Short News

ಹೆರ್ರಿಂಗ್ ಮೀನು, ಬಾದಾಮಿಯಂತಹ ರುಚಿ, ಹಾಗೂ ಆರೋಗ್ಯದ ಗಣಿ

ಹೆರ್ರಿಂಗ್ ಮೀನು, ಬಾದಾಮಿಯಂತಹ ರುಚಿ, ಹಾಗೂ ಆರೋಗ್ಯದ ಗಣಿ

Clupeidae ಎಂಬ ಜಾತಿಗೆ ಸೇರಿದ ಸರಿಸುಮಾರು ಬಂಗಡೆಯನ್ನೇ ಹೋಲುವ ಹುರುಪೆಯುಳ್ಳ ಮೀನು ಹೆರ್ರಿಂಗ್. ಕನ್ನಡದಲ್ಲಿ ಕೆಲವೆಡೆ ಇದಕ್ಕೆ ಸೋಡಿ ಮೀನು ಎಂದೂ ಕರೆಯುತ್ತಾರೆ. ತೀರಾ ಚಿಕ್ಕ ತಲೆ, ಅಪ್ಪಟ ಬೆಳ್ಳಿಯ ಹೊಳೆಹೊಳೆಯುವ ಹುರುಪೆಗಳ ಮತ್ತು ನಡುವಿನಲ್ಲಿ ಬಂಗಡೆಗಿಂತ ಕೊಂಚವೇ ಹೆಚ್ಚು ದಪ್ಪನಿರುವ ಈ ಮೀನು ಪೂರ್ಣವಾಗಿ ಬೆಳೆದಾಗ ಸುಮಾರು ಎಂಟರಿಂದ ಹದಿನೈದು ಇಂಚಿನಷ್ಟು ಗಾತ್ರ ಪಡೆದಿರುತ್ತದೆ. ಈ ಮೀನಿನಲ್ಲಿ ಮೂರು ಔನ್ಸ್ ಅಥವಾ ಸುಮಾರು ಎಂಭತ್ತೈದು ಗ್ರಾಂ ಭಾರದ ಮೀನಿನಲ್ಲಿ 173 ಕ್ಯಾಲೋರಿಗಳು, 19.6 ಗ್ರಾಂ ಪ್ರೋಟೀನ್ ಹಾಗೂ 9.9 ಗ್ರಾಂ ಕೊಬ್ಬು ಇರುತ್ತದೆ.

ನಿಮ್ಮ ಮೊಬೈಲ್ 'ಸಿಮ್' ಜೋಪಾನ!.ಈ ಒಂದು ತಪ್ಪಿಗೆ ನೀವು ಮನೆ ಮಠ ಕಳೆದುಕೊಳ್ಳಬಹುದು!

ನಿಮ್ಮ ಮೊಬೈಲ್ 'ಸಿಮ್' ಜೋಪಾನ!.ಈ ಒಂದು ತಪ್ಪಿಗೆ ನೀವು ಮನೆ ಮಠ ಕಳೆದುಕೊಳ್ಳಬಹುದು!

ಈ ಮೊದಲು ಆಮಿಷಗಳನ್ನು ತೋರಿಸಿ ಜನರಿಗೆ ವಂಚಿಸುತ್ತಿದ್ದ ಸೈಬರ್ ಕ್ರಿಮಿನಲ್‌ಗಳು ಈಗ 'ಸಿಮ್ ಸ್ವ್ಯಾಪ್' ಎಂಬ ಹೊಸ ಮಾದರಿಯ ಅಪರಾಧ ದಾರಿಯನ್ನು ಕಂಡುಕೊಂಡಿದ್ದಾರೆ. ತಂತ್ರಜ್ಞಾನಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವವರನ್ನು ಸಹ ಸುಲಭವಾಗಿ ವಂಚಿಸಬಹುದಾದ ಈ 'ಸಿಮ್ ಸ್ವ್ಯಾಪ್‌ ವಂಚನೆ' ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತಕೇಳಿ ಬರುತ್ತಿದೆ.ಹೌದು, ಈ ಸ್ಮಾರ್ಟ್‌ಫೋನ್‌, ಡಿಜಿಟಲ್‌ ವ್ಯವಹಾರದ ಬಗ್ಗೆ ಅಜ್ಞಾನ ಇದ್ದವರು ಮಾತ್ರ ಹಣ ಕಳೆದುಕೊಳ್ಳುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಸಿಮ್ ಸ್ವ್ಯಾಪ್ ಹಗರಣದಲ್ಲಿ ನಗರದ ಪ್ರದೇಶದ ಯುವಕರೇ ಬಲೆಗೆ ಬಿದ್ದಿದ್ದಾರೆ.

