Short News

'ಕ್ಷಣಿಕ ಸುಖಕ್ಕೆ ಆಸಕ್ತಿ ವಹಿಸಿದರೆ ಇಡೀ ಕುಟುಂಬ ಬಲಿಯಾಗುತ್ತದೆ'

'ಕ್ಷಣಿಕ ಸುಖಕ್ಕೆ ಆಸಕ್ತಿ ವಹಿಸಿದರೆ ಇಡೀ ಕುಟುಂಬ ಬಲಿಯಾಗುತ್ತದೆ'

ಯುವ ಜನಾಂಗ ಮಾದಕ ವ್ಯಸನದಿಂದ ದೂರವಾಗಬೇಕು ಎಂಬ ಉದ್ದೇಶದಿಂದ ಉಡುಪಿಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಚಾತುರ್ಮಾಸ್ಯ ವೃತಾಚರಣೆಯ ನಡುವೆ 12ಕಿಲೋಮೀಟರ್ ಪಾದಯಾತ್ರೆ ನಡೆಸಿದ್ದಾರೆ. ಉಡುಪಿಯಿಂದ ಮಣಿಪಾಲ-ಮಣಿಪಾಲದಿಂದ ಉಡುಪಿಯವರೆಗೆ ಪಾದಯಾತ್ರೆ ನಡೆಸುವ ಮೂಲಕ ಸೇ ನೋ ಟು ಡ್ರಗ್ಸ್"ಅನ್ನುವ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್,ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ನೇತೃತ್ವದಲ್ಲಿ 2ತಿಂಗಳ ಕಾಲ ಮಾದಕ ವ್ಯಸನ ವಿರೋಧಿ ಮಾಸಾಚರಣೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಶ್ರೀಗಳು ಕ್ಷಣಿಕ ಸುಖಕ್ಕೆ ಆಸಕ್ತಿ ವಹಿಸಿದರೆ ಇಡೀ ಜೀವನ, ಕುಟುಂಬ ಬಲಿಯಾಗುತ್ತದೆ ಎಂದರು.
ಅಪಘಾತಕ್ಕೂ ಮುನ್ನ ದರ್ಶನ್-ದೇವರಾಜ್ ಪಾರ್ಟಿ ಫೋಟೋಗಳು ಲೀಕ್

