Short News

ಬರೀ ಏಳೇ ದಿನಗಳಲ್ಲಿ ಯಶಸ್ವಿಯಾಗಲು ಸರಳ ಟಿಪ್ಸ್

ಬರೀ ಏಳೇ ದಿನಗಳಲ್ಲಿ ಯಶಸ್ವಿಯಾಗಲು ಸರಳ ಟಿಪ್ಸ್

ಯೋಜನೆ ರೂಪಿಸಲು ನೀವು ಅವಸರ ಮಾಡಬೇಡಿ. ನೀವು ಇದಕ್ಕಾಗಿ ಸಂಪೂರ್ಣ ಒಂದು ದಿನ ತೆಗೆದುಕೊಂಡು ಸರಿಯಾಗಿ ಕಾರ್ಯಗತವಾಗುವ ಯೋಜನೆ ರೂಪಿಸಿ. ವಾಸ್ತವಿಕವಾಗಿರುವ ಯೋಜನೆಗಳನ್ನು ಹಾಕಿಕೊಳ್ಳಿ. ಗುರಿ ಸಾಧಿಸಲು ನಿಮ್ಮ ಹಾದಿಗೆ ಬರುವಂತಹ ಅಡಚಣೆಗಳನ್ನು ವಿಶ್ಲೇಷಿಸಿ. ನಿಮ್ಮ ಹಾದಿಯಲ್ಲಿ ಬರುವಂತಹ ಎಲ್ಲಾ ರೀತಿಯ ಅಡಚಣೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನಿಮ್ಮ ಮನಸ್ಸಿಗೆ ದೃಢಮಾಡಿಸಿಕೊಳ್ಳಿ. ನಿಮ್ಮ ಯೋಜನೆ ಕಾರ್ಯಗತಗೊಳಿಸಿ ನೀವು ಯೋಜನೆ ರೂಪಿಸಿಕೊಂಡ ಬಳಿಕ ನೀವು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು ಮತ್ತು ಇದಕ್ಕೆ ನೀವು ತಯಾರಾಗಬೇಕು.

ಹೈದರಾಬಾದ್: ವಿಮಾನದಲ್ಲಿ ಉಸಿರಾಟದ ತೊಂದರೆಯಾಗಿ 11 ತಿಂಗಳ ಮಗು ಬಲಿ

ಹೈದರಾಬಾದ್: ವಿಮಾನದಲ್ಲಿ ಉಸಿರಾಟದ ತೊಂದರೆಯಾಗಿ 11 ತಿಂಗಳ ಮಗು ಬಲಿ

ಕತಾರ್ ಏರ್ ವೇಸ್ ನಲ್ಲಿ ಪ್ರಯಾಣಿಸುತ್ತಿದ್ದ 11 ತಿಂಗಳ ಮಗುವೊಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ದುರ್ಘಟನೆ ಬುಧವಾರದಂದು ನಡೆದಿದೆ. ಆದರೆ, ವಿಮಾನ ನಿಲ್ದಾಣದಲ್ಲಿ ಮಗು ಮೃತಪಟ್ಟಿಲ್ಲ ಎಂದು ಹೈದರಾಬಾದ್ ವಿಮಾನ ಪ್ರಾಧಿಕಾರ ಪ್ರತಿಕ್ರಿಯಿಸಿದೆ.ಅರ್ಣವ್ ವರ್ಮಾ ಹೆಸರಿನ ಹಸುಗೂತನ್ನ ತಂದೆ ತಾಯಿ ಜತೆ ದೋಹಾದಿಂದ ಹೈದಾರಾಬಾದಿಗೆ ಬರುವಾಗ ಉಸಿರಾಟದ ತೊಂದರೆ ಅನುಭವಿಸಿದೆ. ಹೈದರಾಬಾದ್‌ನಲ್ಲಿ ವಿಮಾನ ಲ್ಯಾಂಡ್‌ ಆದ ಕೂಡಲೇ ಅಪೋಲೊ ಮೆಡಿಕಲ್‌ ಸೆಂಟರ್‌ಗೆ ಕರೆದೊಯ್ಯಲಾಗಿದೆ. ಆದರೆ, ಕರೆ ತರುವಾಗಲೆ ಮಗು ಮೃತಪಟ್ಟಿದೆ. ಅರ್ನವ್ ರಾತ್ರಿ 2.29ಕ್ಕೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಹೊಸ ಸೌಲಭ್ಯಗಳನ್ನು ಹೊತ್ತು ಬರುತ್ತಿದೆ ಸ್ಯಾಂಟ್ರೋ

