Short News

ಭೀಮನ ಅಮಾವಾಸ್ಯೆ  ವ್ರತ

ಭೀಮನ ಅಮಾವಾಸ್ಯೆ ವ್ರತ

ಹಿಂದೂ ಧರ್ಮದಲ್ಲಿರುವಷ್ಟು ಹಬ್ಬಗಳು ಮತ್ತು ಆಚರಣೆಗಳು ಬೇರೆ ಯಾವ ಧರ್ಮದಲ್ಲೂ ನಮಗೆ ಕಾಣಲು ಸಿಗುವುದಿಲ್ಲ. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಹೀಗೆ ಪ್ರತಿಯೊಂದರಲ್ಲೂ ಆಗುವ ಬದಲಾವಣೆಗಳು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ರತೀ 15 ದಿನಕ್ಕೊಮ್ಮೆ ಹುಣ್ಣಿಮೆ ಮತ್ತು ಅಮವಾಸ್ಯೆ ಬರುತ್ತಾ ಇರುತ್ತದೆ. ಇದೆರಡಕ್ಕೂ ತಮ್ಮದೇ ಆದಂತಹ ವಿಶೇಷತೆಗಳಿವೆ. ಅದರಲ್ಲೂ ಭೀಮನ ಅಮಾವಾಸ್ಯೆಯನ್ನು ಆಷಾಢ ತಿಂಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.ಯಾವುದೇ ಆಚರಣೆಯಾಗಿರಲಿ ಅದರ ಹಿಂದಿನ ಅರ್ಥ ತಿಳಿದಿದ್ದರೆ ಹಬ್ಬ ಮತ್ತು ಆಚರಣೆಯು ಹೆಚ್ಚು ಫಲಪ್ರದವಾಗಿರುತ್ತದೆ.

ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭ!

ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭ!

ತನ್ನ ಗ್ರಾಹಕರಿಗೆ ಶೂನ್ಯ ಶುಲ್ಕ ಸದಸ್ಯತ್ವ ನೀಡಲು ಫ್ಲಿಪ್ಕಾರ್ಟ್ ಫ್ಲಸ್ ಯೋಜನೆ ಆರಂಭಿಸಿದೆ. ಜಗತ್ತಿನ ದೈತ್ಯ ಸಂಸ್ಥೆ ಅಮೆಜಾನ್ ಸಂಸ್ಥೆಯ ಅಮೆಜಾನ್ ಪ್ರೈಂ ಕಾರ್ಯಕ್ರಮದಂತೆ ಫ್ಲಿಪ್ಕಾರ್ಟ್ ಪ್ಲಸ್ ಯೋಜನೆ ಮೂಲಕ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡುವುದು ಇದರ ಉದ್ದೇಶವಾಗಿದೆ. ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯತ್ವಕ್ಕೆ ಹಣ ಪಾವತಿಸಬೇಕಿಲ್ಲ. ಫ್ಲಿಪ್ಕಾರ್ಟ್ ಫ್ಲಸ್ ಸದಸ್ಯತ್ವ ಪಡೆದವರು ಒಂದೇ ದಿನದಲ್ಲಿ ಉಚಿತವಾಗಿ ಡಿಲೆವರಿ, ಡಿಸ್ಕೌಂಟ್ ಸೇಮ್ ಡೇ ಡಿಲೆವರಿ, ಎಕ್ಸ್ ಕ್ಲ್ಯೂಸಿವ್ ಡೀಲ್ಸ್, ಪ್ರೈಂ ವಿಡಿಯೋ, ಮ್ಯೂಸಿಕ್, ಸಿನಿಮಾ ಸೇರಿದಂತೆ ಅನೇಕ ಸೌಲಭ್ಯವನ್ನು ಗ್ರಾಹಕರು ಪಡೆಯಲಿದ್ದಾರೆ.
ಕೊಡಗು : ಮಳೆ, ಗುಡ್ಡ ಕುಸಿತ 5 ಜನರು ಸಾವು

ಕೊಡಗು : ಮಳೆ, ಗುಡ್ಡ ಕುಸಿತ 5 ಜನರು ಸಾವು

ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೊಡಗಿನಲ್ಲಿ 24 ಗಂಟೆಯಲ್ಲಿ 5 ಜನರು ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಲು ಸೇನಾಪಡೆ ಆಗಮಿಸಿದೆ. ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕೊಡಗಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರವಾಹ ಪೀಡಿತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಕಳೆದ 24 ಗಂಟೆಗಳಲ್ಲಿ ಕೊಡಗಿನಲ್ಲಿ 5 ಜನರು ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಚುರುಕಾಗಲಿದ್ದು, ಸೇನಾಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಲಿದೆ.

ಅಭಿಮಾನದ ರಾಯಭಾರಿಯಾಗಿ ಪಾಕಿಸ್ತಾನಕ್ಕೆ: ನವಜೋತ್ ಸಿಂಗ್ ಸಿಧು

ಅಭಿಮಾನದ ರಾಯಭಾರಿಯಾಗಿ ಪಾಕಿಸ್ತಾನಕ್ಕೆ: ನವಜೋತ್ ಸಿಂಗ್ ಸಿಧು

ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇಸ್ಲಾಮಾಬಾದ್‌ಗೆ ತೆರಳಿದ್ದಾರೆ.

ಗಡಿಯ ಆಚೆಗಿನ ಅಭಿಮಾನದ ರಾಯಭಾರಿಯಾಗಿ ಹೋಗುತ್ತಿರುವುದಾಗಿ ಸಿಧು ಹೇಳಿದ್ದಾರೆ.

'ಪಾಕಿಸ್ತಾನದಲ್ಲಿನ ಪ್ರಜಾಸತ್ತಾತ್ಮಕ ಬದಲಾವಣೆಗಳು ಮಹತ್ವದ್ದಾಗಿವೆ. ನನ್ನ ಉತ್ತಮ ಸ್ನೇಹಿತನಾದ ಇಮ್ರಾನ್ ಖಾನ್ ಆಹ್ವಾನ ನೀಡಿರುವುದಕ್ಕೆ ನಾನು ಅದೃಷ್ಟವಂತ ಎನಿಸುತ್ತಿದೆ. ಇದು ನನಗೆ ದೊರೆತ ಗೌರವ. ನಾನು ಪಾಕಿಸ್ತಾನಕ್ಕೆ ಅಭಿಮಾನದ ರಾಯಭಾರಿಯಾಗಿ ಹೋಗುತ್ತಿದ್ದೇನೆ. ಎರಡು ದೇಶಗಳ ನಡುವಣ ಸಂಬಂಧ ಸುಧಾರಿಸಲಿದೆ ಎಂಬ ಆಶಯ ನನಗಿದೆ' ಎಂದು ಸಿಧು ತಿಳಿಸಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more