Short News

ಮಡಿಕೇರಿಯಲ್ಲಿ ಹೊಸ ಬದುಕಿಗೆ ಕಾಲಿಟ್ಟ ಸಂತ್ರಸ್ತ ಕುಟುಂಬದ ಯುವತಿ!

ಮಡಿಕೇರಿಯಲ್ಲಿ ಹೊಸ ಬದುಕಿಗೆ ಕಾಲಿಟ್ಟ ಸಂತ್ರಸ್ತ ಕುಟುಂಬದ ಯುವತಿ!

ಪ್ರಕೃತಿ ವಿಕೋಪದಿಂದಾಗಿ ಕೊಡಗು ಜಿಲ್ಲೆಯಲ್ಲಿ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಪ್ರಕೃತಿಯ ಮುನಿಸಿನಿಂದ ಮನೆ ಕಳೆದುಕೊಂಡ ಜೋಡಿ ಭಾನುವಾರ ಹೊಸ ಜೀವನಕ್ಕೆ ಕಾಲಿಟ್ಟಿದೆ. ಜಿಲ್ಲಾಧಿಕಾರಿಗಳು ನವ ಜೋಡಿಗೆ ಶುಭ ಹಾರೈಸಿದರು. ಭಾನುವಾರ ಆರ್.ಮಂಜುಳಾ ಅವರು ಕೇರಳದ ಕಣ್ಣೂರು ಜಿಲ್ಲೆಯ ರಜೀಶ್ ಅವರನ್ನು ವಿವಾಹವಾದರು. ಮಂಜುಳಾ ಅವರು ಎಮ್ಮೆತ್ತಾಳು ಗ್ರಾಮದವರು. ಅವರ ವಿವಾಹ ಹಿಂದೆಯೇ ನಿಶ್ಚಯವಾಗಿತ್ತು. ಆದರೆ, ಗುಡ್ಡ ಕುಸಿತದಲ್ಲಿ ಅವರ ಗ್ರಾಮ ಸಂಪೂರ್ಣವಾಗಿ ನಾಶವಾಗಿದೆ. ಮಡಿಕೇರಿ ನಗರದ ನೆರೆ ಸಂತ್ರಸ್ತರ ಪರಿಹಾರ ಕೇದ್ರ ಗಜ್ಜೆ ಸಂಗಪ್ಪ ಹಾಲ್‌ನಲ್ಲಿ ಭಾನುವಾರ ಮಂಜುಳಾ ಮತ್ತು ರಜೀಶ್ ವಿವಾಹವಾದರು.
'ಗ್ಯಾಲಾಕ್ಸಿ ಎ7' ಲಾಂಚ್..ಮೂರು ಕ್ಯಾಮೆರಾಗಳ ಮೊದಲ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್!

'ಗ್ಯಾಲಾಕ್ಸಿ ಎ7' ಲಾಂಚ್..ಮೂರು ಕ್ಯಾಮೆರಾಗಳ ಮೊದಲ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್!

ವಿಶ್ವ ಮೊಬೈಲ್ ಮಾರುಕಟ್ಟೆಯ ದಿಗ್ಗಜ ಕಂಪೆನಿ 'ಸ್ಯಾಮ್‌ಸಂಗ್' ಇದೇ ಮೊದಲ ಬಾರಿಗೆ ಮೂರು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿ ಮೊಬೈಲ್ ಪ್ರಪಂಚಕ್ಕೆ ಆಶ್ಚರ್ಯ ಮೂಡಿಸಿದೆ. ಸ್ಯಾಮ್‌ಸಂಗ್ ಕಂಪೆನಿಯ ಮೊದಲ ಮೂರು ಕ್ಯಾಮೆರಾ ಸ್ಮಾರ್ಟ್‌ಪೋನ್ 'ಗ್ಯಾಲಾಕ್ಸಿ ಎ7' ನೆನ್ನೆಯಷ್ಟೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.ಹೌದು, ಮೊಬೈಲ್ ಮಾರುಕಟ್ಟೆಯಲ್ಲಿ ಎಂದೂ ಸಹ ಹಿಂದೆ ಬೀಳಿದಂತೆ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಸ್ಯಾಮ್‌ಸಂಗ್ ಕಂಪೆನಿ, ಈಗ ಮೂರು ಕ್ಯಾಮೆರಾಗಳಿರುವ ಸ್ಮಾರ್ಟ್‌ಪೋನ್ ತಂತ್ರಜ್ಞಾನದ ಮೇಲೂ ಸಹ ಕಣ್ಣಿಟ್ಟಿದೆ.

