Short News

ಪ್ರತಿ ಬುಧವಾರ ಶ್ರೀ ಕೃಷ್ಣನ ಮಂತ್ರ ಪಠಿಸಿ, ಎಲ್ಲವೂ ಒಳ್ಳೆಯದಾಗುವುದು!

ಪ್ರತಿ ಬುಧವಾರ ಶ್ರೀ ಕೃಷ್ಣನ ಮಂತ್ರ ಪಠಿಸಿ, ಎಲ್ಲವೂ ಒಳ್ಳೆಯದಾಗುವುದು!

ಅನಾದಿ ಕಾಲದಲ್ಲಿ ಜ್ಞಾನಿಗಳು ಮತ್ತು ಋಷಿಗಳು ವಾರದ ಒಂದು ದಿನದಲ್ಲಿ ನಿರ್ದಿಷ್ಟ ದೇವರನ್ನು ಪೂಜಿಸಬಹುದಾಗಿತ್ತು. ಆ ದಿನದಂದು ಆ ದೇವರಿಗೆ ನಿರ್ದಿಷ್ಟ ಪೂಜೆಯನ್ನು ನೀಡುವುದರಿಂದ ದೇವರ ಅನುಗ್ರಹವನ್ನು ಪಡೆದುಕೊಳ್ಳಬಹುದು ಎಂಬುದು ಅವರ ವಿಚಾರವಾಗಿತ್ತು. ಅಂತೆಯೇ ಬುಧವಾರವನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ. ಅಂತೆಯೇ ಕೃಷ್ಣನ ಕುರಿತಾಗಿರುವ ಹಾಡು, ಕೀರ್ತನೆ ಭಜನೆಗಳನ್ನು ಮಾಡುತ್ತಾರೆ. ಕೃಷ್ಣನನ್ನು ಪೂಜಿಸುವಾಗ ಹೆಚ್ಚು ಬಳಕೆ ಮಾಡುವ ಕೀರ್ತನೆ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಎಂದಾಗಿದೆ.
ವಾಜಪೇಯಿ ಅಸ್ತಂಗತ ಎಂದು ಟ್ವೀಟಿಸಿ, ಡಿಲೀಟ್ ಮಾಡಿದ ಯಡಿಯೂರಪ್ಪ!

ವಾಜಪೇಯಿ ಅಸ್ತಂಗತ ಎಂದು ಟ್ವೀಟಿಸಿ, ಡಿಲೀಟ್ ಮಾಡಿದ ಯಡಿಯೂರಪ್ಪ!

ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿ ನಂತರ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ. ಬೆಳಗ್ಗೆಯಷ್ಟೇ ತ್ರಿಪುರ ರಾಜ್ಯಪಾಲ ತಥಾಗತ ರಾಯ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾಗಿದ್ದಾರೆಂದು ಟ್ವೀಟ್ ಮಾಡಿ ಪ್ರಮಾದ ಎಸಗಿದ್ದರು. ಇದೀಗ ಏಮ್ಸ್ ಆಸ್ಪತ್ರೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಬರುವ ಮೊದಲೇ ಯಡಿಯೂರಪ್ಪ ಅವರೂ ಈ ರೀತಿ ಟ್ವೀಟ್ ಮಾಡಿ ಪ್ರಮಾದ ಎಸಗಿರುವುದು ವಾಜಪೇಯಿ ಅವರ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.
ಕೈತೋಟ ಮಾಡಲು ಕೆಲವು ಸರಳ ಸಲಹೆಗಳು
<iframe width="640" height="360" src="https://rumble.com/embed/v1eimb/" frameborder="0" allowfullscreen></iframe><p>Source: <a target="_blank" href="https://rumble.com/v40p75-quick-and-easy-gardening-tips-rare-life.html">Quick and easy gardening tips | Rare Life</a> by <a target="_blank" href="https://rumble.com/user/Rare/">Rare</a></p>

