Short News

ಇತಿಹಾಸ ಬರೆಯುತ್ತಿದೆ ಕಬಿನಿ ಹೊರಹರಿವು: ನಂಜನಗೂಡು ಭಾಗಶಃ ಜಲಾವೃತ

ಇತಿಹಾಸ ಬರೆಯುತ್ತಿದೆ ಕಬಿನಿ ಹೊರಹರಿವು: ನಂಜನಗೂಡು ಭಾಗಶಃ ಜಲಾವೃತ

ನೆರೆಯ ಕೇರಳದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹಾಗಾಗಿ ಕಬಿನಿ ಅಣೆಕಟ್ಟೆಯ ಹೊರ ಹರಿವನ್ನು 80 ಸಾವಿರ ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದು ಈವರೆಗಿನ ದಾಖಲೆ. 2001ರಲ್ಲಿ 68 ಸಾವಿರ ಕ್ಯೂಸೆಕ್ಸ್ ನೀರು ಹೊರಬಿಟ್ಟಿದ್ದೇ ಈವರೆಗಿನ ದಾಖಲೆ ಎಂದು ಅಣೆಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದೆರಡು ದಿನಗಳಿಂದ ಒಳಹರಿವು ಹೆಚ್ಚಿದ್ದರಿಂದ ಬುಧವಾರ ಬೆಳಗ್ಗೆಯಿಂದಲೇ ನೀರನ್ನು ನದಿಗೆ ಹರಿಸಲು ಆರಂಭಿಸಲಾಯಿತು.
ಈ ಗ್ರಾಮದ ಜನರು ಹಾವಿನೊಂದಿಗೆ ವಾಸಿಸುತ್ತಾರೆ!

ಈ ಗ್ರಾಮದ ಜನರು ಹಾವಿನೊಂದಿಗೆ ವಾಸಿಸುತ್ತಾರೆ!

ಇಲ್ಲೊಂದು ಹಳ್ಳಿಯಿದೆ. ಆ ಹಳ್ಳಿಯ ಜನರೆಲ್ಲಾ ಹಾವುಗಳೊಂದಿಗೆ ಜೀವಿಸುತ್ತಾರೆ. ಹಾವುಗಳು ಅವರ ಮೈಮೇಲೆ ಹರೆದಾಡುತ್ತಾ ಇದ್ದರೂ ಅವರಿಗೆ ಏನೂ ಮಾಡದು. ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಎನ್ನುವ ಯಾವುದೇ ತಾರತಮ್ಯವಿಲ್ಲ. ಎಲ್ಲರೂ ಹಾವಿನೊಂದಿಗೆ ಸಮಯವನ್ನು ಕಳೆಯುತ್ತಾರೆ.ಈ ವಿಚಾರ ನಂಬಲು ಸ್ವಲ್ಪ ಕಷ್ಟವಾದರೂ ಇದು ನಿಜ. ಹೌದು, ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿ ಇರುವ ಶೆಟ್ಟಪಾಲ್ ಹಳ್ಳಿಯ ಜನರು ಹಾವಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಹಾವಾಡಿಗರ ಸಂಖ್ಯೆ ಹೆಚ್ಚೆಂದು ಹೇಳಲಾಗುವುದು. ಶುಷ್ಕ ವಾತಾವರಣವನ್ನು ಹೊಂದಿರುವ ಈ ಪ್ರದೇಶದಲ್ಲಿ ಹಾವುಗಳ ಸಂಖ್ಯೆಯು ಅಧಿಕವಾಗಿವೆ.