ಹೊಸ ಸೌಲಭ್ಯಗಳನ್ನು ಹೊತ್ತು ಬರುತ್ತಿದೆ ಸ್ಯಾಂಟ್ರೋ

 ಇದೇ ವರ್ಷ ಅಕ್ಟೋಬರ್ 28ರಂದು ಬಿಡುಗಡೆಗೊಳ್ಳಲಿರುವ ಹ್ಯುಂಡೈ ಇಂಡಿಯಾ ನಿರ್ಮಾಣದ ನೆಕ್ಸ್ಟ್ ಜನರೇಷನ್ ಸ್ಯಾಂಟ್ರೊ ಕಾರುಗಳು ವಿನೂತನ ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ. ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರುಗಳು 1.1 ಲೀಟರ್ ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವು ಆಯ್ಕೆ ರೂಪದಲ್ಲಿ ದೊರೆಯಲಿವೆ. ಕಾರುಗಳ ಆರಂಭಿಕ ಬೆಲೆ ರೂ. 3.50 ಲಕ್ಷದಿಂದ ಟಾಪ್ ಎಂಡ್ ಮಾದರಿಗಳಿಗೆ ರೂ. 4.20 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.  
ನಟ ದುನಿಯಾ ವಿಜಯ್ ಮತ್ತು ತಂಡದಿಂದ ಹಲ್ಲೆ, ಘಟನೆಯನ್ನು ಬಿಚ್ಚಿಟ್ಟ ಮಾರುತಿ ಗೌಡ

ನಟ ದುನಿಯಾ ವಿಜಯ್ ಮತ್ತು ತಂಡದಿಂದ ಹಲ್ಲೆ, ಘಟನೆಯನ್ನು ಬಿಚ್ಚಿಟ್ಟ ಮಾರುತಿ ಗೌಡ

ನಟ ದುನಿಯಾ ವಿಜಯ್ ರಿಂದ ಹಲ್ಲೆಗೆ ಒಳಗಾದ ಮಾರುತಿ ಗೌಡ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ವಿಜಯ್,ಡ್ರೈವರ್ ಪ್ರಸಾದ್,ಬಾಡಿ ಬಿಲ್ಡರ್ ಪ್ರಸಾದ್,ಮಣಿ ಸೇರಿದಂತೆ ಹಲವರಿದ್ರು. ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ವೇಳೆ ವಿಜಿ ಸರ್ ನನ್ನ ಕೇಳಿದ್ರು ಕಿಟ್ಟಿ ಎಲ್ಲಿ ಅಂತ. ಬಂದಿಲ್ಲ ಎಂದೆ. ಆಮೇಲೆ ಹೋದ್ರು. ಸ್ವಲ್ಪ ಹೊತ್ತಿನ ನಂತರ 10ಜನ ಬಂದು,ನನ್ನನ್ನು ಹೊಡೆದು ಕರೆದುಕೊಂಡು ಹೋದ್ರು,ಕಾರ್ ಬಳಿ ವಿಜಿ ಇದ್ದರು. ಇವನ ಕಾರ್ ಗೆ ಎತ್ತಾಕ್ಕೊಳ್ಳಿ ಎಂದ್ರು ವಿಜಿ. ನಾನು ಹೊಡೆದಿದ್ದು ಅಲ್ಲ,ಅಭಿಮಾನಿಗಳು ಹೊಡೆದ್ರು ಹೇಳ್ಬೇಕು ಎಂದು ಒತ್ತಾಯವಾಗಿ ವಿಡಿಯೋ ಮಾಡಿದ್ರು. ಇದನ್ನು ವಿಜಯ್ ಮಗ ಚಿತ್ರೀಕರಿಸಿದ್ದಾರೆಂದಿದ್ದಾರೆ ಮಾರುತಿ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more