Short News

ದ್ವಾದಶ ರಾಶಿಗಳ (ಆಗಸ್ಟ್ 26) ಇಂದಿನ ದಿನಭವಿಷ್ಯ

ದ್ವಾದಶ ರಾಶಿಗಳ (ಆಗಸ್ಟ್ 26) ಇಂದಿನ ದಿನಭವಿಷ್ಯ

ಮೇಷ:ಆರೋಗ್ಯದ ಮೇಲೆ ಹೆಚ್ಚಿನ ಗಮನ ಅಗತ್ಯ. ವೃಷಭ:ವ್ಯಾಪಾರಸ್ಥರಿಗೆ ಉತ್ತಮ ದಿನ. ಮಿಥುನ:ದೂರ ಪ್ರಯಾಣ ಮುಂದೂಡುವುದು ಒಳಿತು.  ಕಟಕ:ಸಹೋದರರ ಆಗಮನ. ಮಹಿಳೆಯರಿಗೆ ಧನಲಾಭ. ಸಿಂಹ:ಹಲವು ದಿನಗಳ ಹಿಂದೆಯೇ ಪ್ರಾರಂಭಿಸಿದ್ದ ಕೆಲಸ ಮುಗಿಯಲಿದೆ. ಕನ್ಯಾ:ನಿಮ್ಮ ಮೌನದಿಂದ ವಿಶೇಷ ಕಾರ್ಯ ನೆರವೇರಲಿದೆ. ತುಲಾ:ವಿದ್ಯಾರ್ಥಿಗಳಿಗೆ ವಿಶೇಷವಾದ ದಿನ. ವೃಶ್ಚಿಕ:ಧನಹಾನಿಯಾಗುವ ಸಾಧ್ಯತೆ . ಧನು:ಬಂಧು-ಮಿತ್ರರೊಂದಿಗೆ ಮನಸ್ತಾಪ ಉಂಟಾಗಬಹುದು.  ಮಕರ:ನೀರು ಮತ್ತು ಗಾಳಿಯಿಂದ ದೂರ ಇರುವುದು ಒಳಿತು. ಕುಂಭ:ಧನನಷ್ಟದಿಂದಾಗಿ ಕಷ್ಟ ಉಂಟಾಗಲಿದೆ. ಮೀನ:ಆಭರಣ ಖರೀದಿ ಮಾಡುವಿರಿ.
ನನ್ನನ್ನು ಹರಕೆಯ ಕುರಿಯನ್ನಾಗಿ ಮಾಡಲಾಯಿತು: ಮ್ಯಾಥ್ಯೂಸ್ ಆರೋಪ

ನನ್ನನ್ನು ಹರಕೆಯ ಕುರಿಯನ್ನಾಗಿ ಮಾಡಲಾಯಿತು: ಮ್ಯಾಥ್ಯೂಸ್ ಆರೋಪ

ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ದುರ್ಬಲ ತಂಡಗಳ ವಿರುದ್ಧ ದಯನೀಯ ಸೋಲು ಕಂಡು ಲೀಗ್ ಹಂತದಲ್ಲಿಯೇ ಹೊರಬಿದ್ದ ಕಾರಣಕ್ಕೆ ಶ್ರೀಲಂಕಾ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್ ಅವರ ತಲೆದಂಡ ನೀಡಲಾಗಿದೆ. ಮ್ಯಾಥ್ಯೂಸ್ ರನ್ನು ವಜಾಗೊಳಿಸಿ ದಿನೇಶ್ ಚಂಡಿಮಾಲ್ ಅವರಿಗೆ ಏಕದಿನ ಕ್ರಿಕೆಟ್‌ನ ನಾಯಕತ್ವವನ್ನೂ ನೀಡಿದೆ. 2019ರ ವಿಶ್ವಕಪ್ ಕ್ರಿಕೆಟ್‌ಗೆ ಕೆಲವೇ ಪಂದ್ಯಗಳು ಬಾಕಿ ಇರುವಾಗಲೇ ತಂಡದ ನಾಯಕತ್ವದ ಜವಾಬ್ದಾರಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯತ್ತ ಹರಿಹಾಯ್ದಿರುವ ಮ್ಯಾಥ್ಯೂಸ್, ತಮ್ಮನ್ನು ಇಲ್ಲಿ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ಕರಾವಳಿ ಜನರಿಗೆ ಬಿಯರ್ ಕೊಡಲ್ಲ ಅಂತಿದೆ ಅಬಕಾರಿ ಇಲಾಖೆ!