ಹೊಡೆದಾಟ ಆರೋಪ: ಬೆನ್ ಸ್ಟೋಕ್ಸ್ ನಿರಪರಾಧಿಯೆಂದ ನ್ಯಾಯಾಲಯ

ಹೊಡೆದಾಟ ಆರೋಪ: ಬೆನ್ ಸ್ಟೋಕ್ಸ್ ನಿರಪರಾಧಿಯೆಂದ ನ್ಯಾಯಾಲಯ

ಇಂಗ್ಲೆಂಡ್ ನ ಬ್ರಿಸ್ಟಲ್ ನೈಟ್ ಕ್ಲಬ್ ನಲ್ಲಿನ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಬ್ರಿಸ್ಟಲ್ ಕ್ರೌನ್ ಕೋರ್ಟ್, ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ನಿರಪರಾಧಿಯೆಂದು ತೀರ್ಪಿತ್ತಿದೆ. ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಸ್ಟೋಕ್ಸ್ ಭಾರತ ಮತ್ತು ಇಂಗ್ಲೆಂಡ್ ನಡುವಣ 3ನೇ ಟೆಸ್ಟ್ ನಿಂದ ಹೊರಗುಳಿಯುವಂತಾಗಿತ್ತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ವಿಚಾರಣೆ ಬಳಿಕ ನ್ಯಾಯಾಲಯ ಸ್ಟೋಕ್ಸ್ ತಪ್ಪಿಸ್ಥನಲ್ಲ ಎಂದು ತೀರ್ಪಿತ್ತಿತು. ತಾನು ಪ್ರಜ್ಞೆ ತಪ್ಪುವಂತೆ ಹೊಡೆದಿದ್ದ ಎಂದು ಆರೋಪಿಸಿದ್ದ ಇನ್ನೊಬ್ಬ ರಿಯಾನ್ ಆಲಿ ಕೂಡ ವಿಚಾರಣೆ ಸಂದರ್ಭ ಹಾಜರಿದ್ದರು. ಅವರನ್ನೂ ನ್ಯಾಯಾಲಯ ನಿರಪರಾಧಿ ಎಂದು ಪರಿಗಣಿಸಿದೆ.
ದ್ವಾದಶ ರಾಶಿಗಳ (ಆಗಸ್ಟ್ 15) ಇಂದಿನ ದಿನಭವಿಷ್ಯ

ದ್ವಾದಶ ರಾಶಿಗಳ (ಆಗಸ್ಟ್ 15) ಇಂದಿನ ದಿನಭವಿಷ್ಯ

ಮೇಷ:ನಿಮ್ಮ ಕೆಲಸಕ್ಕೆ ಸಮಾಜದಿಂದ ಶ್ಲಾಘನೆ ವೃಷಭ:ನಿಮ್ಮ ಮಾತನ್ನು ಅಪಾರ್ಥಮಾಡಿ ಕೊಳ್ಳುವ ಸಾಧ್ಯತೆ . ಕಟಕ:ಹಲವು ದಿನಗಳಿಂದ ಕಾಡುತ್ತಿದ್ದ ಚಿಂತೆಗೆ ಮುಕ್ತಿ. ಸಿಂಹ:ಅನಿವಾರ್ಯವಾಗಿ ಹೆಚ್ಚಿನ ಹಣ ಖರ್ಚು ಮಾಡಲೇಬೇಕಾಗಬಹುದು. ಕನ್ಯಾ:ನಿಮ್ಮ ಮೇಲೆ ಹಳೆಯ ದ್ವೇಷ ಸಾಧಿಸಲು ಶತ್ರುಗಳ ಆಗಮಿಸಬಹುದು. ತುಲಾ:ಮನೆಯಲ್ಲಿ ಹಾಗೂ ಹೊರಹೋಗುವಾಗ ಎಚ್ಚರವಿರಲಿ. ವೃಶ್ಚಿಕ:ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಧನು:ಮಾಡಬೇಕೆಂದುಕೊಂಡ ಕೆಲಸ ಯಶಸ್ವಿಯಾಗಿ ಮುಗಿಯಲಿವೆ. ಮಕರ:ಶ್ರಮಕ್ಕೆ ತಕ್ಕ ಗೌರವ ಸಿಗದಿರಬಹುದು. ಕುಂಭ:ಮಾಡುವ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ. ಮೀನ:ಶ್ರಮಕ್ಕೆ ತಕ್ಕ ಗೌರವ ಸಿಗಲಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more