Short News

ನಿತ್ಯಾನಂದ ಸ್ವಾಮಿ ಮಾಜಿ ಕಾರ್‌ ಚಾಲಕ ಲೆನಿನ್‌ ಕೋರ್ಟ್‌ಗೆ ಹಾಜರು

ನಿತ್ಯಾನಂದ ಸ್ವಾಮಿ ಮಾಜಿ ಕಾರ್‌ ಚಾಲಕ ಲೆನಿನ್‌ ಕೋರ್ಟ್‌ಗೆ ಹಾಜರು

ಬಿಡದಿ ನಿತ್ಯಾನಂದ ಸ್ವಾಮಿ ವಿರುದ್ಧದ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣದ ವಿಚಾರಣೆ ಕೈಗೆತ್ತಿಗೊಂಡ ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ದೂರುದಾರ ಲೆನಿನ್ ಕುರುಪ್ಪನ್ ಸುದೀರ್ಘ ವಿಚಾರಣೆ ನಡೆಸಿತು. ಬುಧವಾರ ನಿತ್ಯಾನಂದನ ಮಾಜಿ ಕಾರು ಚಾಲಕ ಲೆನಿನ್ ಕುರುಪ್ಪನ್ ಸಿಒಡಿ ಅಧಿಕಾರಿಗಳೊಂದಿಗೆ ರಾಮನಗರ ನ್ಯಾಯಾಲಯಕ್ಕೆ ಹಾಜರಾಗಿದ್ದರು. 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗೋಪಾಲ್‌ಕೃಷ್ಣ ರೈ ಇನ್ ಕ್ಯಾಮರಾ ಪ್ರೊಸಿಡಿಂಗ್ ನಡೆಸಿ ಲೆನಿನ್ ಹೇಳಿಕೆ ದಾಖಲಿಸಿಕೊಂಡರು.
'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು

'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು

ಕನ್ನಡದ ನಟಿ ನಿಖಿಲಾ ಸುಮನ್‌ಗೆ ಇದ್ದಕ್ಕಿದ್ದ ಹಾಗೆ ಒಂದು ಅವಕಾಶ ಸಿಕ್ಕಿತು. 'ಶ್ರೀನಿವಾಸ ಕಲ್ಯಾಣ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ನಿಖಿಲಾ ಸುಮನ್ ಸದ್ಯ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. 'ಶನಿ' ಧಾರಾವಾಹಿ ಮೂಲಕ ನಿಖಿಲಾ ಮನೆ ಮಾತಾಗಿದ್ದಾರೆ. ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡಿರುವ ಅವರು ಒಮ್ಮೆ ನಾನು ರಂಗಶಂಕರದಲ್ಲಿ ಕಾಫಿ ಕುಡಿಯುತ್ತ ಇದ್ದೆ. ಶಂಕರ್ ಗಣೇಶ್ ಅಂತ ನನ್ನ ಫ್ರೆಂಡ್ ಬಂದು ಇದ್ದಕ್ಕಿದ್ದ ಹಾಗೆ ಒಂದು ಸ್ಟೂಡಿಯೊಗೆ ಕರೆದುಕೊಂಡು ಹೋದರು. ಅಲ್ಲಿಯೇ 'ಶ್ರೀನಿವಾಸ ಕಲ್ಯಾಣ' ಚಿತ್ರದ ಆಡಿಷನ್ ಕೊಟ್ಟೆ ಎಂದು ಹೀಗೆ ಚಿತ್ರರಂಗಕ್ಕೆ ಬಂದೆ ಎಂದು ತಾವು ಆಯ್ಕೆ ಆದ ಕಥೆಯನ್ನು ಹೇಳಿದ್ದಾರೆ.
ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಕ್ರಿಕೆಟ್ಟಿಗೆ ಗುಡ್ ಬೈ ಹೇಳಿದ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್

ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರು ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 2015ರಲ್ಲೇ ಎಲ್ಲಾ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ವಿದಾಯ ಹೇಳಿದ್ದ ಜಾನ್ಸನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಬಿಗ್ ಬ್ಯಾಷ್ ಲೀಗ್ ನಲ್ಲಿ ಪರ್ತ್ ಸ್ಕ್ರೋಚರ್ಸ್ ಪರ ಆಡುತ್ತಿದ್ದರು. 2013-14ರ ಆಷ್ಯಸ್ ಸರಣಿಯಲ್ಲಿ ಆಸ್ಟ್ರೇಲಿಯಾ 5-0ರಲ್ಲಿ ಗೆಲುವು ಸಾಧಿಸಲು ನೆರವಾಗಿದ್ದರು. ಆದರೆ, ನಂತರ ಗಾಯಗೊಂಡು , ಲಯ ಕಳೆದುಕೊಂಡು ತಂಡದಿಂದ ಹೊರಗುಳಿಯಬೇಕಾಯಿತು.
ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

ಹಲವಾರು ಅಧ್ಯಯನಗಳು ತೆಂಗಿನ ಎಣ್ಣೆ ಟೂತ್ ಪೇಸ್ಟ್‌ಗೆ ಪರಿಣಾಮಕಾರಿಯಾದ ಬದಲಿ ಉತ್ಪನ್ನ ಎಂದು ಸಾಭೀತು ಮಾಡಿವೆ. ಹಾಗು ಇದರಲ್ಲಿ ಸ್ವಾಭಾವಿಕವಾದ ಆಂಟಿ-ಬ್ಯಾಕ್ಟೀರಿಯಾ ಗುಣಗಳು ಇದ್ದು, ಇದು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಹಾಗು ಟಾಕ್ಸಿನ್‌ಗಳು ನಿವಾರಿಸುತ್ತದೆ. ತೆಂಗಿನ ಎಣ್ಣೆಯು ದಂತ ಸವಕಳಿಯನ್ನು ಇನ್ನಿತರ ಓರಲ್-ಕ್ಲೀನ್ಸಿಂಗ್ ಉತ್ಪನ್ನಗಳಿಗಿಂತ ಪರಿಣಾಮಕಾರಿಯಾಗಿ ತಡೆಯುತ್ತದೆ. ಒಂದು ಅಧ್ಯಯನದ ಪ್ರಕಾರ ತೆಂಗಿನ ಎಣ್ಣೆಯು ಪ್ಲಾಕ್ ಉತ್ಪತ್ತಿಯಾಗುವುದನ್ನು ಕಡಿಮೆ ಮಾಡುತ್ತದೆಯಂತೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more