Short News

ದಿನದ ಮಟ್ಟಿಗೆ ಬಡ್ಡಿರಹಿತ ಸಾಲ ನೀಡುವ ಎಚ್ಡಿಕೆ ಜನಪ್ರಿಯ ಯೋಜನೆ!

ದಿನದ ಮಟ್ಟಿಗೆ ಬಡ್ಡಿರಹಿತ ಸಾಲ ನೀಡುವ ಎಚ್ಡಿಕೆ ಜನಪ್ರಿಯ ಯೋಜನೆ!

ಮೀಟರ್ ಬಡ್ಡಿ ದಂಧೆ ತಪ್ಪಿಸಲು ಸರ್ಕಾರದಿಂದಲೇ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಟರ್ ಬಡ್ಡಿ ತಪ್ಪಿಸಲು ಸರ್ಕಾರದಿಂದ ಮೊಬೈಲ್ ಬ್ಯಾಂಕಿಂಗ್ ಆರಂಭಿಸಲಾಗುತ್ತಿದೆ, ಸರ್ಕಾರದಿಂದ ದಿನಕ್ಕೆ ಸಾವಿರ ರೂ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಬೆಳಗ್ಗೆ ಸಾಲ ಪಡೆದು ಸಂಜೆ ತೀರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ, ಸರ್ಕಾರ ನೀಡುವ ಈ ಸಾಲಕ್ಕೆ ಯಾವುದೇ ಬಡ್ಡಿಯಿಲ್ಲ ಎಂದು ತಿಳಿಸಿದರು.
ಅತ್ಯಾಚಾರ ಆರೋಪ : ರಾಘವೇಶ್ವರ ಶ್ರೀ ವಿರುದ್ಧ ಚಾರ್ಜ್‌ಶೀಟ್

ಅತ್ಯಾಚಾರ ಆರೋಪ : ರಾಘವೇಶ್ವರ ಶ್ರೀ ವಿರುದ್ಧ ಚಾರ್ಜ್‌ಶೀಟ್

ಅತ್ಯಾಚಾರ ಆರೋಪದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸೇರಿ 7 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. 2015ರಲ್ಲಿ ಅತ್ಯಾಚಾರದ ದೂರು ದಾಖಲಾಗಿತ್ತು. 'ನಾನು ಬಾಲಕಿ ಇದ್ದಾಗಿನಿಂದಲೂ ಸ್ವಾಮೀಜಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ. ಅದಕ್ಕೆ ಹಲವರು ಸಹಕಾರ ನೀಡಿದ್ದಾರೆ' ಎಂದು 2015ರ ಆಗಸ್ಟ್ 29ರಂದು ಮಠದ ಭಕ್ತೆಯೊಬ್ಬರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಐಪಿಎಸ್ ಸೆಕ್ಷನ್ 376 (ಅತ್ಯಾಚಾರ), ಐಪಿಸಿ ಸೆಕ್ಷನ್ 376(2) 12 ವರ್ಷದೊಳಗಿನ ಯುವತಿ ಮೇಲೆ ಅತ್ಯಾಚಾರ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ನಂತರ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು.
ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ: ಯುಟಿ ಖಾದರ್

ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ: ಯುಟಿ ಖಾದರ್

ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ. ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳಿಂದ ಕಂಗೆಟ್ಟಿರುವ ಬಿಜೆಪಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಸಚಿವ ಯುಟಿ ಖಾದರ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ಸಲಹೆ ಸೂಚನೆ ಕೊಡಬೇಕಾದ ಬಿಜೆಪಿ ನಾಯಕರು ಅಧಿಕಾರ ದಾಹದಲ್ಲಿದ್ದಾರೆ. ಅವರ ರಾಜಕೀಯ ಸಂಸ್ಕೃತ ಈಗ ಅನಾವರಣ ಗೊಂಡಿದೆ. ಬಿಜೆಪಿ ರಚಿಸಿರುವ ಷಡ್ಯಂತ್ರದಲ್ಲಿ ಯಶಸ್ವಿಯಾಗೋದಿಲ್ಲ. ಹೈದರಾಬಾದ್ ರೆಸಾರ್ಟ್ ನಲ್ಲಿ ಶಾಸಕರು ಕೂರುವ ಅಗತ್ಯ ಇಲ್ಲ. ರಾಜೀನಾಮೆ ಕೊಡೋಕೆ ರಾಜಭವನಕ್ಕೆ ಬರಲೇ ಬೇಕು. ಎಲ್ಲರು ನಮ್ಮೊಂದಿಗೆ ಇದ್ದಾರೆ ಎಂದು ಖಾದರ್ ವ್ಯಂಗ್ಯವಾಡಿದ್ದಾರೆ.
ನಕ್ಸಲರ ಅಟ್ಟಹಾಸ, ಟಿಡಿಪಿ ಶಾಸಕ ಹಾಗೂ ಮಾಜಿ ಶಾಸಕನ ಹತ್ಯೆ

ನಕ್ಸಲರ ಅಟ್ಟಹಾಸ, ಟಿಡಿಪಿ ಶಾಸಕ ಹಾಗೂ ಮಾಜಿ ಶಾಸಕನ ಹತ್ಯೆ

ಆಂಧ್ರಪ್ರದೇಶದ ಅರುಕು ಕ್ಷೇತ್ರದ ಹಾಲಿ ಶಾಸಕ, ತೆಲುಗು ದೇಶಂ ಪಾರ್ಟಿ (ಟಿಡಿಪಿ) ಮುಖಂಡ ಕಿಡಾರಿ ಸರ್ವೇಶ್ವರ ರಾವ್ ಹಾಗೂ ಮಾಜಿ ಶಾಸಕ ಸಿವೇರಿ ಸೋಮ ಅವರನ್ನು ಇಂದು ಟುಟಾಂಗಿ ಎಂಬಲ್ಲಿ ನಕ್ಸಲರು ಕೊಂಡಿಕ್ಕಿ ಕೊಂದಿದ್ದಾರೆ. ಅರುಕು ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇವರಿಬ್ಬರು ವಾಪಸ್ ಬರುವಾಗ ಟುಟಾಂಗಿ ಎಂಬಲ್ಲಿ ನಕ್ಸಲರು ದಾಳಿ ನಡೆಸಿದ್ದಾರೆ. ನಕ್ಸಲರ ಗುಂಡಿನ ದಾಳಿಯಲ್ಲಿ ತೀವ್ರ ಗಾಯಗೊಂಡ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಹುಸಂಖ್ಯೆಯಲ್ಲಿ ಬಂದಿದ್ದ ನಕ್ಸಲರು ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಶೂಟ್ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more