ಪರಮಾಣು ಶಕ್ತಿ ತುಂಬಿದ ಶಾಂತಿಧೂತ: ವಿದೇಶಿ ಪತ್ರಿಕೆಗಳಲ್ಲಿ ವಾಜಪೇಯಿ

ಪರಮಾಣು ಶಕ್ತಿ ತುಂಬಿದ ಶಾಂತಿಧೂತ: ವಿದೇಶಿ ಪತ್ರಿಕೆಗಳಲ್ಲಿ ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ರಾಷ್ಟ್ರ ಮಾತ್ರವಲ್ಲ ಅಂತರ್ ರಾಷ್ಟ್ರ ವಲಯದಲ್ಲಿಯೂ ಭಾರಿ ಮನ್ನಣೆ ಇತ್ತು. ವಿದೇಶಾಂಗ ವ್ಯವಹಾರಗಳಲ್ಲಿ ಆಸಕ್ತಿ ಇದ್ದ ಅವರಿಗೆ ವಿದೇಶ ರಾಜಕಾರಣಿಗಳು ಆಪ್ತರಾಗಿದ್ದರು. ಅವರು ಪ್ರಧಾನಿಯಾದ ಮೇಲೆ ಪಾಕಿಸ್ತಾನವೂ ಸೇರಿದಂತೆ ಹಲವು ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಗಟ್ಟಿ ಮಾಡುವ ಪ್ರಯತ್ನ ಮಾಡಿದ್ದರು. ತಾವು ಹೋದ ರಾಷ್ಟ್ರದಲ್ಲಿ ತಮ್ಮದೊಂದು ಛಾಪು ಮೂಡಿಸದೇ ಬರುತ್ತಿರಲಿಲ್ಲ. ಭಾರತ ಕಂಡ ಅಗ್ರಮಾನ್ಯ ರಾಜಕೀಯ ಮುತ್ಸದ್ದಿಗೆ ದೇಶದ ಮಾಧ್ಯಮ ವಲಯ ನುಡಿ ಗೌರವ ಸಲ್ಲಿಸಿದೆ. ಹಾಗೆಯೇ ಅಂತರರಾಷ್ಟ್ರೀಯ ಪತ್ರಿಕೆಗಳೂ ಕೂಡ ವಾಜಪೇಯಿ ಅವರ ಅಗಲಿಕೆಯನ್ನು ಪದಗಳ ಮೂಲಕ ಸ್ಮರಿಸಿದೆ.
ವಾಜಪೇಯಿ ನಿಧನಕ್ಕೆ ಕಂಬನಿ ಮಿಡಿದ   ಸಿದ್ಧಗಂಗಾ ಶ್ರೀ, ಪೇಜಾವರ ಶ್ರೀ

ವಾಜಪೇಯಿ ನಿಧನಕ್ಕೆ ಕಂಬನಿ ಮಿಡಿದ ಸಿದ್ಧಗಂಗಾ ಶ್ರೀ, ಪೇಜಾವರ ಶ್ರೀ

ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾವಿಗೆ ಹಿರಿಯ ಯತಿಗಳಾದ ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ. ತನ್ನ ಕಳೆದ ಪರ್ಯಾಯದಲ್ಲಿ ಅಟಲ್ ಜಿ ಭಾಗಿಯಾಗಿದ್ದರು ಎಂದು ಶ್ರೀಗಳು ವಾಜಪೇಯಿ ಅವರನ್ನು ಸ್ಮರಿಸಿದರು. ಈ ದೇಶ ಕಂಡ ಧೀಮಂತ ನಾಯಕರಲ್ಲಿ ವಾಜಪೇಯಿ ಕೂಡ ಒಬ್ಬರು ಎಂದರು. ಇನ್ನು ಸಿದ್ಧಗಂಗಾ ಮಠದ ಸ್ವಾಮೀಜಿ ಶಿವಕುಮಾರ ಸ್ವಾಮೀಜಿಗಳು ಕೂಡ ವಾಜಪೇಯಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ವಾಜಪೇಯಿ ನಿಧನದ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು. ಅವರೊಬ್ಬ ಮಹಾನ್ ರಾಜಕಾರಣಿ ಎಂದು ಸಿದ್ಧಗಂಗಾ ಶ್ರೀಗಳು ಹೇಳಿದ್ದಾರೆ,
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more