Short News

ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿದ ಸಿಹಿ ಸುದ್ದಿ

ಕರ್ನಾಟಕ ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಕೊನೆಗೂ ಸಿಕ್ಕಿದ ಸಿಹಿ ಸುದ್ದಿ

ಮೈಸೂರಿನಲ್ಲಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ (ಕೆಎಸ್‌ಓಯು) ಕೊನೆಗೂ ಯುಜಿಸಿ ಮಾನ್ಯತೆ ದೊರಕಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ನಿಟ್ಟುಸಿರುಬಿಡುವಂತಾಗಿದೆ. ದೆಹಲಿಯಲ್ಲಿ ಯುಜಿಸಿ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಕ್ತ ವಿವಿಗೆ ಮಾನ್ಯತೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ಮುಕ್ತ ವಿವಿಯ ಮಾನ್ಯತೆಯನ್ನು 2012-13ನೇ ಸಾಲಿನ ಬಳಿಕ ಯುಜಿಸಿ ನವೀಕರಿಸಿರಲಿಲ್ಲ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಪದವಿಗಳು ಅಮಾನ್ಯಗೊಂಡಿದ್ದವು. ಇದರಿಂದ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಕತ್ತಲೆಗೆ ಸಿಲುಕಿತ್ತು. ನೂರಾರು ಮಂದಿ ಉದ್ಯೋಗ ಕಳೆದುಕೊಳ್ಳುವಂತಾಗಿತ್ತು.
ವಾಟ್ಸ್‌ಆಪ್ ಡಾಟಾವನ್ನು ಶೀಘ್ರ ಬ್ಯಾಕ್‌ಅಪ್ ಮಾಡಿ..! ಏಕೆ ಮತ್ತು ಹೇಗೆ ಅಂತಿರಾ..?

ವಾಟ್ಸ್‌ಆಪ್ ಡಾಟಾವನ್ನು ಶೀಘ್ರ ಬ್ಯಾಕ್‌ಅಪ್ ಮಾಡಿ..! ಏಕೆ ಮತ್ತು ಹೇಗೆ ಅಂತಿರಾ..?

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಇತ್ತೀಚೆಗೆ ಹಲವಾರು ಅಪ್ ಡೇಟ್ ಗಳನ್ನು ಮಾಡುತ್ತಲೇ ಇದೆ ಮತ್ತು ಆ ಮೂಲಕ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುವ ಉದ್ದೇಶ ಮತ್ತು ಭದ್ರತೆಯ ಉದ್ದೇಶವನ್ನು ವಾಟ್ಸ್ ಆಪ್ ಹೊಂದಿದೆ. ವಾಟ್ಸ್ ಆಪ್ ನಲ್ಲಿ ನಿಮ್ಮ ಮೆಸೇಜ್ ಗಳು, ವೀಡಿಯೋಗಳು ಮತ್ತು ಫೋಟೋಗಳು ಅಷ್ಟೇ ಯಾಕೆ ಇತರೆ ಡಾಟಾಗಳು ದೀರ್ಘಾವಧಿಯವರೆಗೆ ಸೇವ್ ಆಗಿ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇತ್ತೀಚೆಗೆ ವಾಟ್ಸ್ ಆಪ್ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸ್ ಆಪ್ ನಿಮ್ಮ ಡಾಟಾಗಳನ್ನು ಸೇವ್ ಮಾಡಿ ಇಡುವುದಕ್ಕೆ ಹೊಸ ಮಾರ್ಗವನ್ನು ಸೂಚಿಸಲಿದೆ.

ಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರು

ಕೇರಳದ ನೈಜ ಸೂಪರ್ ಹೀರೋಗಳು ಈ ಮೀನುಗಾರರು

ಕೇರಳದ ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಲೆಕ್ಕವಿಲ್ಲದಷ್ಟು ಜನರನ್ನು ಕಾಪಾಡುವಲ್ಲಿ ರಕ್ಷಣಾ ತಂಡದಷ್ಟೇ ಮುಖ್ಯಪಾತ್ರ ವಹಿಸಿದವರು ಅಲ್ಲಿನ ಮೀನುಗಾರರು. ತಮಗೆ ಪರಿಚಿತವಲ್ಲದ ಸ್ಥಳಗಳಲ್ಲಿ, ನೀರಿನ ಮಟ್ಟ ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿದ್ದರೂ ಅದನ್ನು ಲೆಕ್ಕಿಸದೆ ಮೀನುಗಾರರು ತಮ್ಮ ಕೌಶಲ ಬಳಸಿ ನೂರಾರು ಜನರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ. ತಮಗೆ ಪರಿಚಿತವಲ್ಲದ ಪ್ರದೇಶಗಳಿಗೆ ತೆರಳಿ ಮನೆಗಳನ್ನು ಹುಡುಕಿ ಅದರೊಳಗೆ ಜನರು ಸಿಲುಕಿಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಸಂತ್ರಸ್ತರನ್ನು ರಕ್ಷಿಸುವ ಕೆಲಸವನ್ನು ಮೀನುಗಾರರು ಮಾಡುತ್ತಿದ್ದಾರೆ.
ಪ್ರವಾಹ ಪೀಡಿತ ಕೊಡಗು, ಕೇರಳಕ್ಕೆ ತಲಾ 1.8 ಲಕ್ಷ ನೀಡಿದ ದೇವೇಗೌಡ

ಪ್ರವಾಹ ಪೀಡಿತ ಕೊಡಗು, ಕೇರಳಕ್ಕೆ ತಲಾ 1.8 ಲಕ್ಷ ನೀಡಿದ ದೇವೇಗೌಡ

ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪ್ರವಾಹ ಪೀಡಿತ ಕೇರಳ ಮತ್ತು ಕೊಡಗಿಗೆ ತಲಾ 1.8 ಲಕ್ಷ ಧನ ಸಹಾಯ ನೀಡಿದ್ದಾರೆ. ಇಂದು ತಮ್ಮ ಮಗ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದಾಗ ಈ ವಿಷಯವನ್ನು ಅವರು ಮಾಧ್ಯಮಗಳಿಗೆ ತಿಳಿಸಿದರು. ಕೇರಳ ಹಾಗೂ ಕೊಡಗು ಪ್ರವಾಹದಿಂದ ನಲುಗಿ ಹೋಗಿದೆ. ಹಾಗಾಗಿ ನನ್ನ ಒಂದು ತಿಂಗಳ ಸಂಬಳವನ್ನು ಕೊಡಗಿಗೆ ಹಾಗೂ ಮತ್ತೊಂದು ತಿಂಗಳ ಸಂಬಳವನ್ನು ಕೇರಳಕ್ಕೆ ಸಹಾಯಾರ್ಥವಾಗಿ ನೀಡುತ್ತಿದ್ದೇನೆ ಎಂದು ತಿಳಿಸಿದರು. ನನಗೆ ಆರೋಗ್ಯ ಸಮಸ್ಯೆಯಿಂದ ನಡೆಯಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಇನ್ನೆರೆಡು-ಮೂರು ದಿನಗಳ ನಂತರ ಕೊಡಗಿಗೆ ಹೋಗಿ ಪರಿಶೀಲನೆ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more