Short News

ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಗುಣ-ನಡತೆ ಹೇಗಿರುತ್ತದೆ ಗೊತ್ತಾ?

ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಗುಣ-ನಡತೆ ಹೇಗಿರುತ್ತದೆ ಗೊತ್ತಾ?

ಪ್ರತಿಯೊಬ್ಬ ವ್ಯಕ್ತಿಯು ತಾನು ಹುಟ್ಟಿದ ಘಳಿಗೆ ಹಾಗೂ ದಿನಕ್ಕೆ ಅನುಗುಣವಾಗಿ ವಿಶೇಷ ಗುಣ ಲಕ್ಷಣಗಳನ್ನು ಹೊಂದಿರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳಲ್ಲಿ ಜನಿಸಿದ ವ್ಯಕ್ತಿಗಳು ಬಹಳ ಕುತೂಹಲ ಹಾಗೂ ವಿಭಿನ್ನತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಸಾಮಾನ್ಯವಾಗಿ ಸೂರ್ಯ ಮತ್ತು ಚಂದ್ರರಿಂದ ಆಳಲ್ಪಟ್ಟಿರುತ್ತಾರೆ. ಹಾಗಾಗಿ ಇವರ ಅನನ್ಯ ಗುಣಲಕ್ಷಣಗಳು ಇತರರಿಗಿಂತ ಕೊಂಚ ಭಿನ್ನವಾಗಿರುತ್ತದೆ. ಆಗಸ್ಟ್ ಅಲ್ಲಿ ಜನಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ಉತ್ಸಾಹ ಪೂರ್ಣ ಶಕ್ತಿಯಿಂದ ಆಕರ್ಷಿಸಲ್ಪಡುತ್ತಾರೆ. ಉತ್ತಮ ಬೌದ್ಧಿಕ ಕಾಂತಿಯನ್ನು ಹೊಂದಿರುತ್ತಾರೆ.

ನಂಜನಗೂಡಿನ ಕಪಿಲೆಯಲ್ಲಿ ಈಜಲು ಹೋದವನು ಕಣ್ಮರೆ

ನಂಜನಗೂಡಿನ ಕಪಿಲೆಯಲ್ಲಿ ಈಜಲು ಹೋದವನು ಕಣ್ಮರೆ

ಈಜಲು ಹೋದ ಯುವಕನೊಬ್ಬ ಮರಳಿ ದಡ ಸೇರದೆ ಕಣ್ಮರೆಯಾಗಿರುವ ಘಟನೆ ಕಪಿಲ ನದಿಯಲ್ಲಿ ನಡೆದಿದೆ.

ನಂಜನಗೂಡಿನ ಕನಕ ನಗರ ಬಡಾವಣೆಯ ನಿವಾಸಿ ದಿ.ನಂಜಪ್ಪರವರ ಪುತ್ರ ಸಿದ್ದರಾಜು (23) ಈಜಲು ಹೋಗಿ ಕಣ್ಮರೆಯಾಗಿರುವ ಯುವಕ. ಈತ ನಂಜನಗೂಡಿನ ದೇವರಾಜ ಅರಸು ಸೇತುವೆ ಬಳಿಯಿಂದ ಈಜಲು ಹೋಗಿ ಕಪಿಲಾ ನದಿಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದರಾಜು ಭಾನುವಾರ ಕೆಲಸಕ್ಕೆ ರಜೆ ಇದ್ದ ಕಾರಣದಿಂದ ತನ್ನ ಅಕ್ಕ ಮಂಜುಳಾಳನ್ನು ಆಸ್ಪತ್ರೆಗೆ ತೋರಿಸಿ ಮನೆಗೆ ಬಿಟ್ಟು ಕಪಿಲಾ ನದಿ

ಜಿಯೋ ಗಿಗಾಫೈಬರ್‌ಗೆ ಟಾಂಗ್‌ ನೀಡಲು ಏರ್‌ಟೆಲ್ ರೆಡಿ..!

