Short News

ಆಗಸ್ಟ್‌ 10ರಿಂದ ಕುಮಾರಸ್ವಾಮಿ ರಾಜ್ಯ ಪ್ರವಾಸ, ಗ್ರಾಮ ವಾಸ್ತವ್ಯ ಶುರು

ಆಗಸ್ಟ್‌ 10ರಿಂದ ಕುಮಾರಸ್ವಾಮಿ ರಾಜ್ಯ ಪ್ರವಾಸ, ಗ್ರಾಮ ವಾಸ್ತವ್ಯ ಶುರು

ನಾಳೆ (ಆಗಸ್ಟ್‌ 10)ರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಮೂರು ದಿನಗಳ ರಾಜ್ಯ ಪ್ರವಾಸ ಕೂಗೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ ಇಸ್ರೇಲ್ ಮಾದರಿ ಕೃಷಿಗೆ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಕಾಲ ಬಾಗಲಕೋಟೆ, ಧಾರವಾಡ, ವಿಜಯಪುರ, ಮಂಡ್ಯ, ಮೈಸೂರು ಜಿಲ್ಲೆಗಳ ಪ್ರವಾಸ ಮಾಡಲಿದ್ದು, ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ರೈತರು, ಯುವಕರೊಂದಿಗೆ ಒಡನಾಡಲಿದ್ದಾರೆ. ಆಗಸ್ಟ್‌ 10ರಂದು ಸಂಜೆ ಮೈಸೂರಿಗೆ ತಲುಪುವ ಸಿಎಂ, ಶನಿವಾರ ಬೆಳಿಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಆ ನಂತರ ಶ್ರೀರಂಗಪಟ್ಟಣದ ಸೀತಾಪುರ ಗ್ರಾಮದ ರೈತರೊಂದಿಗೆ ಭತ್ತ ನಾಟಿ ಮಾಡುವ ಮೂಲಕ ಇಸ್ರೇಲ್ ಮಾದರಿ ಕೃಷಿಗೆ ಚಾಲನೆ ನೀಡಲಿದ್ದಾರೆ.
ಯಮುನಾ ನದಿ ತೀರದಲ್ಲಿ  ವಾಜಪೇಯಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ

ಯಮುನಾ ನದಿ ತೀರದಲ್ಲಿ ವಾಜಪೇಯಿ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ

ನಿನ್ನೆ ಸಂಜೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ಅವರ ಪಾರ್ಥಿವ ಶರೀರವನ್ನು ದೆಹಲಿಯ ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ಅವರ ನಿವಾಸದಲ್ಲಿ ಇಡಲಾಗಿದೆ. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದ್ದು, ಇಂದು ಸಂಜೆಯೊಳಗೆ ಯಮುನಾ ನದಿ ದಡದಲ್ಲಿರುವ ರಾಜ್ ಘಾಟ್ ನಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇದಕ್ಕೂ ಮುನ್ನ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ರಾಜ್ ಘಾಟ್ ನ 'ಸ್ಮೃತಿ ಸ್ಥಳ'ದಲ್ಲಿ ವಾಜಪೇಯಿಗೆ ಪ್ರತ್ಯೇಕ ಸಮಾಧಿ ಮತ್ತು ಸ್ಮಾರಕ ನಿರ್ಮಿಸಲು ಎನ್‌ಡಿಎ ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಒಂದೂವರೆ ಎಕರೆ ಜಾಗ ಮೀಸಲಿಡಲಾಗಿದೆ.
ಸಿಕ್ಸ್ ಪ್ಯಾಕ್ ಆಬ್ಸ್ ಬೇಕೆಂದರೆ- ಈ ಟ್ರಿಕ್ಸ್ ಅನುಸರಿಸಿ

