Short News

ಸರ್ಕಾರಿ ಆದೇಶವನ್ನೇ ತಿರುಚಿ ವೈರಲ್ ಮಾಡಿದ ಕಿಡಿಗೇಡಿಗಳು

ಸರ್ಕಾರಿ ಆದೇಶವನ್ನೇ ತಿರುಚಿ ವೈರಲ್ ಮಾಡಿದ ಕಿಡಿಗೇಡಿಗಳು

ದಕ್ಷಿಣ ಕನ್ನಡ ಜಿಲ್ಲಾಡಳಿತದ ಆದೇಶದ ಪ್ರತಿಯನ್ನೇ ತಿರುಚಿ ಕಿಡಿಗೇಡಿಗಳು ವೈರಲ್ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಶುಕ್ರವಾರ ಆಗಸ್ಟ್ 10ರಂದು ಕರಾವಳಿಯಲ್ಲಿ ಭಾರೀ ಮಳೆಯಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಹವಾಮಾನ ಇಲಾಖೆಯ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ರಜೆ ಘೋಷಿಸಲಾಗಿತ್ತು. ಆದರೆ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯನ್ನೇ ತಿರುಚಿರುವ ಕಿಡಿಗೇಡಿಗಳು, ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಎಂಬುದನ್ನು ರಜೆಯಿಲ್ಲ, ರಜೆ ರದ್ದುಗೊಳಿಸಿದ್ದಾರೆ ಎಂದು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವಾಣಿ ಆರಂಭ

ಕೊಡಗು, ಕರಾವಳಿ ಭಾಗದಲ್ಲಿ ಮಳೆ ಮುಂದುವರೆದು ಪ್ರವಾಹಕ್ಕೆ ಎಡೆಮಾಡಿಕೊಟ್ಟಿದೆ. ಸಂಕಷ್ಟದಲ್ಲಿರುವ ಜನತೆಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಈ ಕುರಿತು ನಟಿ ಸಂಯುಕ್ತಾ ಹೊರ್ನಾಡ್‌ ಸಹಾಯವಾಣಿ ಸಂಖ್ಯೆಗಳನ್ನು ಟ್ವೀಟ್‌ ಮಾಡಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ, ನಾಪೋಕ್ಲು, ಅಯ್ಯಂಗೇರಿ, ಭಾಗಮಂಡಲ, ಚೆಟ್ಟಿಮಾನಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದೆ. ಗುರುವಾರ ಸ್ವಲ್ಪ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕಾಗಿದ್ದು, ಜಿಲ್ಲೆಯ ಜನಜೀವನ ಸಂಪೂರ್ಣವಾಗಿ ಅಸ್ತವ್ಯವಸ್ತವಾಗಿದೆ. ಕೊಡಗು ಜಿಲ್ಲಾಧಿಕಾರಿ-9482628409, ಜಿಲ್ಲಾ ಪಂಚಾಯತ್‌ ಸಿಇಓ-9480869000.
ಅವಿವಾಹಿತ ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿ ಯಾರು ಗೊತ್ತಾ?

ಅವಿವಾಹಿತ ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿ ಯಾರು ಗೊತ್ತಾ?

ವಾಜಪೇಯಿ ತಾವೇಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗೆ ಅವರೇ ಹಲವಾರು ಬಾರಿ ಸ್ವಾರಸ್ಯಕರವಾಗಿ ಉತ್ತರ ನೀಡಿದ್ದಾರೆ. ಯಾವುದೇ ಮಹಿಳೆ ನನ್ನನ್ನು ಸೂಕ್ತ ವರ ಎಂದು ಪರಿಗಣಿಸಲಿಲ್ಲ,ಮದುವೆಯಾಗಲು ಸಮಯವೇ ಸಿಗಲಿಲ್ಲ ಎಂದೆಲ್ಲ ಹಾಸ್ಯ ಚಟಾಕಿ ಹಾರಿಸಿದ್ದರು. ವಾಜಪೇಯಿ ಅವರು ಮನಸ್ಸು ಮಾಡಿದ್ದರೆ ಮದುವೆಯಾಗ ಬಹುದಾಗಿತ್ತು. ಅವರ ಬಾಳಲ್ಲಿ ಓರ್ವ ಸುಂದರಿಯ ಪ್ರವೇಶವೂ ಆಗಿತ್ತು. ಆದರೆ, ಕಾರಣಾಂತರಗಳಿಂದ ಆ ಮದುವೆ ನಡೆಯಲಿಲ್ಲ. ಬಳಿಕ ನಮಿತಾ ಭಟ್ಟಾಚಾರ್ಯ ಎಂಬುವವರನ್ನು ದತ್ತಾಗಿ ಸ್ವೀಕರಿಸಿದರು. ನಮಿತಾ ಭಟ್ಟಾಚಾರ್ಯ ಮತ್ತಾರೂ ಅಲ್ಲ, ತಾವು ಅಪಾರವಾಗಿ ಪ್ರೇಮಿಸಿದ್ದ, ಆದರೆ ಮದುವೆಯಾಗಲು ಸಾಧ್ಯವಾಗದ ರಾಜಕುಮಾರಿ ಕೌಲ್ ಅವರ ಮಗಳು.
ವಾಜಪೇಯಿ ಅವರನ್ನು ಹೊಗಳಿದ ಪಾಕಿಸ್ತಾನ ಪತ್ರಿಕೆ "ಡಾನ್"

ವಾಜಪೇಯಿ ಅವರನ್ನು ಹೊಗಳಿದ ಪಾಕಿಸ್ತಾನ ಪತ್ರಿಕೆ "ಡಾನ್"

ಅಸ್ತಂಗತರಾದ ವಾಜಪೇಯಿಗೆ ವಿಶ್ವದ ಹಲವು ಪತ್ರಿಕೆಗಳೂ ಗೌರವ ಸಲ್ಲಿಸಿದೆ. ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ 'ಡಾನ್' ವಾಜಪೇಯಿ ಅವರನ್ನು ಪಾಕಿಸ್ತಾನದೊಂದಿಗೆ ಶಾಂತಿ ಪಕ್ಷಪಾತಿ ಎಂದಿದೆ. ವಾಜಪೇಯಿ ಪಾಕಿಸ್ತಾನದೊಂದಿಗೆ ಶಾಂತಿಯ ಹಸ್ತ ಚಾಚಿದ್ದನ್ನು ಅತಿಯಾಗಿ ಹೊಗಳಿರುವ ಪಾಕ್ ಪತ್ರಿಕೆ. ಅವರ ಪಾಕಿಸ್ತಾನದ ಭೇಟಿಗಳನ್ನು ನೆನಪಿಸಿದೆ. 'ತಪ್ಪು ಪಕ್ಷದ ಉತ್ತಮ ವ್ಯಕ್ತಿ' ಎಂದಿರುವ ಡಾನ್, 'ವಾಜಪೇಯಿ ಅವರು ಪಾಕಿಸ್ತಾನದಲ್ಲಿ ಚುನಾವಣೆ ಗೆಲ್ಲಬಲ್ಲರು' ಎಂದು ನವಾಜ್ ಷರೀಫ್ ಹೇಳಿದ್ದ ಮಾತುಗಳನ್ನು ಉಲ್ಲೇಖಿಸಿದೆ. ಮೋದಿ ಹಾಗೂ ಅವರ ಸಮಾಜ ಒಡೆಯುವ ನೀತಿಗಳನ್ನು ನಿಯಂತ್ರಣದಲ್ಲಿಡಬಹುದಾಗಿದ್ದ ಏಕೈಕ ನಾಯಕ ಎಂದು ಡಾನ್ ಹೇಳಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more