Short News

ಹೊಳೆಕುಡಿಗೆ ಗ್ರಾಮದಲ್ಲಿ ತೆಪ್ಪದಲ್ಲಿ ಮೃತ ದೇಹ ತಂದ‌ ಗ್ರಾಮಸ್ಥರು!

ಹೊಳೆಕುಡಿಗೆ ಗ್ರಾಮದಲ್ಲಿ ತೆಪ್ಪದಲ್ಲಿ ಮೃತ ದೇಹ ತಂದ‌ ಗ್ರಾಮಸ್ಥರು!

ರಸ್ತೆ ಇಲ್ಲದ‌ ಕಾರಣ ಗ್ರಾಮಸ್ಥರು ತೆಪ್ಪದಲ್ಲಿ ಮೃತ ದೇಹ ತಂದ‌ ಘಟನೆ ಮೂಡಿಗೆರೆಯ ಮಾಗುಂಡಿ ಸಮೀಪದ ಹೊಳೆಕುಡಿಗೆ ಗ್ರಾಮದಲ್ಲಿ ನಡೆದಿದೆ. ಹೊಳೆಕುಡಿಗೆ ಗ್ರಾಮಕ್ಕೆ 3 ದಶಕದಿಂದಲೂ ರಸ್ತೆ‌ ಇಲ್ಲ. ಭದ್ರಾ ನದಿಯನ್ನೇ ನಂಬಿಕೊಂಡು ಇಲ್ಲಿನ ಆದಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಗ್ರಾಮದ ಲಕ್ಷ್ಮಮ್ಮ ಎಂಬುವವರು ಅನಾರೋಗ್ಯದಿಂದ ಮಂಗಳೂರಿನಲ್ಲಿ ಮೃತಪಟ್ಟರು. ಕೊನೆಗೆ ರಸ್ತೆ ಇಲ್ಲದ ಕಾರಣ ಕುಟುಂಬದವರು ಅವರ ಮೃತದೇಹವನ್ನು ತೆಪ್ಪದ ಮೂಲಕ ತಂದಿದ್ದಾರೆ. ಇಂತಹ ಘಟನೆಗಳು ಆಗಾಗ ಇಲ್ಲಿ ನಡೆಯುತ್ತಲೇ ಇರುವುದನ್ನು ನಾವಿಲ್ಲಿ ಸ್ಮರಿಸಬಹುದು.
58 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಪಿಜಿಸಿಐಎಲ್

58 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಪಿಜಿಸಿಐಎಲ್

ಪಿಜಿಸಿಐಎಲ್ 58 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 4 ಅಕ್ಟೋಬರ್ 2018 ಕೊನೆಯ ದಿನವಾಗಿದೆ. ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) ಡಿಪ್ಲೊಮಾ ಟ್ರೈನಿ, ಜ್ಯೂನಿಯರ್ ಆಫೀಸರ್ ಟ್ರೈನಿ, ಜ್ಯೂನಿಯರ್ ಟೆಕ್ನಿಶಿಯನ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಡಿಪ್ಲೊಮಾ ಟ್ರೈನಿ/ ಜ್ಯೂನಿಯರ್ ಆಫೀಸರ್ ಟ್ರೈನಿ ಹುದ್ದೆಗೆ 16500 ರೂ. ವೇತನ ನಿಗದಿ ಮಾಡಲಾಗಿದೆ. 
ಅ. 5ರಿಂದ ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ತಂಡದ ವೇಳಾಪಟ್ಟಿ ಪ್ರಕಟ

ಅ. 5ರಿಂದ ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ತಂಡದ ವೇಳಾಪಟ್ಟಿ ಪ್ರಕಟ

ವಿವೋ ಪ್ರೊ ಕಬಡ್ಡಿಯ ಆರನೇ ಆವೃತ್ತಿ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದೆ. ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ತೆಲುಗು ಟೈಟಾನ್ಸ್ ಸೆಣಸಲಿದೆ. ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ಆಡಲಿವೆ. ಪ್ಲೇ ಆಫ್ ಪಂದ್ಯಗಳು ಕೊಚ್ಚಿ ಮತ್ತು ಮುಂಬೈನಲ್ಲಿ ನಡೆಯಲಿದ್ದು, ಜನವರಿ 5ರಂದು ಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಈ ಬಾರಿ ರೋಹಿತ್ ಬಕುಮಾರ್ ನೇತೃತ್ವದ ತಂಡಕ್ಕೆ ರೈಡರ್ ಕಾಶಿಲಿಂಗ್ ಅಡಕೆ, ಪವನ್ ಕುಮಾರ್ ಸೆಹ್ರಾವತ್ ಅವರ ಬಲ ಸಿಕ್ಕಿದೆ.
ಹೊಸಕೋಟೆಯಲ್ಲಿ ಘರ್ಜಿಸಿದ ಕಾಂಗ್ರೆಸ್ ಶಾಸಕ: ರಾಜ್ಯ ರಾಜಕೀಯ ಅಯೋಮಯ

ಹೊಸಕೋಟೆಯಲ್ಲಿ ಘರ್ಜಿಸಿದ ಕಾಂಗ್ರೆಸ್ ಶಾಸಕ: ರಾಜ್ಯ ರಾಜಕೀಯ ಅಯೋಮಯ

ಜೆಡಿಎಸ್ ಜೊತೆ ಕೈಜೋಡಿಸಿ ಸಮ್ಮಿಶ್ರ ಸರಕಾರ ರಚಿಸಿದ ಕಾಂಗ್ರೆಸ್ಸಿಗೆ ತಮ್ಮ ಶಾಸಕರನ್ನು ಸಮಾಧಾನ ಪಡಿಸಲು ಹರಸಾಹಸ ಪಡುವಂತಾಗಿದೆ. ಇವೆಲ್ಲದರ ನಡುವೆ ದೇಶದ ಶ್ರೀಮಂತ ಶಾಸಕ, ಹೊಸಕೋಟೆಯಲ್ಲಿ ತಮ್ಮ ಪಕ್ಷದ ವಿರುದ್ದವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂ ಟಿ ಬಿ ನಾಗರಾಜು, ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ನಮ್ಮ ಅಸಮಾಧಾನವನ್ನೆಲ್ಲಾ ಹೊರಹಾಕಿ, ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿರುವುದು, ಪಕ್ಷಕ್ಕೆ ಇನ್ನಷ್ಟು ಮುಜುಗರವನ್ನು ತಂದೊಡ್ಡಿದೆ. ಎಂಟಿಬಿ ಒಬ್ಬರೇ ಇದ್ದಾರಾ ಅಥವಾ ಅವರ ಜೊತೆ ಇನ್ನೆಷ್ಟು ಜನ ಇದ್ದಾರೋ ಎನ್ನುವುದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more