Short News

ಅಮಾವಾಸ್ಯೆ - ಗ್ರಹಣದ ಕೆಟ್ಟ ಪರಿಣಾಮ ತಡೆಯಲು ಬಿಲ್ವಪತ್ರೆಯ ಗಿಡ ನೆಡಿ

ಅಮಾವಾಸ್ಯೆ - ಗ್ರಹಣದ ಕೆಟ್ಟ ಪರಿಣಾಮ ತಡೆಯಲು ಬಿಲ್ವಪತ್ರೆಯ ಗಿಡ ನೆಡಿ

ಸೂರ್ಯ ಗ್ರಹಣ ಮತ್ತು ಅಮವಾಸ್ಯೆ ಎರಡು ಆಗಸ್ಟ್ 11 ಶನಿವಾರದಂದೇ ಬಂದಿದೆ. ಈ ಎರಡು ನಕಾರಾತ್ಮಕ ಶಕ್ತಿಯ ಸಂಯೋಗವು ತುಲನಾತ್ಮಕವಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂತಹ ಎರಡು ಮಹಾ ನಕಾರಾತ್ಮಕ ಶಕ್ತಿಯ ಸಂಯೋಗಕ್ಕೆ ಸನ್ಯಾಗ ಎಂದು ಕರೆಯಲಾಗುತ್ತದೆ. ಸನ್ಯಾಗ ಎನ್ನುವುದು ಸಂಸ್ಕೃತದ ಪದ. ಈ ಪದವು ಎರಡು ಅಥವಾ ಅದಕ್ಕಿಂತ ಹೆಚ್ಚು ದೊಡ್ಡ ಘಟನೆಗಳ ಸಂಯೋಗ ಎನ್ನುವ ಅರ್ಥವನ್ನು ನೀಡುತ್ತದೆ. ಅಮವಾಸ್ಯೆ ಮತ್ತು ಸೂರ್ಯಗ್ರಹಣ ಎರಡು ಶನಿವಾರ ಬಂದಿರುವುದು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎನ್ನುವ ಅರ್ಥವನ್ನು ನೀಡುತ್ತದೆ. ಇಂತಹ ಒಂದು ಕೆಟ್ಟ ಶಕ್ತಿಗಳಿಂದ ಉಂಟಾಗುವ ಪರಿಣಾಮದಿಂದ ದೂರ ಇರಬೇಕು

ಶಿವಮೊಗ್ಗ : ಕೈ ತಪ್ಪಿದ ಕಾಂಗ್ರೆಸ್‌ ಟಿಕೆಟ್, ಕಚೇರಿಗೆ ಕಲ್ಲು!

ಶಿವಮೊಗ್ಗ : ಕೈ ತಪ್ಪಿದ ಕಾಂಗ್ರೆಸ್‌ ಟಿಕೆಟ್, ಕಚೇರಿಗೆ ಕಲ್ಲು!

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮೇಲೆ ಹಾಡ ಹಗಲೇ ಕಲ್ಲು ತೂರಾಟ ನಡೆಸಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಪ್ರಮುಖ ನಾಯಕರ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲೂ ತೂರಾಟದಿಂದಾಗಿ ಪಕ್ಷದ ಕಚೇರಿಯ ಗಾಜುಗಳು ಪುಡಿ-ಪುಡಿಯಾಗಿವೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ಅನೇಕರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು.
ದ್ವಾದಶ ರಾಶಿಗಳ (ಆಗಸ್ಟ್ 20) ಇಂದಿನ ದಿನಭವಿಷ್ಯ

ದ್ವಾದಶ ರಾಶಿಗಳ (ಆಗಸ್ಟ್ 20) ಇಂದಿನ ದಿನಭವಿಷ್ಯ

ಮೇಷ:ಹೊಸ ಕಾರ್ಯ ಪ್ರಾರಂಭಿಸಬಹುದು.ವೃಷಭ:ಅತಿ ವಿನಯವಂತಿಕೆ ನಿಮಗೆ ಮುಳು ವಾಗಲಿದೆ. ಮಿಥುನ:ಕಚೇರಿಯಲ್ಲಿ ಉಳಿದವರಿಗಿಂತ ನಿಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೀರಿ. ಕಟಕ:ವ್ಯಾಪಾರದಲ್ಲಿ ಬದ ಲಾವಣೆ ಕಾಣುವ ಸಮಯ.ಸಿಂಹ:ಅಪಘಾತವಾಗುವ ಸಂಭವ ಹೆಚ್ಚಿರುವುದರಿಂದ ಎಚ್ಚರಿಕೆ ಅಗತ್ಯ.ಕನ್ಯಾ:ಬಹುಕಾಲದಿಂದ ಮನಸ್ಸಿನಲ್ಲಿದ್ದ ಸಂಶಯವೊಂದು ದೂರವಾಗಲಿದೆ. ತುಲಾ:ಉತ್ತಮ ಕೆಲಸದಿಂದ ಬಡ್ತಿ ಸಿಗುವ ಸಾಧ್ಯತೆ. ವೃಶ್ಚಿಕ:ಮನೆಯಲ್ಲಿ ಮಂಗಳಕಾರ್ಯ.ಧನು:ಹೆಚ್ಚಿನ ಆಹಾರ ಪದಾರ್ಥ ಸೇವನೆಯಿಂದ ಆರೋಗ್ಯಕ್ಕೆ ಹಾನಿ.ಮಕರ:ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ.ಕುಂಭ:ಧನಹಾನಿ ಸಾಧ್ಯತೆಗಳು ಹೆಚ್ಚಾಗಿವೆ.ಮೀನ:ಮಿತ್ರರಲ್ಲಿ ಭಿನ್ನಮತ.
ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ

ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ

ಕೇರಳ ಸಂತ್ರಸ್ತ ನಿಧಿಗೆ ತಮ್ಮ 1ತಿಂಗಳ ವೇತನವನ್ನು ದೇಣಿಗೆ ನೀಡಲು ತೆಲಂಗಾಣದ ಉಪಮುಖ್ಯಮಂತ್ರಿ ಮೊಹಮ್ಮದ್ ಮಹ್ಮೂದ್ ಅಲಿ ನಿರ್ಧರಿಸಿದ್ದಾರೆ.ತೆಲಂಗಾಣದ ಗೃಹಮಂತ್ರಿ ನಯನಿ ನರಸಿಂಹ ರೆಡ್ಡಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈಗಾಗಲೇ 25ಕೋಟಿ ರೂ.ಗಳ ಚೆಕ್ ಅನ್ನು ಸಂತ್ರಸ್ತರ ಪರಿಹಾರದ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ತೆಲಂಗಾಣ ಸರಕಾರ ಕೇರಳದ ಪ್ರವಾಹಕ್ಕೆ ಯಾವೆಲ್ಲ ರೀತಿಯಲ್ಲಿ ನೆರವು ನೀಡಬಹುದೋ ಆ ಎಲ್ಲ ರೀತಿಯಲ್ಲೂ ಸಹಾಯ ಹಸ್ತ ಚಾಚಿದೆ. ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆ ರೂಪದಲ್ಲಿ ನೀಡುವ ಮೂಲಕ ಕೇರಳ ಉಪಮುಖ್ಯಮಂತ್ರಿ ಅಲಿ ಅವರು ಹೊಸ ಆದರ್ಶಕ್ಕೆ ನಾಂದಿ ಹಾಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more