Short News

ವಯಸ್ಸಾಗುವ ಲಕ್ಷಣ ತಡೆಯುವ ಹೆಸರುಕಾಳಿನ ಹಿಟ್ಟಿನ ಫೇಸ್ ಮಾಸ್ಕ್

ವಯಸ್ಸಾಗುವ ಲಕ್ಷಣ ತಡೆಯುವ ಹೆಸರುಕಾಳಿನ ಹಿಟ್ಟಿನ ಫೇಸ್ ಮಾಸ್ಕ್

ಭೂಮಿ ಮೇಲೆ ಯಾರೂ ಚಿರಂಜೀವಿಗಳಲ್ಲ, ಇದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೂ ವಯಸ್ಸಾಗುವಂತಹ ಕೆಲವು ಲಕ್ಷಣಗಳನ್ನು ತಡೆಯಲು ನಾವು ಇನ್ನಿಲ್ಲದಂತೆ ಪ್ರಯತ್ನಿಸುತ್ತೇವೆ. ನಮಗೆ ವಯಸ್ಸಾಗಿದೆ ಎಂದು ಬೇರೆಯವರಿಗೆ ತಿಳಿಯುವುದು ಬೇಡ ಎನ್ನುವುದೇ ಇದರ ಹಿಂದಿನ ಉದ್ದೇಶ. ಹೆಸರುಕಾಳಿನ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಚರ್ಮದ ರಂಧ್ರವನ್ನು ಆಳವಾಗಿ ಶುದ್ಧೀಕರಿಸಿ, ತ್ವಚೆಗೆ ಪೋಷಣೆ ನೀಡುವುದು. ಇದರಲ್ಲಿರುವ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣಗಳು ಚರ್ಮಕ್ಕೆ ಬಿಗಿತ್ವ ನೀಡುವುದು ಮತ್ತು ಚರ್ಮವು ಸುಂದರ

ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ!

ಅಭಿಮಾನಿಗಳ ನಿದ್ದೆ ಕದ್ದ ಅನುಷ್ಕಾ ಕಿಲ್ಲರ್ ಲುಕ್‌ನಲ್ಲಿ!

ಬಾಲಿವುಡ್‌ನಲ್ಲಿ ಸಾಧನೆಯತ್ತ ಮುನ್ನುಗ್ಗುತ್ತಿರುವ ನಟಿ ಅನುಷ್ಕಾ ತಮ್ಮ ನಟನೆಯಿಂದ ಮಾತ್ರವಲ್ಲದೆ ಫ್ಯಾಶನ್ ಪ್ರಿಯತೆಯಿಂದಲೂ ತಮ್ಮ ಅಭಿಮಾನಿಗಳ ಮನಗೆದ್ದವರು ವಿರಾಟ್ ಕೊಹ್ಲಿ ಕೈಹಿಡಿದ ಮೇಲಂತೂ ತಮ್ಮ ಇಮೇಜ್ ಅನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಈ ಬೆಡಗಿ ತಮ್ಮದೇ ಹೆಸರನ್ನು ಬಾಲಿವುಡ್‌ನಲ್ಲಿ ಶಾಶ್ವತವಾಗಿಸಿದ್ದಾರೆ.  ತಮ್ಮ ವೃತ್ತಿ ಜೀವನದಲ್ಲಿ ಕೂಡ ಅನುಷ್ಕಾ ಮುಂದೆಯೇ ಇದ್ದು ಫೆಮಿನಾ ನಿಯತಕಾಲಿಕೆಯ ಇತ್ತೀಚಿನ ಆವೃತ್ತಿಯಲ್ಲಿ ಕವರ್ ಗರ್ಲ್ ಆಗಿ ಮಿಂಚಿದ್ದಾರೆ. ಕುರ್ಚಿಯಲ್ಲಿ ಕುಳಿತುಕೊಂಡು ಉಗುರು ಕಚ್ಚಿಕೊಂಡಿರುವ ಫೋಟೋ ಈ ನಿಯತಕಾಲಿಕೆಯ ಕವರ್ ಫೋಟೋದಲ್ಲಿದೆ.
ಮುಂಬೈನ ನಿವಾಸದಲ್ಲಿ ಎಂಗೇಜ್ ಆದ್ರು ಪಿಗ್ಗಿ-ನಿಕ್

