Short News

ಭಗವಾನ್ ಶಿವ ಪೂಜೆ ಮಾಡಿ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಿ

ಭಗವಾನ್ ಶಿವ ಪೂಜೆ ಮಾಡಿ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಿ

ಶ್ರಾವಣ ಮಾಸದಲ್ಲಿ ಶಿವ ಭಕ್ತರು ಶಿವನನ್ನು ಬಗೆ ಬಗೆಯಾಗಿ ಪೂಜಿಸಿ ಭಜಿಸುತ್ತಾರೆ. ಈ ಸಮಯದಲ್ಲಿ ಭಕ್ತರು ಉಪವಾಸವನ್ನು ಕೈಗೊಂಡು ದೇವಾಲಯಕ್ಕೆ ಭೇಟಿ ನೀಡಿ ಶಿವನ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ಈ ಸಮಯದಲ್ಲಿ ವಿಷ್ಣುವು ವಿಶ್ರಾಂತಿಯನ್ನು ತೆಗೆದುಕೊಂಡು ಶಿವನು ಸಮಸ್ತ ಲೋಕ ಕಲ್ಯಾಣವನ್ನು ಮಾಡುತ್ತಾರೆ ಮತ್ತು ಲೋಕದ ಜನರ ಜವಬ್ದಾರಿಯನ್ನು ನಿರ್ವಹಿಸುತ್ತಾರೆ ಎಂಬುದು ಪುರಾಣಗಳಲ್ಲಿ ಉಲ್ಲೇಖಿಸಿರುವಂತಹದ್ದಾಗಿದೆ. ಶ್ರಾವಣ ಮಾಸವನ್ನು ಅತ್ಯುನ್ನತ ಮಾಸ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ದೇವರಿಗೆ ಪೂಜೆಯನ್ನು ನೀಡುವುದರಿಂದ ಗ್ರಹದೋಶ ನಿವಾರಣೆಯಾಗಿ ಶಿವನ ಅನುಗ್ರಹ ದೊರೆಯುತ್ತದೆ.
ಲಂಡನ್​ ಪಾರ್ಲಿಮೆಂಟ್ ಬಳಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕ ಹಲವರಿಗೆ ಗಾಯ

ಲಂಡನ್​ ಪಾರ್ಲಿಮೆಂಟ್ ಬಳಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಚಾಲಕ ಹಲವರಿಗೆ ಗಾಯ

ಇಂಗ್ಲೆಂಡ್​ ರಾಜಧಾನಿ ಲಂಡನ್​ ಪಾರ್ಲಿಮೆಂಟ್ ಬಳಿ ವ್ಯಕ್ತಿಯೊಬ್ಬ ಹೌಸ್​ ಆಫ್​ ಕಾಮನ್ಸ್​ ಗೆ ತೆರಳುವ ಮಾರ್ಗದ ರಕ್ಷಣಾ ತಡೆಗೊಡೆಗಳನ್ನ ಭೇದಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ಘಟನೆ ನಡೆದಿದೆ. ಚಾಲಕ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರಿಂದ ಹಲವು ಪಾದಚಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ಗಮನಿಸಿದ ಪಾರ್ಲಿಮೆಂಟ್​ ರಕ್ಷಣಾ ಸಿಬ್ಬಂದಿ ಯದ್ವಾತದ್ವಾ ಕಾರು ಚಲಾಯಿಸಿದ ಡ್ರೈವರ್​ನನ್ನು ಬಂಧಿಸಿದ್ದಾರೆ. ಈ ಅಪಘಾತದಿಂದ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕದನ ವಿರಾಮ ಉಲ್ಲಂಘಿಸಿದ ಪಾಕ್, ಇಬ್ಬರು ಪಾಕ್ ಯೋಧರು ಭಾರತೀಯ ಸೈನಿಕರಿಂದ ಬಲಿ

ಕದನ ವಿರಾಮ ಉಲ್ಲಂಘಿಸಿದ ಪಾಕ್, ಇಬ್ಬರು ಪಾಕ್ ಯೋಧರು ಭಾರತೀಯ ಸೈನಿಕರಿಂದ ಬಲಿ

ಜಮ್ಮು-ಕಾಶ್ಮೀರದ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಭಾರತೀಯ ಯೋಧರು ನೀಡಿದ ಗುಂಡಿನ ದಾಳಿಯ ಪ್ರತ್ಯುತ್ತರಕ್ಕೆ ಇಬ್ಬರು ಪಾಕ್ ಯೋಧರು ಬಲಿಯಾಗಿದ್ದಾರೆ. ಪಾಕ್ ಟ್ರೂಪರ್ ಗಳು ಗುಂಡೇಟಿಕೆ ಬಲಿಯಾಗಿರುವುದನ್ನು ಸ್ವತಃ ಸೇನೆಯ ರಕ್ಷಣಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಟ್ಯಾಂಗ್ಧರ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿತ್ತು.
ಮಧುಮೇಹ ನಿಯಂತ್ರಣ-ತೂಕ ಇಳಿಕೆಗೆ-ಹಾಗಲಕಾಯಿ ಜ್ಯೂಸ್ ಕುಡಿಯಿರಿ

ಮಧುಮೇಹ ನಿಯಂತ್ರಣ-ತೂಕ ಇಳಿಕೆಗೆ-ಹಾಗಲಕಾಯಿ ಜ್ಯೂಸ್ ಕುಡಿಯಿರಿ

ಹಾಗಲಕಾಯಿಯಲ್ಲಿರುವ ಮೂರು ಪ್ರಮುಖ ಗುಣಗಳು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ. ಪ್ರಮುಖವಾಗಿ ಇದರಲ್ಲಿರುವ ಕ್ಯಾರಂಟಿನ್ ಎಂಬ ಪೋಷಕಾಂಶ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ, ವೈಸೀನ್ ಎಂಬ ಪೋಷಕಾಂಶಕ್ಕೆ ಇನ್ಸುಲಿನ್ ಗೆ ಸಮನಾದ ಗುಣಗಳಿವೆ. ಇವೆರಡೂ ಗುಣಗಳು ಟೈಪ್ 2 ಮಧುಮೇಹಿಗಳ ಸಹಿತ ಎಲ್ಲಾ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಮಧುಮೇಹಿಗಳು ನಿತ್ಯವೂ ಐವತ್ತರಿಂದ ನೂರು ಮಿಲಿಲೀಟರ್ ತಾಜಾ ಹಾಗಲಕಾಯಿಯ ರಸವನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more