Short News

ಶಿವನ ಅನುಗ್ರಹ ಪಡೆಯಲು ಸೋಮವಾರದ ಶಿವನ ಪೂಜೆ ಹೀಗೆ ಮಾಡಬೇಕು

ಶಿವನ ಅನುಗ್ರಹ ಪಡೆಯಲು ಸೋಮವಾರದ ಶಿವನ ಪೂಜೆ ಹೀಗೆ ಮಾಡಬೇಕು

ಭಕ್ತಿಯಿಂದ ಸೋಮವಾರ ಶಿವನನ್ನು ಆರಾಧಿಸಿದರೆ ಭಗವಂತ ಅವರ ಮನದ ಅಭೀಷ್ಟೆಗಳನ್ನು ನೆರವೇರಿಸಿಕೊಡುತ್ತಾರೆ ಎಂಬುದು ಜನಜನಿತವಾದ ಮಾತಾಗಿದೆ. ಆದರೆ ಶಿವ ಪೂಜೆಯನ್ನು ನೀವು ಮಾಡುವ ವೇಳೆಯಲ್ಲಿ ಕೆಲವೊಂದು ಸಿದ್ಧಾಂತಗಳನ್ನು ಅನುಸರಿಸಬೇಕಾಗುತ್ತದೆ. ಶಿವ ಪೂಜೆಯಲ್ಲಿ ಬಿಲ್ವ ಪತ್ರೆಯನ್ನು ದೇವರಿಗೆ ಅರ್ಪಿಸಬೇಕು. ಬಿಲ್ವ ಪತ್ರೆಯು ಶಿವನ ಮೂರು ಕಣ್ಣುಗಳನ್ನು ಸೂಚಿಸುತ್ತದೆ. ಅಂತೆಯೇ ಅವರ ತ್ರಿಶೂಲವು ಹಿಂದಿನ ಪಾಪಗಳನ್ನು ತೊಳೆದು ಹಾಕುತ್ತದೆ. ಅಂತೆಯೆ ಪೂಜೆಗಾಗಿ ಬಿಲ್ವ ಪತ್ರೆಯನ್ನು ಕೊಯ್ಯಲು ಕೆಲವೊಂದು ದಿನಗಳಿದ್ದು ಆ ದಿನ ಮಾತ್ರವೇ ನೀವು ಮರದಿಂದ ಬಿಲ್ವ ಪತ್ರೆಯನ್ನು ಕೊಯ್ಯಬೇಕಾಗುತ್ತದೆ.

ಉಪಾಸನೆಯಂತೆ, ಪೂಜೆಯಂತೆ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಫಲ

ಉಪಾಸನೆಯಂತೆ, ಪೂಜೆಯಂತೆ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಫಲ

ನಾವು ದಿನ ನಿತ್ಯವೂ ಒಂದಲ್ಲಾ ಒಂದು ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತೇವೆ. ನಾವು ಏನನ್ನು ಮಾಡುತ್ತೇವೆಯೋ ಅದನ್ನು "ಕರ್ತವ್ಯ" ಎಂಬಂತೆ ಭಾವಿಸಿ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇ ಆದರೆ ಅದರಿಂದ ಒಳ್ಳೆಯ ಪ್ರತಿಫಲ ದೊರೆಯುತ್ತದೆ ಎಂಬುದನ್ನು ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದಾರೆ.

ಆಧ್ಯಾತ್ಮದ ವಿಚಾರವಾಗಿ ಹೇಳುವುದಾದರೆ ಕರ್ತವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ವಾಮಿ ವಿವೇಕಾನಂದರು ಕರ್ಮಯೋಗದಲ್ಲಿ ಕರ್ತವ್ಯದ ಬಗ್ಗೆ ಒಂದಷ್ಟು ಹೇಳಿದ್ದಾರೆ. ಕರ್ತವ್ಯ ಎಂದರೆ ಏನು? ಎಂಬುವುದರ ಬಗ್ಗೆಯೂ ಅವರು ವಿವರಿಸಿದ್ದಾರೆ.

ಅಂಬರೀಶ್ ಸ್ಟೈಲ್ ನಲ್ಲೇ 'ಅಂಬಿ'ಗೆ ವಿಶ್ ಮಾಡಿದ ನಟ

ಅಂಬರೀಶ್ ಸ್ಟೈಲ್ ನಲ್ಲೇ 'ಅಂಬಿ'ಗೆ ವಿಶ್ ಮಾಡಿದ ನಟ

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುಮಾರು ವರ್ಷದ ನಂತರ ಅಂಬರೀಶ್ ಅವರು ನಾಯಕನಾಗಿ ಕಮ್ ಬ್ಯಾಕ್ ಮಾಡ್ತಿರುವ ಸಿನಿಮಾ ಇದಾಗಿದ್ದು, ಇಡೀ ಸ್ಯಾಂಡಲ್ ವುಡ್ ಅಭಿಮಾನಿಗಳು ಮತ್ತು ಸಿನಿತಾರೆಯರು ಕೂಡ ಖುಷ್ ಆಗಿದ್ದಾರೆ. 'ಮಂಡ್ಯದ ಗಂಡು' ಮತ್ತೆ ತೆರೆಮೇಲೆ ಘರ್ಜಿಸಲಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ನಟ ರವಿಶಂಕರ್, ಅಂಬರೀಶ್ ಸ್ಟೈಲ್ ನಲ್ಲೇ ಚಿತ್ರಕ್ಕೆ ಶುಭ ಕೋರಿದ್ದಾರೆ.
ಹಿಂದು ಮಹಾಸಾಗರದ ಅಲೆಗೆ ಸಿಕ್ಕ ಅಭಿಲಾಶ್ ರಕ್ಷಣೆಗೆ ಶತಪ್ರಯತ್ನ

ಹಿಂದು ಮಹಾಸಾಗರದ ಅಲೆಗೆ ಸಿಕ್ಕ ಅಭಿಲಾಶ್ ರಕ್ಷಣೆಗೆ ಶತಪ್ರಯತ್ನ

ಹಿಂದು ಮಹಾಸಾಗರದಲ್ಲಿ ನಡೆಯುತ್ತಿರುವ ಗೋಲ್ಡ್ ನ ಗ್ಲೋಬ್ ರೇಸ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಭಿಲಾಶ್ ಟಾಮಿ ಅವರು ಬಲವಾದ ಅಲೆಗಳ ಹೊಡತಕ್ಕೆ ಸಿಕ್ಕಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಭಾರತೀಯ ನೌಕಾಸೇನೆಯ ಕಮಾಂಡರ್ ಆಗಿರುವ ಅಭಿಲಾಶ್ ಅವರ ಹಾಯಿದೋಣಿ 'ಥುರಿಯಾ' ಬಲವಾದ ಅಲೆಗೆ ಸಿಕ್ಕ ಪರಿಣಾಮ ದೋಣಿಯ ಹಿಂಭಾಗ ಜಖಂಗೊಂಡಿತ್ತು. ಅಲೆಯ ರಭಸ ಅವರನ್ನು ಬಹು ದೂರಕ್ಕೆ ಎಸೆದಿರುವ ಸಂಭವವಿದ್ದು, ಅವರು ಆಸ್ಟ್ರೇಲಿಯದ ಪರ್ಥ್ ಬಳಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more