Short News

ಗ್ಯಾಸ್ಟ್ರೋಪೊರೆಸಿಸ್ ಎಂಬ ಸೈಲೆಂಟ್ ಕಿಲ್ಲರ್‌ ರೋಗದ ಲಕ್ಷಣಗಳು ಹಾಗೂ ಚಿಕಿತ್ಸೆ

ಗ್ಯಾಸ್ಟ್ರೋಪೊರೆಸಿಸ್ ಎಂಬ ಸೈಲೆಂಟ್ ಕಿಲ್ಲರ್‌ ರೋಗದ ಲಕ್ಷಣಗಳು ಹಾಗೂ ಚಿಕಿತ್ಸೆ

ಗ್ಯಾಸ್ಟ್ರೋಪೊರೆಸಿಸ್ ಎಂದರೆ ಹೊಟ್ಟೆಯು ನೀವು ತಿಂದಿರುವ ಆಹಾರವನ್ನು ಸಣ್ಣ ಕುರುಳಿಗೆ ಸಾಗಿಸಲು ವಿಫಲವಾಗುವುದು. ಜೀರ್ಣಾಂಗ ಸಮಸ್ಯೆಯನ್ನು ನಿಯಂತ್ರಿಸುವ ವೇಗಸ್ ನರಗಳಿಗೆ ಹಾನಿಯಾದಾಗ ಈ ಸಮಸ್ಯೆಯು ಕಾಣಿಸಿಕೊಳ್ಳುವುದು. ಈ ನರಗಳು ಹೊಟ್ಟೆಯ ಸ್ನಾಯುಗಳನ್ನು ಮತ್ತು ಕುರುಳನ್ನು ಸರಿಯಾಗಿ ಕಾರ್ಯನಿರ್ವಹಿಸಿದಂತೆ ತಡೆಯುವುದು. ಇದರಿಂದ ಆಹಾರವು ಜೀರ್ಣಾಂಗ ವ್ಯೂಹಕ್ಕೆ ಸರಿಯಾಗಿ ಚಲಿಸಲು ವಿಫಲವಾಗುವುದು. ಗ್ಯಾಸ್ಟ್ರೋಪೊರೆಸಿಸ್ ನ ಲಕ್ಷಣಗಳು-ಜೀರ್ಣವಾಗದೆ ಇರುವ ಆಹಾರ ವಾಂತಿಯಾಗುವುದು. ಎದೆಯುರಿ, ವಾಕರಿಕೆ ಊಟ ಮಾಡುವ ವೇಳೆ ತಕ್ಷಣ ಹೊಟ್ಟೆ ತುಂಬಿದಂತೆ ಆಗುವುದು.