ಸಂಪುಟಕ್ಕೆ ಮೇಜರ್ ಸರ್ಜರಿ? ಸಮ್ಮಿಶ್ರ ಸರ್ಕಾರದ ಹೊಸ ಉಪಾಯ

ಸಂಪುಟಕ್ಕೆ ಮೇಜರ್ ಸರ್ಜರಿ? ಸಮ್ಮಿಶ್ರ ಸರ್ಕಾರದ ಹೊಸ ಉಪಾಯ

ಅತೃಪ್ತ ಶಾಸಕರು ಮತ್ತೆ ಬಂಡಾಯ ಏಳುವುದಕ್ಕೆ ಅವಕಾಶ ಕೊಡದಂತೆ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ ಮಾಡಲು ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ.


ಎರಡು ಮೂರು ಖಾತೆ ಹೊಂದಿರುವ ಸಚಿವರ ಬಳಿ ಒಂದೇ ಖಾತೆಯನ್ನು ಉಳಿಸಿ, ಉಳಿದ ಖಾತೆಗಳನ್ನು ಅತೃಪ್ತ ಶಾಸಕರಿಗೆ ಹಂಚಲು ಹೈಕಮಾಂಡ್ ಸೂಚಿಸಿದೆ.


ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟಕ್ಕೂ ಯಾರ್ಯಾರ ಖಾತೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ? ಯಾರ್ಯಾರಿಗೆ ಸಚಿವ ಸ್ಥಾನ ಸಿಗಬಹುದು?

ಸೈನಿಕರ ರಕ್ತಕ್ಕೆ ಅಗೌರವ ತೋರಿದ ಪ್ರಧಾನಿ: ರಾಹುಲ್ ಗಾಂಧಿ ವಾಗ್ದಾಳಿ

ಸೈನಿಕರ ರಕ್ತಕ್ಕೆ ಅಗೌರವ ತೋರಿದ ಪ್ರಧಾನಿ: ರಾಹುಲ್ ಗಾಂಧಿ ವಾಗ್ದಾಳಿ

ಭಾರತ ಸರ್ಕಾರದ ಒತ್ತಾಯದ ಮೇರೆಗೇ ಫ್ರಾನ್ಸ್ ಸರ್ಕಾರ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪೆನಿಯೊಂದಿಗೆ ಸಹಭಾಗಿತ್ವ ಹೊಂದಲು ಮುಂದಾಗಿದ್ದು ಎಂಬ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೊ ಒಲಾಂಡ್ ಹೇಳಿಕೆ, ಕಾಂಗ್ರೆಸ್‌ಗೆ ಪ್ರಬಲ ಅಸ್ತ್ರವಾಗಿ ದೊರೆತಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್, ಪ್ರಧಾನಿ ಮೋದಿ ಅವರು ಖುದ್ದಾಗಿ ಈ ವ್ಯವಹಾರವನ್ನು ಕುದುರಿಸಿದ್ದಾರೆ ಮತ್ತು ರಫೇಲ್ ಒಪ್ಪಂದವನ್ನು ಮುಚ್ಚಿದ ಬಾಗಿಲಿನ ಹಿಂಬದಿಯಲ್ಲಿ ಬದಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more