Short News

ಇದೇ ಕಾರಣಕ್ಕೆ , ಕೆಲವೊಮ್ಮೆ ಪುರುಷರು 'ಸೆಕ್ಸ್' ಬೇಡ ಎನ್ನುತ್ತಾರಂತೆ!

ಇದೇ ಕಾರಣಕ್ಕೆ , ಕೆಲವೊಮ್ಮೆ ಪುರುಷರು 'ಸೆಕ್ಸ್' ಬೇಡ ಎನ್ನುತ್ತಾರಂತೆ!

ಪುರುಷರ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರಬೇಕಾದ ಟೆಸ್ಟೋಸ್ಟೆರಾನ್ ಎಂಬ ಈ ರಸದೂತ "ಲೈಂಗಿಕ ಹಸಿವಿಗೆ" ಪ್ರಮುಖವಾಗಿ ಅಗತ್ಯವಾಗಿದೆ. ಯಾವಾಗ ಪುರುಷರಲ್ಲಿ ಆಸಕ್ತಿ ಕಡಿಮೆಯಾಯಿತೋ ಅಥವಾ ಮೊದಲಿನಷ್ಟು ಸಂಬಂಧದಲ್ಲಿ ರಸಿಕತೆ ಕಾಣದೇ ಹೋಗುತ್ತಿದೆಯೋ ಆಗ ವೈದ್ಯರ ಬಳಿ ತೆರಳುವುದು ಅಗತ್ಯವಾಗಿದೆ. ಕೆಲವೊಮ್ಮೆ ಆರೋಗ್ಯ ಸಂಬಂಧಿತ ಕಾರಣಗಳಿಂದ ಪುರುಷರ ದೇಹದಲ್ಲಿ ಕನಿಷ್ಟ ಅಗತ್ಯಕ್ಕೂ ಕಡಿಮೆ ಪ್ರಮಾಣದಲ್ಲಿ ಟೆಸ್ಟೋಸ್ಟೆರಾನ್ ಉತ್ಪತ್ತಿಯಾಗುತ್ತದೆ. ಹಾಗಾಗಿ ಇವರಿಗೆ ಲೈಂಗಿಕತೆಯಲ್ಲಿ ಆಸಕ್ತಿಯೇ ಉಡುಗಿ ಹೋಗುತ್ತದೆ.

ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ

ಕೇರಳ ಪ್ರವಾಹ: ಒಂದು ತಿಂಗಳ ಸಂಬಳ ದೇಣಿಗೆ ನೀಡಿದ ತೆಲಂಗಾಣ ಡಿಸಿಎಂ

ಕೇರಳ ಸಂತ್ರಸ್ತ ನಿಧಿಗೆ ತಮ್ಮ 1ತಿಂಗಳ ವೇತನವನ್ನು ದೇಣಿಗೆ ನೀಡಲು ತೆಲಂಗಾಣದ ಉಪಮುಖ್ಯಮಂತ್ರಿ ಮೊಹಮ್ಮದ್ ಮಹ್ಮೂದ್ ಅಲಿ ನಿರ್ಧರಿಸಿದ್ದಾರೆ.ತೆಲಂಗಾಣದ ಗೃಹಮಂತ್ರಿ ನಯನಿ ನರಸಿಂಹ ರೆಡ್ಡಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈಗಾಗಲೇ 25ಕೋಟಿ ರೂ.ಗಳ ಚೆಕ್ ಅನ್ನು ಸಂತ್ರಸ್ತರ ಪರಿಹಾರದ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ತೆಲಂಗಾಣ ಸರಕಾರ ಕೇರಳದ ಪ್ರವಾಹಕ್ಕೆ ಯಾವೆಲ್ಲ ರೀತಿಯಲ್ಲಿ ನೆರವು ನೀಡಬಹುದೋ ಆ ಎಲ್ಲ ರೀತಿಯಲ್ಲೂ ಸಹಾಯ ಹಸ್ತ ಚಾಚಿದೆ. ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆ ರೂಪದಲ್ಲಿ ನೀಡುವ ಮೂಲಕ ಕೇರಳ ಉಪಮುಖ್ಯಮಂತ್ರಿ ಅಲಿ ಅವರು ಹೊಸ ಆದರ್ಶಕ್ಕೆ ನಾಂದಿ ಹಾಡಿದ್ದಾರೆ.
ಕಳಪೆ ಗುಣಮಟ್ಟದ 'ಪವರ್ ಬ್ಯಾಂಕ್' ಬಳಸಿದರೆ ಏನಾಗುತ್ತದೆ ಗೊತ್ತಾ?

