Short News

ಈ ದೇವಸ್ಥಾನದ ವಿಗ್ರಹಗಳು ರಾತ್ರಿಯ ವೇಳೆ ಪರಸ್ಪರ ಮಾತನಾಡುತ್ತವೆ!!

ಈ ದೇವಸ್ಥಾನದ ವಿಗ್ರಹಗಳು ರಾತ್ರಿಯ ವೇಳೆ ಪರಸ್ಪರ ಮಾತನಾಡುತ್ತವೆ!!

ಬಿಹಾರದ ಬಸ್ಟರ್ ಎಂಬಲ್ಲಿರುವ ರಾಜರಾಜೇಶ್ವರಿ ತ್ರಿಪುರ ಸುಂದರಿ ದೇವಸ್ಥಾನವು ನಿತ್ಯವೂ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಗುರ್ಗಾದೇವಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ವಿವಿಧ ಆಚಾರ ವಿಚಾರಗಳಿರುವುದು ವಿಶೇಷ. ತ್ರಿಗರಾ, ಧುಮಾವತಿ, ಬಾಗುಲುಖಿ, ತಾರಾ, ಕಾಳಿ, ಚಿನ್ ಮಸ್ತಾ, ಶೋಡಸಿ, ಮಾತಂಗಿ, ಸೇರಿದಂತೆ ರಾಜೇಶ್ವರಿ ದೇವಿಯ ವಿವಿಧ ಅವತಾರಗಳ ವಿಗ್ರಹಗಳು ಇಲ್ಲಿವೆ. ದೇಗುಲವನ್ನು ಭವಾನಿ ಮಿಶ್ರಾ ಎನ್ನುವವರು ಸ್ಥಾಪಿಸಿದ್ದರು ಎಂದು ಹೇಳಲಾಗುತ್ತದೆ. ದೇವಾಲಯದ ರಾಜರಾಜೇಶ್ವರಿ ತ್ರಿಪುರ ಸುಂದರಿ ವಿಗ್ರಹವನ್ನು ಹೊರತುಪಡಿಸಿ ಉಳಿದ ವಿಗ್ರಹಗಳು ಪರಸ್ಪರ ಮಾತನಾಡುತ್ತವೆ ಎಂದು ಹೇಳಲಾಗುವುದು.

ಬೆಳ್ಳುಳ್ಳಿ ತಿಂದರೂ ಸಾಕು ತೂಕ ಇಳಿಸಬಹುದಂತೆ!

ಬೆಳ್ಳುಳ್ಳಿ ತಿಂದರೂ ಸಾಕು ತೂಕ ಇಳಿಸಬಹುದಂತೆ!

ಬೆಳ್ಳುಳ್ಳಿಯಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಸೆಲೆನಿಯಂ ಸಮೃದ್ಧವಾಗಿದೆ. ಇದರಲ್ಲಿ ಕೆಲವೊಂದು ಖನಿಜಾಂಶಗಳಾದ ಫ್ರೊಸ್ಪರಸ್, ಪೊಟಾಶಿಯಂ, ಕ್ಯಾಲ್ಸಿಯಂ, ಕಬ್ಬಿನ ಮತ್ತು ತಾಮ್ರವಿದೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎನ್ನುವ ಅಂಶದಿಂದಾಗಿ ತೂಕ ಇಳಿಸಲು ಇದು ನೆರವಾಗಲಿದೆ ಎಂದು ಕೊರಿಯಾದ ಅಧ್ಯಯನವೊಂದು ತಿಳಿಸಿದೆ. 2011ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಈ ಅಧ್ಯಯನ ವರದಿ ಪ್ರಕಟಿಸಲಾಗಿದೆ. ಈ ಅಧ್ಯಯನವು ಬೆಳ್ಳುಳ್ಳಿ ಮತ್ತು ಕೊಬ್ಬು ಕರುಗುವ ಮಧ್ಯೆ ಸಂಬಂಧ ಕಂಡುಕೊಂಡಿದೆ. ಹೆಚ್ಚು ಹಳೆ ಬೆಳ್ಳುಳ್ಳಿ ಸಾರ ಮತ್ತು ವ್ಯಾಯಾಮದಿಂದ ತೂಕ ಕಳೆದುಕೊಳ್ಳಲು ಸಾಧ್ಯವಾಗಲಿದೆ.
ಬದನೆಯಲ್ಲಿರುವಂತಹ ಆರೋಗ್ಯ ಲಾಭಗಳು

