು ನಡೆಯಿತು. ನಗ್ನವಾಗಿಯೇ ಈ ಜೋಡಿ ತಮ್ಮನ್ನು ಪತಿ ಹಾಗೂ ಪತ್ನಿಯೆಂದು ಸ್ವೀಕರಿಸಿಕೊಂಡಿತು. ಮದುಮಗಳು ಕೇವಲ ಫ್ಲೋವಿಂಗ್ ವೇಲ್ ಮತ್ತು ಮದುಮಗನು ಡ್ಯಾಪರ್ ಬೋ ಟೈ ಮಾತ್ರ ಧರಿಸಿದ್ದ. ಈ ಸುಂದರ ಜೋಡಿಯು ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ಕಡೆಗಣಿಸಿತ್ತು. ಇದು ತುಂಬಾ ನಿಕಟವಾದ ಕಾರ್ಯಕ್ರಮವಾಗಿತ್ತು. ಕೇವಲ ಇಬ್ಬರು ಸ್ನೇಹಿತರನ್ನು ಮಾತ್ರ ಇದಕ್ಕೆ ಆಹ್ವಾನಿಸಲಾಗಿತ್ತು. ಅವರು ಕೂಡ ನಗ್ನರಾಗಿದ್ದರು. ನಗ್ನತೆ ಬಗ್ಗೆ ಕುಟುಂಬದವರು ಮತ್ತು ಸ್ನೇಹಿತರು ಹೆಚ್ಚು ಆರಾಮವಾಗಿರದ ಕಾರಣ ಮದುವೆ ಬಂದಿರಲಿಲ್ಲ.

ಇಸ್ರೋದಲ್ಲಿ 205 ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನ

ಇಸ್ರೋದಲ್ಲಿ 205 ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಪ್ರೆಂಟೀಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 13, 2018 ಕೊನೆಯ ದಿನಾಂಕ. ಐಟಿಐ ಸರ್ಟಿಫಿಕೇಟ್ ಜತೆ ಎಸ್‌ಎಸ್‌ಎಲ್ ಸಿ ಪಾಸಾಗಿರಬೇಕು. ಡಿಪ್ಲೋಮಾ ಅಥವಾ ಇಂಜಿನೀಯರಿಂಗ್ ವಿದ್ಯಾಭ್ಯಾಸವಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಆಯ್ಕೆಯಾದವರು ತಮಿಳುನಾಡಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಹುದ್ದೆಗೆ ಅರ್ಜಿ ಸಲ್ಲಿಸಲು IPRC ಆಫೀಶಿಯಲ್ ವೆಬ್‌ಸೈಟ್ https://www.iprc.gov.in/ ಗೆ ಲಾಗಿನ್ ಆಗಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more