Short News

ಮಕ್ಕಳಾಗದವರು ಇಂತಹ ಆಹಾರಗಳನ್ನು ಸೇವಿಸಿದರೆ- ಸಂತಾನಭಾಗ್ಯ ಪಡೆಯುತ್ತಾರ

ಮಕ್ಕಳಾಗದವರು ಇಂತಹ ಆಹಾರಗಳನ್ನು ಸೇವಿಸಿದರೆ- ಸಂತಾನಭಾಗ್ಯ ಪಡೆಯುತ್ತಾರ

ಆಧುನಿಕ ಯುಗದಲ್ಲಿ ಹಲವಾರು ಕಾರಣಗಳಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಫಲವತ್ತತೆಯು ಕಡಿಮೆಯಾಗುತ್ತಾ ಇದೆ ಎಂದು ಹಲವಾರು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಒತ್ತಡ, ಕೆಟ್ಟ ಆಹಾರ ಕ್ರಮ, ದೀರ್ಘ ಸಮಯದ ತನಕ ಕೆಲಸ ಮಾಡುತ್ತಿರುವುದು ಇತ್ಯಾದಿಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ನಮ್ಮ ಹಾರ್ಮೋನುಗಳು ಇಂದು ಮೊಂಡುತನ ಪ್ರದರ್ಶಿಸುತ್ತಿದೆ ಮತ್ತು ಅಸಮತೋಲನದ ಹಾರ್ಮೋನುಗಳಿಂದಾಗಿ ಫಲವತ್ತತೆ ಮೇಲೆ ಪರಿಣಾಮವಾಗುತ್ತಿದೆ. ಬೇಗನೆ ಗರ್ಭಧರಿಸಬೇಕೆಂದು ಬಯಸುವಂತಹ ಮಹಿಳೆಯು ಈ ಆಹಾರಗಳನ್ನು ಸೇವಿಸಬೇಕು.

ಸರ್ಕಾರಿ ಸೌಲಭ್ಯ ಪಡೆಯುವ ವಲಸಿಗರಿಗೆ ಗ್ರೀನ್ ಕಾರ್ಡು ನಕಾರ, ಭಾರತೀಯರಿಗೆ ಎಫೆಕ್ಟ್

ಸರ್ಕಾರಿ ಸೌಲಭ್ಯ ಪಡೆಯುವ ವಲಸಿಗರಿಗೆ ಗ್ರೀನ್ ಕಾರ್ಡು ನಕಾರ, ಭಾರತೀಯರಿಗೆ ಎಫೆಕ್ಟ್

ಹೊಸ ನಿಯಮಗಳ ಪ್ರಕಾರ ಆಹಾರ ಮತ್ತು ನಗದು ನೆರವು ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ವಲಸಿಗರಿಗೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ಗ್ರೀನ್ ಕಾರ್ಡನ್ನು ನಿರಾಕರಿಸುವ ಸಾಧ್ಯತೆಯಿದ್ದು ಇದರಿಂದ ಅಮೆರಿಕಾದಲ್ಲಿ ನೆಲೆಸಿರುವ ಸಾವಿರಾರು ಮಂದಿ ಭಾರತೀಯರ ಮೇಲೆ ಪರಿಣಾಮ ಬೀರಲಿದೆ. ಈ ಉದ್ದೇಶಿತ ಕಾನೂನಿಗೆ ಸೆ. 21ರಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಸಹಿ ಹಾಕಿದ್ದು ಇದನ್ನು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಇದಕ್ಕೆ ರಾಜಕೀಯ ಮುಖಂಡರು ಮತ್ತು ಟೆಕ್ಕಿ ಉದ್ಯಮಿಗಳಿಂದ ನಿಂದನೆ ವ್ಯಕ್ತವಾಗಿದೆ.
ಅತ್ಯಾಚಾರ ಆರೋಪ : ರಾಘವೇಶ್ವರ ಶ್ರೀ ವಿರುದ್ಧ ಚಾರ್ಜ್‌ಶೀಟ್

ಅತ್ಯಾಚಾರ ಆರೋಪ : ರಾಘವೇಶ್ವರ ಶ್ರೀ ವಿರುದ್ಧ ಚಾರ್ಜ್‌ಶೀಟ್

ಅತ್ಯಾಚಾರ ಆರೋಪದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸೇರಿ 7 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. 2015ರಲ್ಲಿ ಅತ್ಯಾಚಾರದ ದೂರು ದಾಖಲಾಗಿತ್ತು. 'ನಾನು ಬಾಲಕಿ ಇದ್ದಾಗಿನಿಂದಲೂ ಸ್ವಾಮೀಜಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ. ಅದಕ್ಕೆ ಹಲವರು ಸಹಕಾರ ನೀಡಿದ್ದಾರೆ' ಎಂದು 2015ರ ಆಗಸ್ಟ್ 29ರಂದು ಮಠದ ಭಕ್ತೆಯೊಬ್ಬರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಐಪಿಎಸ್ ಸೆಕ್ಷನ್ 376 (ಅತ್ಯಾಚಾರ), ಐಪಿಸಿ ಸೆಕ್ಷನ್ 376(2) 12 ವರ್ಷದೊಳಗಿನ ಯುವತಿ ಮೇಲೆ ಅತ್ಯಾಚಾರ ಆರೋಪದಡಿ ಎಫ್‌ಐಆರ್ ದಾಖಲಾಗಿತ್ತು. ನಂತರ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು.
ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ: ಯುಟಿ ಖಾದರ್

ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ: ಯುಟಿ ಖಾದರ್

ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ರಾಜ್ಯ ಸರ್ಕಾರ ಸುಭದ್ರವಾಗಿದೆ. ರಾಜ್ಯ ಸರಕಾರದ ಜನಪ್ರಿಯ ಯೋಜನೆಗಳಿಂದ ಕಂಗೆಟ್ಟಿರುವ ಬಿಜೆಪಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಸಚಿವ ಯುಟಿ ಖಾದರ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ಸಲಹೆ ಸೂಚನೆ ಕೊಡಬೇಕಾದ ಬಿಜೆಪಿ ನಾಯಕರು ಅಧಿಕಾರ ದಾಹದಲ್ಲಿದ್ದಾರೆ. ಅವರ ರಾಜಕೀಯ ಸಂಸ್ಕೃತ ಈಗ ಅನಾವರಣ ಗೊಂಡಿದೆ. ಬಿಜೆಪಿ ರಚಿಸಿರುವ ಷಡ್ಯಂತ್ರದಲ್ಲಿ ಯಶಸ್ವಿಯಾಗೋದಿಲ್ಲ. ಹೈದರಾಬಾದ್ ರೆಸಾರ್ಟ್ ನಲ್ಲಿ ಶಾಸಕರು ಕೂರುವ ಅಗತ್ಯ ಇಲ್ಲ. ರಾಜೀನಾಮೆ ಕೊಡೋಕೆ ರಾಜಭವನಕ್ಕೆ ಬರಲೇ ಬೇಕು. ಎಲ್ಲರು ನಮ್ಮೊಂದಿಗೆ ಇದ್ದಾರೆ ಎಂದು ಖಾದರ್ ವ್ಯಂಗ್ಯವಾಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more