ಮುಂಬೈನ ನಿವಾಸದಲ್ಲಿ ಎಂಗೇಜ್ ಆದ್ರು ಪಿಗ್ಗಿ-ನಿಕ್

ಬಾಲಿವುಡ್​ ಬೆಡಗಿ ಪ್ರಿಯಾಂಕಾ ಚೋಪ್ರಾ ಇಂದು ನಿಕ್ ಜತೆ ಎಂಗೇಜ್ ಆಗಲು ಮುಹೂರ್ತ ಫಿಕ್ಸ್ ಆಗಿದೆ. ಪ್ರಿಯಾಂಕಾ ಅವರ ಮುಂಬೈನ ನಿವಾಸದಲ್ಲಿ ಪಿಗ್ಗಿ ಹಾಗೂ ನಿಕ್ ಜೊಹಾನ್ಸ್​ ಅವರ ಎಂಗೇಜ್​ಮೆಂಟ್ ಇಂದು ನಡೆಯುತ್ತಿದೆ. ಇಂದು ಮುಂಜಾನೆಯಿಂದಲೇ ಸಾಂಪ್ರದಾಯಿಕ ಚಟುವಟಿಕೆಗಳು ಗರಿಗೆದರಿದ್ದು, ಸಾಂಪ್ರದಾಯಿಕ ಉಡುಗೆಯಲ್ಲಿ ಈ ಜೋಡಿ ಪೂಜೆ ಮಾಡುತ್ತಿರುವ ಫೋಟೋ ಸದ್ಯ ರಿವೀಲ್ ಆಗಿದೆ. ಈ ಕಾರ್ಯಕ್ರಮದಲ್ಲಿ ಕೇವಲ ಆಪ್ತರು ಮಾತ್ರ ಪಾಲ್ಗೊಂಡಿರುವುದು ಮೂಲಗಳ ತಿಳಿದು ಬಂದಿದೆ.
ದಾಭೋಲ್ಕರ್ ಹತ್ಯೆಯ 5 ವರ್ಷದ ನಂತರ ಪ್ರಮುಖ ಆರೋಪಿ ಬಂಧನ

ದಾಭೋಲ್ಕರ್ ಹತ್ಯೆಯ 5 ವರ್ಷದ ನಂತರ ಪ್ರಮುಖ ಆರೋಪಿ ಬಂಧನ

ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಇಂದು ಪ್ರಮುಖ ಶಂಕಿತ ಆರೋಪಿ ಸಚಿನ್ ಪ್ರಕಾಶ್ ರಾವ್ ಅಂಡುರೆ ಎಂಬುವವನನ್ನು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಬಂಧಿಸಿದ್ದಾರೆ.

ಮೂಢನಂಬಿಕೆ ಮತ್ತು ಮಾಟಮಂತ್ರದ ವಿರುದ್ಧ ಹೋರಾಟ ನಡೆಸಿದ್ದ ವಿಚಾರವಾದಿ, ಲೇಖಕ, ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಅಧ್ಯಕ್ಷ ನರೇಂದ್ರ ಅಚ್ಯುತ್ ದಾಬೋಲ್ಕರ್ (67) ಅವರನ್ನು 2013ರ ಆಗಸ್ಟ್ 20ರಂದು ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು.

2013ರ ಆಗಸ್ಟ್ 20ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನದ ಬಳಿ ಬೆಳಿಗ್ಗೆ 7.20ರ ಸುಮಾರಿಗೆ ವಾಕಿಂಗ್ ಮಾಡುತ್ತಿದ್ದಾಗ ಅಪರಿಚಿತರಿಬ್ಬರು ಹತ್ಯೆಗೈದಿದ್ದರು.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more