ಬದನೆಯಲ್ಲಿರುವಂತಹ ಆರೋಗ್ಯ ಲಾಭಗಳು

ಬದನೆಕಾಯಿಯಲ್ಲಿರುವ ಯಥೇಚ್ಛವಾದ ನಾರು ಮತ್ತು ಸೋಡಿಯಂಗಳು ರಕ್ತವು ಅಧಿಕ ಪ್ರಮಾಣದ ಗ್ಲೂಕೋಸನ್ನು ಹೀರಿಕೊಳ್ಳುವುದನ್ನು ತಡೆಯುತ್ತವೆ. ಬದನೆಕಾಯಿಯಲ್ಲಿ ನಾರಿನಾಂಶವು ಅತ್ಯಧಿಕವಾಗಿದ್ದು, ಇದು ಜೀರ್ಣಕ್ರಿಯೆ ಮತ್ತು ದೇಹವು ಸಕ್ಕರೆ ಅಂಶವನ್ನು ಹೀರಿಕೊಳ್ಳುವ ಪ್ರಕ್ರಿಯೆನ್ನು ನಿಧಾನಗೊಳಿಸಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡುವುದು. ಬದನೆಯಲ್ಲಿ ನಾರಿನಾಂಶ ಅತ್ಯಧಿಕವಾಗಿದೆ ಮತ್ತು ಕ್ಯಾಲರಿ ಕಡಿಮೆ ಇದೆ. ಇದು ತೂಕ ಇಳಿಸಿಕೊಳ್ಳಲು ತುಂಬಾ ಪರಿಣಾಮಕಾರಿ ಆಹಾರ. ಬದನೆಯನ್ನು ಚೆನ್ನಾಗಿ ಬೇಯಿಸಿದ್ದರೆ, ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ.

ಭಾರತೀಯರೇ ತಯಾರಿಸಿದ ಈ ಆಪ್‌ ಇದ್ರೆ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿಯಾಗಲ್ಲ..!

ಭಾರತೀಯರೇ ತಯಾರಿಸಿದ ಈ ಆಪ್‌ ಇದ್ರೆ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗ ಖಾಲಿಯಾಗಲ್ಲ..!

ಸ್ಮಾರ್ಟ್‌ಫೋನ್‌ಗಳ ಬಹು ದೊಡ್ಡ ಸಮಸ್ಯೆ ಎಂದರೆ ಅತ್ಯಂತ ಕಡಿಮೆ ಬ್ಯಾಟರಿ ಬಾಳಿಕೆ ಎನ್ನುವುದು. ವೇಗದ ಪ್ರೋಸೆಸರ್‌ಗಳು, ಹೆಚ್ಚಿನ RAM ಜೊತೆಗೆ ಗ್ರಾಫಿಕ್ಸ್ ತುಂಬಿರುವ ಆಟಗಳು ಇವೇಲ್ಲ ಸೇರಿಕೊಂಡು ಸ್ಮಾರ್ಟ್‌ಫೋನ್ ಬ್ಯಾಟರಿಯೂ ಬೇಗನೇ ಖಾಲಿಯಾಗುವಂತೆ ಮಾಡುತ್ತವೆ. ಎಷ್ಟು ದೊಡ್ಡ ಪ್ರಮಾಣದ ಬ್ಯಾಟರಿಯನ್ನು ನೀಡಿದರೂ ಸಹ ಬಾಳಿಕೆ ಬರುವುದಿಲ್ಲ, ಒಂದು ದಿನದಲ್ಲಿಯೇ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಖಾಲಿಯಾಗಿರುತ್ತದೆ. ಈ ಹಿನ್ನಲೆಯಲ್ಲಿ ಸಂಶೋಧಕರು ಹೊಸದೊಂದು ಆಪ್‌ ಅನ್ನು ಅಭಿವೃದ್ಧಿ ಮಾಡಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more