ಕೈತೋಟ ಮಾಡಲು ಕೆಲವು ಸರಳ ಸಲಹೆಗಳು

ಕೈತೋಟ ಮಾಡಲು ಕೆಲವು ಸರಳ ಸಲಹೆಗಳು ಇಲ್ಲಿದೆ ನೋಡಿ.. ಸಾವಯವಲ್ಲದೆ ಇರುವಂತಹ ವಸ್ತುಗಳನ್ನು ಸಾವಯವಾಗಿರುವ ಕೈದೋಟಕ್ಕೆ ಬಳಸುವಂತಹ ಅತ್ಯುತ್ತಮ ವಿಧಾನ ಇದಾಗಿದೆ. ಪ್ಲಾಸ್ಟಿಕ್ ಮಡಕೆಯನ್ನು ನೇರವಾಗಿ ಸಸ್ಯದ ಹಾಸಿಗೆ ಮೇಲೆ ನೇರವಾಗಿ ಅಳವಡಿಸಿ. ಇದರಿಂದ ಋತು ಬದಲಾದಾಗ ಇದನ್ನು ತೆಗೆಯಲು ಸುಲಭವಾಗುವುದು. ಹೆಚ್ಚಾಗಿ ಕೆಲವೊಂದು ಮನೆಯಲ್ಲಿ ವೈನ್ ಬಳಸಿದ ಬಳಿಕ ಅದರ ಮರದ ಕಾರ್ಕ್ ಹಾಗೆ ಉಳಿದಿರುವುದು. ಇದನ್ನು ತೋಟದಲ್ಲಿ ಹೇಗೆ ಬಳಸಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಹಳೆಯ ಕಾರ್ಕ್ ಗಳನ್ನು ನೀವು ತೋಟದ ಮಣ್ಣಿನಲ್ಲಿ ಹೂತಿಟ್ಟರೆ ಆಗ ಅದು ಸಸ್ಯ ಬೆಳೆಯಲು ಒಳ್ಳೆಯ ಸ್ಥಿತಿ ನಿರ್ಮಾಣ ಮಾಡಿಕೊಡುವುದು.

ಅಜಾತಶತ್ರು, ಭಾರತರತ್ನ ವಾಜಪೇಯಿ  ವ್ಯಕ್ತಿಚಿತ್ರ

ಅಜಾತಶತ್ರು, ಭಾರತರತ್ನ ವಾಜಪೇಯಿ ವ್ಯಕ್ತಿಚಿತ್ರ

ಡಿಸೆಂಬರ್ 25,1924ರಂದು ಜನಿಸಿದ ಅಟಲ್ ಬಿಹಾರಿ ವಾಜಪೇಯಿ ಹದಿಹರೆಯದಲ್ಲಿ ಬ್ರಿಟಿಷರ ವಿರುದ್ಧ ಸಮರಕ್ಕಿಳಿದು ಜೈಲು ಸೇರಿದ್ದರು. ಆವಾಗಲೇ ಆರೆಸ್ಸೆಸ್ ಮತ್ತು ಜನ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. 1942-1945ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ರಾಜಕೀಯಕ್ಕೆ ಪ್ರವೇಶ ಮೊದಲಿಗೆ ಕಮ್ಯುನಿಸ್ಟ್ ಆಗಿದ್ದರು, ತದನಂತರ ಆರೆಸ್ಸೆಸ್ಸ್ ಸೇರಿದರು. 1957ರಲ್ಲಿ ಮೊದಲ ಬಾರಿ ಸಂಸತ್ ಪ್ರವೇಶ. 1996ರಲ್ಲಿ,1998ರಲ್ಲಿ ತಿಂಗಳುಗಳ ಕಾಲ ಪ್ರಧಾನಿಯಾಗಿ ಆಡಳಿತ. 1999ರಲ್ಲಿ ಮತ್ತೆ ಬಂದು 5ವರ್ಷ ಆಡಳಿತ. ಇವರೊಬ್ಬ ಪತ್ರಕರ್ತ,ಉತ್ತಮ ವಾಗ್ಮಿ,ಕವಿ. 1992ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ, 2015ಭಾರತರತ್ನ ಲಭಿಸಿತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more