Short News

ಕೋರಿಯನ್ ಬ್ಯೂಟಿ ಸೀಕ್ರೆಟ್ಸ್ ಅನಾವರಣ! ಗ್ಲಾಸ್ ಸ್ಕಿನ್... ಇದು ನಿಜನಾ?

ಕೋರಿಯನ್ ಬ್ಯೂಟಿ ಸೀಕ್ರೆಟ್ಸ್ ಅನಾವರಣ! ಗ್ಲಾಸ್ ಸ್ಕಿನ್... ಇದು ನಿಜನಾ?

ನೀವು ಕೊರಿಯಾದ ಮಹಿಳೆಯರನ್ನು ಎಂದಾದರೂ ನೋಡಿದ್ದೀರಾ? ಅವರನ್ನು ನೀವು ಇಷ್ಟಪಡುತ್ತೀರಾ? ನೀವು ಅವರನ್ನು ನೋಡಿದ್ದರೆ ಖಂಡಿತವಾಗಿಯೂ ಇಷ್ಟಪಡುತ್ತೀರಿ! ಏಕೆಂದರೆ ಅವರ ತ್ವಚೆಯು ಅನನ್ಯ ಹೊಳಪು ಹಾಗೂ ಆಕರ್ಷಣೆಯಿಂದ ಕೂಡಿರುತ್ತದೆ. ಅವರ ಚರ್ಮವು ನೈಸರ್ಗಿಕವಾಗಿಯೇ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇವರಲ್ಲಿ ವಯಸ್ಸಾದ ಮಹಿಳೆಯರು ಸಹ ಯೌವನದಲ್ಲಿ ಇರುವಾಗ ಹೊಂದುವಂತಹ ಚರ್ಮದ ಗುಣಮಟ್ಟವನ್ನು ಹೊಂದಿರುತ್ತಾರೆ. ಇದರ ಪರಿಣಾಮದಿಂದಲೇ ಅವರ ಸೌಂದರ್ಯವು ಸದಾ ಆಕರ್ಷಕವಾಗಿ ಬೆಳಗಿರುತ್ತವೆ. ಇವರ ಈ ಸೌಂದರ್ಯದ ಹಿಂದೆ ಅಡಗಿರುವುದು ಅವರ ಪುರಾತನ ಕಾಲದ ಸೌಂದರ್ಯ ಆರೈಕೆಯ ಪದ್ಧತಿ.

ಭಾರತೀಯ ಯೋಧನ ಕತ್ತು ಸೀಳಿ ಬರ್ಬರವಾಗಿ ಕೊಂದ ಪಾಕ್ ಸೈನಿಕರು, ಗಡಿಯಲ್ಲಿ ಹೈ ಅಲರ್ಟ್

ಭಾರತೀಯ ಯೋಧನ ಕತ್ತು ಸೀಳಿ ಬರ್ಬರವಾಗಿ ಕೊಂದ ಪಾಕ್ ಸೈನಿಕರು, ಗಡಿಯಲ್ಲಿ ಹೈ ಅಲರ್ಟ್

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಸೈನಿಕರು ಉದ್ಧಟತನ ಮೆರೆದಿದ್ದು, ಅಂತಾರಾಷ್ಟ್ರೀಯ ಗಡಿ ಪ್ರದೇಶದ ಬಳಿ ಭಾರತೀಯ ಬಿಎಸ್ ಎಫ್ ಯೋಧರೊಬ್ಬರ ಕತ್ತನ್ನು ಬರ್ಬರವಾಗಿ ಸೀಳಿ ಕ್ರೌರ್ಯ ಪ್ರದರ್ಶಿಸಿದ್ದಾರೆ.ರಾಮಗಢ ಸೆಕ್ಟರ್ ನಲ್ಲಿ ಗಸ್ತಿನಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ನರೇಂದರ್ ಕುಮಾರ್ ಅವರ ಕತ್ತು ಸೀಳಿರುವುದಲ್ಲದೇ, ದೇಹಕ್ಕೆ ಮೂರು ಬುಲೆಟ್ ಗಾಯಗಳಿವೆ. ಘಟನೆ ನಡೆದು ಆರು ತಾಸು ಕಳೆದರೂ ಪಾಕಿಸ್ತಾನ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಘಟನೆ ಉಭಯ ದೇಶಗಳ ನಡುವೆ ಆಕ್ರೋಶ ಭುಗಿಲೆಳುವಂತೆ ಮಾಡಿದೆ.
ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್‌

ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್‌

ನಾನು ತಪ್ಪು ಮಾಡಿಲ್ಲ, ಬಿಜೆಪಿಯ ಕುತಂತ್ರಗಳಿಗೆ ಹೆದರಲ್ಲ, ಹೇಡಿಯೂ ಅಲ್ಲ, ತಪ್ಪು ಮಾಡಿದ್ದರೆ ನನ್ನ ನೇಣಿಗೆ ಏರಿಸಲಿ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು. ನವದೆಹಲಿಯಲ್ಲಿ ಬಿಜೆಪಿ ವಕ್ತಾರ ಸಂದೀಪ್ ಪಾತ್ರಾ ಸುದ್ದಿಗೋಷ್ಠಿ ನಡೆಸಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹವಾಲಾ ದಂಧೆಯ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಬಿಜೆಪಿಯ ಸ್ನೇಹಿತರು , ಆಡಳಿತ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಹಾಗೂ ನನ್ನ ಪಕ್ಷಕ್ಕೆ ಮಸಿ ಬಳಿಸುವ ಯತ್ನ ಮಾಡುತ್ತಿದ್ದಾರೆ ಎಂದ ಶಿವಕುಮಾರ್, ಐಟಿ ಸಂಸ್ಥೆಯ

'ಕೆಜಿಎಫ್' ಕೊಟ್ಟ ಬ್ರೇಕಿಂಗ್ : ಟ್ರೈಲರ್ ಮತ್ತು ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್

'ಕೆಜಿಎಫ್' ಕೊಟ್ಟ ಬ್ರೇಕಿಂಗ್ : ಟ್ರೈಲರ್ ಮತ್ತು ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಹಾಕಿರುವ ಸಿನಿಮಾ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿಬರ್ತಿರುವ ಬಹುಕೋಟಿ ವೆಚ್ಚದ ಚಿತ್ರ. ಕೆಜಿಎಫ್ ಚಿತ್ರದ ಟ್ರೈಲರ್ ಮತ್ತು ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂಬುದನ್ನ ಇಂದು (ಸೆಪ್ಟೆಂಬರ್ 16) ಅಧಿಕೃತವಾಗಿ ಘೋಷಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಅದರಂತೆ ಈಗ ಕೆಜಿಎಫ್ ಸಿನಿಮಾ ಯಾವಾಗ ಚಿತ್ರಮಂದಿರಕ್ಕೆ ಬರುತ್ತೆ ಎಂದು ಅನೌನ್ಸ್ ಮಾಡಿದ್ದಾರೆ.ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ದಕ್ಷಿಣ ಚಿತ್ರರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಹಾಕಿರುವ ಸಿನಿಮಾ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more