ಹೊಸಕೋಟೆಯಲ್ಲಿ ಘರ್ಜಿಸಿದ ಕಾಂಗ್ರೆಸ್ ಶಾಸಕ: ರಾಜ್ಯ ರಾಜಕೀಯ ಅಯೋಮಯ

ಹೊಸಕೋಟೆಯಲ್ಲಿ ಘರ್ಜಿಸಿದ ಕಾಂಗ್ರೆಸ್ ಶಾಸಕ: ರಾಜ್ಯ ರಾಜಕೀಯ ಅಯೋಮಯ

ಜೆಡಿಎಸ್ ಜೊತೆ ಕೈಜೋಡಿಸಿ ಸಮ್ಮಿಶ್ರ ಸರಕಾರ ರಚಿಸಿದ ಕಾಂಗ್ರೆಸ್ಸಿಗೆ ತಮ್ಮ ಶಾಸಕರನ್ನು ಸಮಾಧಾನ ಪಡಿಸಲು ಹರಸಾಹಸ ಪಡುವಂತಾಗಿದೆ. ಇವೆಲ್ಲದರ ನಡುವೆ ದೇಶದ ಶ್ರೀಮಂತ ಶಾಸಕ, ಹೊಸಕೋಟೆಯಲ್ಲಿ ತಮ್ಮ ಪಕ್ಷದ ವಿರುದ್ದವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂ ಟಿ ಬಿ ನಾಗರಾಜು, ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ನಮ್ಮ ಅಸಮಾಧಾನವನ್ನೆಲ್ಲಾ ಹೊರಹಾಕಿ, ಮುಂದಿನ ನಿರ್ಧಾರ ತಿಳಿಸುವುದಾಗಿ ಹೇಳಿರುವುದು, ಪಕ್ಷಕ್ಕೆ ಇನ್ನಷ್ಟು ಮುಜುಗರವನ್ನು ತಂದೊಡ್ಡಿದೆ. ಎಂಟಿಬಿ ಒಬ್ಬರೇ ಇದ್ದಾರಾ ಅಥವಾ ಅವರ ಜೊತೆ ಇನ್ನೆಷ್ಟು ಜನ ಇದ್ದಾರೋ ಎನ್ನುವುದೀಗ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ನವೆಂಬರ್.15 ರಿಂದ ಆಳ್ವಾಸ್ ಕೃಷಿ ಸಿರಿ ಅರಂಭ

ನವೆಂಬರ್.15 ರಿಂದ ಆಳ್ವಾಸ್ ಕೃಷಿ ಸಿರಿ ಅರಂಭ

ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ 2018' ಇದೇ ಬರುವ ನವೆಂಬರ್ 16 ರಿಂದ 3 ದಿನಗಳ ಕಾಲ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ. ಸಾಹಿತ್ಯ, ಸಂಸ್ಕೃತಿ ಗಂಭೀರ ಗೋಷ್ಠಿಗಳೊಂದಿಗೆ ಕೃಷಿಯನ್ನೂ ಮುನ್ನೆಲೆಗೆ ತರಬೇಕೆಂಬ ದೃಷ್ಠಿಕೋನ ದಿಂದ ನವೆಂಬರ್ 15ರಂದು ಆಳ್ವಾಸ್ ಕೃಷಿಸಿರಿ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮೀನುಗಾರಿಕಾ ಇಲಾಖೆ, ಕೃಷಿ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಮತ್ತು ರೈತಸಂಘಗಳ ಸಹಯೋಗದೊಂದಿಗೆ ಈ ಕೃಷಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಡಿ.ಕೆ.ಶಿ ಸಾಹೇಬ್ರು ಚಿಲ್ಲರೆ ರಾಜಕಾರಣ ಮಾಡೊಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ಡಿ.ಕೆ.ಶಿ ಸಾಹೇಬ್ರು ಚಿಲ್ಲರೆ ರಾಜಕಾರಣ ಮಾಡೊಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ ವಿಚಾರದಲ್ಲಿ ಡಿ.ಕೆ. ಶಿ ಹಸ್ತಕ್ಷೇಪ ನಡೆಸುತ್ತಿದ್ದಾರೆಂದು ಆರೋಪಿಸಿ ಸತೀಶ್ ಮತ್ತು ರಮೇಶ್ ಜಾರಕಿಹೊಳಿ ಸಹೋದರರು ಬಂಡೆದ್ದ ಸಂದರ್ಭದಿಂದಲೂ ಮೌನವಾಗಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೊನೆಗೂ ಮೌನ ಮುರಿದಿದ್ದಾರೆ. ಬೆಳಗಾವಿಯಲ್ಲಿನ ಪಕ್ಷದ ಆಂತರಿಕ ಸಮಸ್ಯೆಗೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ತಮ್ಮ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಈ ವಿವಾದದಲ್ಲಿ ಡಿ.ಕೆ. ಶಿವಕುಮಾರ್ ಅವರ ಹಸ್ತಕ್ಷೇಪದ ಬಗ್ಗೆ ಜಾರಕಿಹೊಳಿ ಸಹೋದರರು ದೂರು ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು, ಡಿ.ಕೆ. ಸಾಹೇಬರು ಚಿಲ್ಲರೆ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more