ಅಪಘಾತಕ್ಕೂ ಮುನ್ನ ದರ್ಶನ್-ದೇವರಾಜ್ ಪಾರ್ಟಿ ಫೋಟೋಗಳು ಲೀಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಟ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಚಲಿಸುತ್ತಿದ್ದ ಕಾರು ಮೈಸೂರಿನ ಹಿನಕಲ್ ಬಳಿ ರಾತ್ರಿ 3ಗಂಟೆ ವೇಳೆ ಅಪಘಾತಕ್ಕೀಡಾಗಿತ್ತು. ಇವರೆಲ್ಲ ಅಷ್ಟು ಹೊತ್ತಿನಲ್ಲಿ ಹೊರಟಿದ್ದೆಲ್ಲಿಗೆ ಎಂಬುದು ಪ್ರಶ್ನೆ ಕಾಡುವುದು ಸಹಜ. ಅದಕ್ಕೆ ಸಂಬಂಧಪಟ್ಟಂತೆ ಕೆಲವು ಫೋಟೋಗಳು ಬಹಿರಂಗವಾಗಿದ್ದು, ಅಪಘಾತಕ್ಕೂ ಮುಂಚೆ ಪಾರ್ಟಿಯೊಂದರಲ್ಲಿ ಭಾಗವಹಿಸಿ ಹೊಟೆಲ್ ಗೆ ಹೋಗುತ್ತಿದ್ದರು ಎಂಬ ಮಾಹಿತಿ ಇದೆ. ಇಲ್ಲಿ ವಿಶೇಷ ಅಂದ್ರೆ ಈ ಪಾರ್ಟಿಯಲ್ಲಿ ಸೃಜನ್, ಪ್ರಣಾಮ್ ದೇವರಾಜ್ ಸೇರಿದಂತೆ ಇನ್ನು ಕೆಲವರು ಕಾಣಿಸಿಕೊಂಡಿದ್ದಾರೆ. ಇದು ದೇವರಾಜ್ ಅವರ ಹುಟ್ಟುಹಬ್ಬದ ಪಾರ್ಟಿ ಎಂದು ಹೇಳಲಾಗುತ್ತಿದೆ.
5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ಷೇರು ಮಾರುಕಟ್ಟೆಯು ನಿರಂತರವಾಗಿ ಇಳಿಕೆ ಕಾಣುತ್ತಿದ್ದು, ಹೂಡಿಕೆದಾರರ 8.47ಲಕ್ಷ ಕೋಟಿ ರುಪಾಯಿಯು 5ದಿನಗಳಲ್ಲಿ ಕೊಚ್ಚಿಹೋಗಿದೆ. ಕಳೆದ ವಾರದ ಆರಂಭದಿಂದ ಲೆಕ್ಕ ಹಿಡಿದು ಹೇಳುವುದಾದರೆ ಬಿಎಸ್ ಇ 5%ಕುಸಿತ ಕಂಡಿದೆ. ಸೋಮವಾರದಂದು ಸೆನ್ಸೆಕ್ಸ್ 536.58ಅಂಶಗಳಷ್ಟು ಇಳಿಕೆ ಕಂಡು, ಒಟ್ಟಾರೆಯಾಗಿ ದಿನಾಂತ್ಯಕ್ಕೆ 36,305.02ಕ್ಕೆ ತಲುಪಿತು. ಆ ಮೂಲಕ ಕಳೆದ 5ಟ್ರೇಡಿಂಗ್ ಸೆಷನ್ ನಲ್ಲಿ 4.68% ಅಥವಾ 1,785.62ಅಂಶಗಳನ್ನು ಕಳೆದುಕೊಂಡಂತೆ ಆಗುತ್ತದೆ. ಮಾರುಕಟ್ಟೆ ಬಗ್ಗೆ ಇರುವ ನಕಾರಾತ್ಮಕ ನಂಬಿಕೆ ಪರಿಣಾಮವಾಗಿ ಬಿಎಸ್ಇಯಲ್ಲಿ ಲಿಸ್ಟ್ ಆಗಿರುವಂಥ ಕಂಪೆನಿಗಳು 8,47,974.15ಕೋ ರುಪಾಯಿ ಇಳಿದು 1,47,89,045ಕೋಟಿ ತಲುಪಿದವು.
ಹಣಕಾಸು ಮಾರುಕಟ್ಟೆ ಚಟುವಟಿಕೆಗಳ ಮೇಲೆ ಆರ್ಬಿಐ, ಸೆಬಿ ಸೂಕ್ತ ಕ್ರಮ

ಹಣಕಾಸು ಮಾರುಕಟ್ಟೆ ಚಟುವಟಿಕೆಗಳ ಮೇಲೆ ಆರ್ಬಿಐ, ಸೆಬಿ ಸೂಕ್ತ ಕ್ರಮ

ಹಣಕಾಸು ಮಾರುಕಟ್ಟೆಯಲ್ಲಿನ ಚಟುವಟಿಕೆಗಳ ನಿಕಟ ಮೇಲ್ವಿಚಾರಣೆ ಹಾಗು ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹಾಗು ಸೆಬಿ ಹೇಳಿವೆ. ಈಕ್ವಿಟಿ ಹಾಗೂ ಸಾಲ ಮಾರುಕಟ್ಟೆಗಳಲ್ಲಿನ ಭಾರೀ ಕುಸಿತದ ಹಿನ್ನೆಲೆಯಲ್ಲಿ ಆರ್ಬಿಐ ಮತ್ತು ಸೆಬಿ ಈ ಕ್ರಮಕ್ಕೆ ಮುಂದಾಗಿವೆ. "ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಹಣಕಾಸು ಮಾರುಕಟ್ಟೆಗಳಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿವೆ ಮತ್ತು ಅಗತ್ಯವಿದ್ದರೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿವೆ" ಎಂದು ತಿಳಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more