ಕರ್ನಾಟಕ ಕರಾವಳಿ ಜನರಿಗೆ ಬಿಯರ್ ಕೊಡಲ್ಲ ಅಂತಿದೆ ಅಬಕಾರಿ ಇಲಾಖೆ!

ಕರಾವಳಿ ಜನರಿಗೆ ಬಿಯರ್ ಕೊಡುವುದಿಲ್ಲ ದೇಸಿ ಮದ್ಯವನ್ನೇ ಮಾರಾಟ ಮಾಡಿ ಎಂದು ಅಬಕಾರಿ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ,ಉಡುಪಿ ಸೇರಿದಂತೆ ಕರಾವಳಿಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳೇ ಬಿಯರ್‌ ನ ಅಭಾವ ಸೃಷ್ಟಿಸಿ, ದುಬಾರಿ ಬೆಲೆಯ ಮದ್ಯ ಸೇವನೆಗೆ ಪ್ರಚೋದಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದೆ. ಹೆಚ್ಚಿನ ಅಬಕಾರಿ ಆದಾಯಗಳಿಸುವ ಉದ್ದೇಶದಿಂದ ದೇಶಿ ಮದ್ಯ ಮಾರಾಟಕ್ಕೆ ಸರ್ಕಾರವೇ ಟಾರ್ಗೆಟ ನಿಗದಿ ಮಾಡುವ ಮೂಲಕ ಕರಾವಳಿಯಲ್ಲಿ ಬಿಯರ್ ಗೆ ಬರ ಸೃಷ್ಟಿಯಾಗಿದೆ.100ಬಾಕ್ಸ್ ಮದ್ಯವನ್ನು ಖರೀದಿ ಮಾಡಿದರೆ 40ರಿಂದ 50ಬಾಕ್ಸ್ ಬಿಯರ್ ನೀಡುತ್ತಿದ್ದಾರೆ, ಮದ್ಯದ ದರ ಹೆಚ್ಚಳದಿಂದ ಜನರು ಬಿಯರ್‌ನ್ನೇ ಇಷ್ಟಪಡುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೂ ಎಎಪಿಯಿಂದ ಸ್ಪರ್ಧೆ

ಮಧ್ಯಪ್ರದೇಶದಲ್ಲಿ 230 ಸ್ಥಾನಗಳಿಗೂ ಎಎಪಿಯಿಂದ ಸ್ಪರ್ಧೆ

ಮಧ್ಯಪ್ರದೇಶದಲ್ಲಿ ತನ್ನ ಅಸ್ತಿತ್ವ ಬೆಳೆಸಿಕೊಳ್ಳಲು ಹವಣಿಸುತ್ತಿರುವ ಆಮ್ ಆದ್ಮಿ ಪಕ್ಷ(ಎಎಪಿ)ವು ಹೊಸ ಹುರುಪಿನೊಂದಿಗೆ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಮಧ್ಯಪ್ರದೇಶದ ಎಲ್ಲಾ 230ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಶೇ.80ಟಿಕೆಟ್ ಗಳನ್ನು ಹೊಸಬರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಎಎಪಿ ವಕ್ತಾರರು ಹೇಳಿದ್ದಾರೆ. 2012ರಲ್ಲಿ ಸ್ಥಾಪನೆಯಾದ ಎಎಪಿ,2013ರ ಮಧ್ಯಪ್ರದೇಶ ಚುನಾವಣೆಯಲ್ಲಿ ಪಾಲ್ಗೊಂಡಿರಲಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿ,29ಸ್ಥಾನಗಳನ್ನು ಕಳೆದುಕೊಂಡಿತ್ತು. ಅನೇಕ ಅಭ್ಯರ್ಥಿಗಳು ಠೇವಣಿ ಕೂಡಾ ಕಳೆದುಕೊಂಡರು. ಈಗಾಗಲೆ 119ಸ್ಥಾನಗಳಿಗೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more