ಜಿಯೋ ಗಿಗಾಫೈಬರ್‌ಗೆ ಟಾಂಗ್‌ ನೀಡಲು ಏರ್‌ಟೆಲ್ ರೆಡಿ..!

ಏರ್‌ಟೆಲ್ ಮಾತ್ರ ಜಿಯೋಗೆ ಎದೆಯೊಡ್ಡಲು ಸಿದ್ಧವಾಗಿದ್ದು, ಜಿಯೋ ಗಿಗಾಫೈಬರ್‌ಗೆ ಟಾಂಗ್ ನೀಡಲು ರೆಡಿಯಾಗಿದೆ. ಹೌದು, ಏರ್‌ಟೆಲ್‌ ತನ್ನ ಬ್ರಾಡ್‌ಬ್ಯಾಂಡ್‌ ಗ್ರಾಹಕರಿಗೆ ವಿಧಿಸಿದ್ದ ಡೇಟಾ ಮಿತಿ ನೀತಿಯನ್ನು 20 ಮಾರುಕಟ್ಟೆಗಳಲ್ಲಿ ರದ್ಧುಪಡಿಸಿದ್ದು, ಆ ಪ್ಲಾನ್‌ಗಳನ್ನು ಅನ್‌ಲಿಮಿಟೆಡ್‌ ಡೇಟಾ ಪ್ಲಾನ್‌ಗಳನ್ನಾಗಿ ಪರಿವರ್ತಿಸಿದ್ದು, ಜಿಯೋದ ಮುಂದಿನ ಗಿಗಾಫೈಬರ್‌ಗೆ ಈಗಿನಿಂದಲೇ ಏರ್‌ಟೆಲ್‌ ಸ್ಪರ್ಧೆಯೊಡ್ಡುತ್ತಿದೆ.

'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು

'ರಂಗಶಂಕರ'ದಲ್ಲಿ ಕಾಫಿ ಕುಡಿಯುತ್ತಿದ್ದ ಹುಡುಗಿ ಅದೇ ದಿನ ನಟಿಯಾಗಿ ಬಿಟ್ಟಳು

ಕನ್ನಡದ ನಟಿ ನಿಖಿಲಾ ಸುಮನ್‌ಗೆ ಇದ್ದಕ್ಕಿದ್ದ ಹಾಗೆ ಒಂದು ಅವಕಾಶ ಸಿಕ್ಕಿತು. 'ಶ್ರೀನಿವಾಸ ಕಲ್ಯಾಣ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ನಟಿ ನಿಖಿಲಾ ಸುಮನ್ ಸದ್ಯ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾರೆ. 'ಶನಿ' ಧಾರಾವಾಹಿ ಮೂಲಕ ನಿಖಿಲಾ ಮನೆ ಮಾತಾಗಿದ್ದಾರೆ. ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡಿರುವ ಅವರು ಒಮ್ಮೆ ನಾನು ರಂಗಶಂಕರದಲ್ಲಿ ಕಾಫಿ ಕುಡಿಯುತ್ತ ಇದ್ದೆ. ಶಂಕರ್ ಗಣೇಶ್ ಅಂತ ನನ್ನ ಫ್ರೆಂಡ್ ಬಂದು ಇದ್ದಕ್ಕಿದ್ದ ಹಾಗೆ ಒಂದು ಸ್ಟೂಡಿಯೊಗೆ ಕರೆದುಕೊಂಡು ಹೋದರು. ಅಲ್ಲಿಯೇ 'ಶ್ರೀನಿವಾಸ ಕಲ್ಯಾಣ' ಚಿತ್ರದ ಆಡಿಷನ್ ಕೊಟ್ಟೆ ಎಂದು ಹೀಗೆ ಚಿತ್ರರಂಗಕ್ಕೆ ಬಂದೆ ಎಂದು ತಾವು ಆಯ್ಕೆ ಆದ ಕಥೆಯನ್ನು ಹೇಳಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more