ಸಿಕ್ಸ್ ಪ್ಯಾಕ್ ಆಬ್ಸ್ ಬೇಕೆಂದರೆ- ಈ ಟ್ರಿಕ್ಸ್ ಅನುಸರಿಸಿ

ಸಿಕ್ಸ್ ಪ್ಯಾಕ್ ಆಬ್ ಪಡೆಯಲು ಒಮ್ಮೆಲೇ ವ್ಯಾಯಾಮ ಆರಂಭಿಸುವ ಮುಂಚೆ ವೈಜ್ಞಾನಿಕವಾಗಿ ಯಾವೆಲ್ಲ ಅಂಶಗಳು ಸಿಕ್ಸ್ ಪ್ಯಾಕ್ ಪಡೆಯಲು ಸಹಕಾರಿಯಾಗುತ್ತವೆ ಎಂಬುದನ್ನು ಅರಿತುಕೊಳ್ಳುವುದು ಅತಿ ಮುಖ್ಯ.ಬಹಳಷ್ಟು ಜನರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಸಿಕ್ಸ್ ಪ್ಯಾಕ್ ಅದರಲ್ಲಿಯೇ ಮುಚ್ಚಿ ಹೋಗುವ ಸಂದರ್ಭಗಳು ಹೆಚ್ಚಾಗಿರುತ್ತವೆ. ಅಂದರೆ ಗಟ್ಟಿ ಮುಟ್ಟಾದ ಆಬ್ ಇದ್ದರೂ ಅವು ಬೊಜ್ಜಿನ ಕಾರಣದಿಂದ ಹೊರಗೆ ಎದ್ದು ಕಾಣಲಾರವು. ಕೆಲವರು ಹುಟ್ಟುವಾಗಲೇ ತೆಳ್ಳನೆಯ ಮೈಕಟ್ಟು ಹೊಂದಿದ್ದು, ಉತ್ತಮ ಆಬ್ ರಚನೆಯನ್ನು ಅನುವಂಶಿಕವಾಗಿ ಪಡೆದಿರುತ್ತಾರೆ.

ವಾಜಪೇಯಿ ಬಗ್ಗೆ ಅಂದು ನೆಹರೂ ನುಡಿದಿದ್ದ ಭವಿಷ್ಯ ನಿಜವಾಯ್ತು!

ವಾಜಪೇಯಿ ಬಗ್ಗೆ ಅಂದು ನೆಹರೂ ನುಡಿದಿದ್ದ ಭವಿಷ್ಯ ನಿಜವಾಯ್ತು!

ಭಾರತದ ಮೊದಲ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂ ಅವರು ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದರು. 1957ರಲ್ಲಿವಾಜಪೇಯಿ ಬಲರಾಮ್ ಪುರ ಕ್ಷೇತ್ರದ ಸಂಸದರಾಗಿ ಸಂಸತ್ ಗೆ ಕಾಲಿಟ್ಟಿದ್ದರು. ಅಂದು ಸಂಸತ್ ನಲ್ಲಿ ವಾಜಪೇಯಿ ಮಾಡಿದ್ದ ಭಾಷಣವನ್ನು ಕೇಳಿದ್ದ ನೆಹರೂ ಸ್ಪೂರ್ತಿಗೊಂಡಿದ್ದರು. ಮುಂದಿನ ದಿನಗಳಲ್ಲಿ ವಾಜಪೇಯಿ ಭಾಷಣಕ್ಕೆ ಹೆಚ್ಚು ಒತ್ತುಕೊಡುತ್ತಿದ್ದರು. ಮಾತ್ರವಲ್ಲ ಸ್ನೇಹಿತರೊಂದಿಗೆ ನೆಹರೂ ಅವರು ಭವಿಷ್ಯದಲ್ಲಿ ವಾಜಪೇಯಿ ಪ್ರಬಲ ಪ್ರಧಾನಿಯಾಗುತ್ತಾನೆ ಎಂದಿದರಂತೆ ಖ್ಯಾತ ಲೇಖಕ ಕಿಂಗ್ ಶುಕ್ ನಾಗ್ ಅವರು ತಮ್ಮ ಒಂದು ಪುಸ್ತಕದಲ್ಲಿ ಈ ಮಾತನ್ನು ಉಲ್ಲೇಖಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more