ಕಳಪೆ ಗುಣಮಟ್ಟದ 'ಪವರ್ ಬ್ಯಾಂಕ್' ಬಳಸಿದರೆ ಏನಾಗುತ್ತದೆ ಗೊತ್ತಾ?

ಸ್ಮಾರ್ಟ್‌ಫೋನ್‌ಗಳು ಹೆಚ್ಚು ಬ್ಯಾಟರಿಯನ್ನು ಸ್ವಾಹ ಮಾಡುವುದರಿಂದ ಎಲ್ಲರಿಗೂ ಒಂದೊಂದು ಪವರ್‌ಬ್ಯಾಂಕ್ ಅನ್ನು ಖರೀದಿಸುವ ಸೌಭಾಗ್ಯ ಒದಗಿಬಂದಿರುತ್ತದೆ. ಮನೆಯಲ್ಲಿಯೇ ಮೊಬೈಲ್ ಬಳಕೆಯ ವೇಳೆ, ಪ್ರಯಾಣದ ವೇಳೆ, ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಅತ್ಯಗತ್ಯ ಎಂಬುದು ಎಲ್ಲರಿಗೂ ಅನಿಸಿರುವುದು ಸಹ ಪವರ್ ಬ್ಯಾಂಕ್ ಅಗತ್ಯತೆಯನ್ನು ತಿಳಿಸುತ್ತದೆ.ಮೇಲ್ನೋಟಕ್ಕೆ ಪವರ್ ಬ್ಯಾಂಕ್ ಬಳಕೆ ಬಹಳ ಸುಲಭವಾಗಿ ಕಂಡರೂ ಸಹ ನಾವು ಬಳಸುವ ಪವರ್ ಬ್ಯಾಂಕ್ ಸುರಕ್ಷಿತೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

ನಂಜನಗೂಡಿನ ಕಪಿಲೆಯಲ್ಲಿ ಈಜಲು ಹೋದವನು ಕಣ್ಮರೆ

ನಂಜನಗೂಡಿನ ಕಪಿಲೆಯಲ್ಲಿ ಈಜಲು ಹೋದವನು ಕಣ್ಮರೆ

ಈಜಲು ಹೋದ ಯುವಕನೊಬ್ಬ ಮರಳಿ ದಡ ಸೇರದೆ ಕಣ್ಮರೆಯಾಗಿರುವ ಘಟನೆ ಕಪಿಲ ನದಿಯಲ್ಲಿ ನಡೆದಿದೆ.

ನಂಜನಗೂಡಿನ ಕನಕ ನಗರ ಬಡಾವಣೆಯ ನಿವಾಸಿ ದಿ.ನಂಜಪ್ಪರವರ ಪುತ್ರ ಸಿದ್ದರಾಜು (23) ಈಜಲು ಹೋಗಿ ಕಣ್ಮರೆಯಾಗಿರುವ ಯುವಕ. ಈತ ನಂಜನಗೂಡಿನ ದೇವರಾಜ ಅರಸು ಸೇತುವೆ ಬಳಿಯಿಂದ ಈಜಲು ಹೋಗಿ ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದರಾಜು ಭಾನುವಾರ ಕೆಲಸಕ್ಕೆ ರಜೆ ಇದ್ದ ಕಾರಣದಿಂದ ತನ್ನ ಅಕ್ಕ ಮಂಜುಳಾಳನ್ನು ಆಸ್ಪತ್ರೆಗೆ ತೋರಿಸಿ ಮನೆಗೆ ಬಿಟ್ಟು ಕಪಿಲಾ ನದಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more